ಜಾಗತಿಕ ಜನಸಂಖ್ಯೆಯು 800 ಕೋಟಿಯನ್ನು ತಲುಪಿರುವಂತೆಯೇ, ಒಂದು ಕಾಲದಲ್ಲಿ ಜಾಗತಿಕ ಜನಸಒಂಖ್ಯಾ ಬೆಳವಣಿಗೆಗೆ ಪ್ರಮುಖವಾಗಿ ದೇಣಿಗೆ ನೀಡುತ್ತಿದ್ದ ಭಾರತದ ಜನಸಂಖ್ಯಾ ಬೆಳವಣಿಗೆಯು ನಿಧಾನಗೊಳ್ಳುತ್ತಿದೆ.
ಭಾರತದಲ್ಲಿ ಸಂತಾನೋತ್ಪತ್ತಿ ದರವು ಕಡಿಮೆಯಾಗುತ್ತಿರುವಂತೆಯೇ, ಒಡಿಶಾವು ತನ್ನ ಜನಸಂಖ್ಯಾ ನೀತಿಯನ್ನು ಮರುಪರಿಶೀಲಿಸಲು ಮುಂದಾಗಿದೆ.
ಈ ನೀತಿಯು ಎರಡಕ್ಕಿಂತ ಹೆಚ್ಚಿನ ಮಕ್ಕಳನ್ನು ಹೊಂದದತೆ ಕುಟುಂಬಗಳನ್ನು ಪ್ರೋತ್ಸಾಹಿಸುತ್ತಿದೆ.
ಜಾಗತಿಕ ಜನಸಂಖ್ಯೆಯು ನವೆಂಬರ್ 15ರಂದು 800 ಕೋಟಿಯನ್ನು ತಲುಪಿದೆ ಎಂದು ವಿಶ್ವಸಂಸ್ಥೆ(WHO) ಅಂದಾಜಿಸಿದೆ. ಚೀನಾ ಮತ್ತು ಭಾರತಗಳ ಜನಸಂಖ್ಯೆಯು ಒಟ್ಟು ಜನಸಂಖ್ಯೆಯ ಮೂರನೇ ಒಂದರಷ್ಟಿದೆ. ಭಾರತದ ಜನಸಂಖ್ಯೆ 138 ಕೋಟಿ ಎಂಬುದಾಗಿ ಅಂದಾಜಿಸಲಾಗಿದೆ. ಇದು ಚೀನಾದ 140 ಕೋಟಿ ಜನಸಂಖ್ಯೆಗಿAತ ಕೊಂಚ ಕಡಿಮೆಯಾಗಿದೆ.
2023ರಲ್ಲಿ ಭಾರತವು ಅತಿ ಹೆಚ್ಚು ಜನಸಂಖ್ಯೆಯ ದೇಶವಾಗಲಿದೆ ಎಂದು ವಿಶ್ವಸಂಸ್ಥೆ ತಿಳಿಸಿದೆ.
ಸಂತಾನೋತ್ಪತ್ತಿ ದರದಲ್ಲಿ ಇಳಿಕೆ
ಭಾರತದ ವಾರ್ಷಿಕ ಜನಸಂಖ್ಯಾ ಬೆಳವಣಿಗೆಯು 2011ರ ಬಳಿಕ ಸರಾಸರಿ 1.2% ದಷ್ಟಿದೆ. ಅದಕ್ಕಿಂತ ಹಿಂದಿನ 10 ವರ್ಷಗಳ ಅವಧಿಯಲ್ಲಿ ಅದು 1.7% ಆಗಿತ್ತು ಎನ್ನುವುದನ್ನು ಸರಕಾರಿ ಅಂಕಿಅಂಶಗಳು ತೋರಿಸಿವೆ.
ಜನಸಂಖ್ಯಾ ಬೆಳವಣಿಗೆ ದರದಲ್ಲಿ ಇನ್ನಷ್ಟು ಇಳಿಕೆಯನ್ನು ನಿರೀಕ್ಷಿಸಲಾಗಿದೆ. ಭಾರತದ ಒಟ್ಟು ಸಂತಾನೋತ್ಪತ್ತಿ ದರ (ಟಿಎಫ್‌ಆರ್), ಅಂದರೆ ಪ್ರತಿ ಮಹಿಳೆ ಹೊಂದಿರುವ ಮಕ್ಕಳ ಸಂಖ್ಯೆಯು 2019-2021ರ ಅವಧಿಯಲ್ಲಿ 2ಕ್ಕೆ ಇಳಿದಿದೆ. 1992-93ರ ಅವಧಿಯಲ್ಲಿ ಅದು 3.4 ಆಗಿತ್ತು ಎಂದು ಕಳೆದ ತಿಂಗಳು ಬಿಡುಗಡೆಗೊಂಡ ಸರಕಾರಿ ವರದಿಯೊಂದು ತಿಳಿಸಿದೆ. ಜನಸಂಖ್ಯೆಯು ನಿಯಮಿತವಾಗಿ ಮುಂದುವರಿಯಲು ಸರಾಸರಿ ಸಂತಾನೋತ್ಪತ್ತಿ ದರವು 2.1 ಆಗಬೇಕು ಎಂದು ವರದಿ ಹೇಳುತ್ತದೆ.
ಗರ್ಭನಿರೋಧಕಗಳ ಬಳಕೆಯಲ್ಲಿ ಹೆಚ್ಚಳ ಮತ್ತು ಹೆಚ್ಚುತ್ತಿರುವ ಬಾಲಕಿಯರ ಶಿಕ್ಷಣವು ಸಂತಾನೋತ್ಪತ್ತಿ ದರದಲ್ಲಿನ ಕುಸಿತಕ್ಕೆ ಕಾರಣವಾಗಿರಬಹುದು ಎಂದು ಅದು ಅಭಿಪ್ರಾಯಪಡುತ್ತದೆ.
ಕುಟುಂಬ ಯೋಜನೆ ವಿಧಾನಗಳ ಬಳಕೆಯಲ್ಲಿ ಹೆಚ್ಚಳ
ಕುಟುಂಬ ಯೋಜನೆ ವಿಧಾನಗಳ ಬಳಕೆಯು 2015-16ರ ಅವಧಿಯಲ್ಲಿ 53.5% ಇದ್ದದ್ದು, 2019-2021ರ ಅವಧಿಯಲ್ಲಿ 66.7%ಕ್ಕೆ ಹೆಚ್ಚಿದೆ.
ಭಾರತದ ರಾಷ್ಟ್ರೀಯ ಜನಸಂಖ್ಯಾ ನೀತಿಗಳು ಮತ್ತು ಆರೋಗ್ಯ ವ್ಯವಸ್ಥೆಗಳು ಪರಿಣಾಮ ಬೀರಿವೆ ಎನ್ನುವುದನ್ನು ಇದು ಸೂಚಿಸಿದೆ ಎಂದು ವಿಶ್ವಸಂಸ್ಥೆಯ ಜನಸಂಖ್ಯಾ ನಿಧಿ (ಯುಎನ್‌ಎಫ್‌ಪಿಎ)ಯು 'ರಾಯ್ಟರ್ಸ್' ಸುದ್ದಿ ಸಂಸ್ಥೆಗೆ ನೀಡಿರುವ ಹೇಳಿಕೆಯೊಂದರಲ್ಲಿ ತಿಳಿಸಿದೆ.
2 ಮಕ್ಕಳ ನೀತಿ ಮರುಪರಿಶೀಲಿಸಲು ಒಡಿಶಾ ಮುಂದು
ಒಡಿಶಾದಲ್ಲಿ ಒಟ್ಟು ಸಂತಾನೋತ್ಪತ್ತಿ ದರವು 2008/10 ಮತ್ತು 2019/21ರ ನಡುವಿನ 11 ವರ್ಷಗಳ ಅವಧಿಯಲ್ಲಿ 21%ದಷ್ಟು ಕುಸಿದಿದೆ. ರಾಜ್ಯ ಸರಕಾರದ ಪ್ರಕಾರ, ಈ ಕುಸಿತವು ಕ್ಷಿಪ್ರವಾಗಿ ಸಂಭವಿಸಿದೆ.
'ಎರಡು ಮಕ್ಕಳ ಕುಟುಂಬಕ್ಕೆ ಒತ್ತು ನೀಡುವ ನೀತಿಯನ್ನು ಒಡಿಶಾವು ಮರುಪರಿಶೀಲಿಸಬೇಕಾಗಬಹುದು'' ಎಂದು ರಾಜ್ಯದ ಯೋಜನಾ ಮತ್ತು ಉಸ್ತುವಾರಿ ಇಲಾಖೆಯು ಜೂನ್‌ನಲ್ಲಿ ಹೊರಡಿಸಿದ ಅಭಿಪ್ರಾಯವೊಂದು ಹೇಳಿದೆ. ಎರಡಕ್ಕಿಂತ ಹೆಚ್ಚಿನ ಮಕ್ಕಳನ್ನು ಹೊಂದುವುದನ್ನು ಈ ನೀತಿಗಳು ನಿರುತ್ತೇಜಿಸುತ್ತವೆ, ಆದರೆ, ಎರಡು ಮಕ್ಕಳನ್ನು ಹೊಂದುವುದನ್ನು ಪ್ರೋತ್ಸಾಹಿಸುವುದಿಲ್ಲ ಎಂದು ಅದು ಹೇಳುತ್ತದೆ.
ಅಸ್ಸಾಮ್: ಸಂತಾನೋತ್ಪತ್ತಿ ದರ ಅಧಿಕ
ಅದೇ ವೇಳೆ, ಈಶಾನ್ಯದ ರಾಜ್ಯ ಅಸ್ಸಾಮ್‌ನಲ್ಲಿನ ಒಟ್ಟು ಸಂತಾನೋತ್ಪತ್ತಿ ದರವು ರಾಷ್ಟಿçÃಯ ಸರಾಸರಿಗಿಂತ ಹೆಚ್ಚಾಗಿದೆ. ರಾಜ್ಯದಲ್ಲಿನ ಜನಸಂಖ್ಯಾ ಹೆಚ್ಚಳವನ್ನು ನಿಭಾಯಿಸುವುದಕ್ಕಾಗಿ ಅದು ಜನವರಿಯಲ್ಲಿ ಹೊಸ ನೀತಿಯೊಂದನ್ನು ಹೊರತಂದಿತು. ಈ ನೀತಿಯು ಎರಡಕ್ಕಿಂತ ಹೆಚ್ಚಿನ ಮಕ್ಕಳನ್ನು ಹೊಂದಿರುವವರನ್ನು ಸರಕಾರಿ ಉದ್ಯೋಗಗಳಿಗೆ ಮತ್ತು ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಸ್ಪರ್ಧಿಸುವುದಕ್ಕೆ ಅನರ್ಹಗೊಳಿಸುತ್ತದೆ.