ನವದೆಹಲಿ: ಮುಂಬೈನ ಆರೆ ಪ್ರದೇಶದಲ್ಲಿ ಕಾರ್‌ಶೆಡ್ ನಿರ್ಮಿಸಲು 84 ಮರಗಳನ್ನು ಕಡಿಯಲು ಅನುಮತಿ ಕೋರಿ ಸಂಬಂಧಪಟ್ಟ ಪ್ರಾಧಿಕಾರಗಳಿಗೆ ಮನವಿ ಸಲ್ಲಿಸಲು ಮುಂಬೈ ಮೆಟ್ರೊ ರೈಲು ನಿಗಮಕ್ಕೆ( ಎಂಎಂಆರ್‌ಸಿಎಲ್) ಸುಪ್ರಿಂ ಕೋರ್ಟ್ ಮಂಗಳವಾರ ಅನುಮತಿ ನೀಡಿದೆ.
'84 ಮರಗಳನ್ನು ಕಡಿಯಲು ಮರಗಳ ಪ್ರಾಧಿಕಾರದಿಂದ ಅನುಮತಿ ಪಡೆಯಲು ಎಂಎಂಆರ್‌ಸಿಎಲ್ ಅವಕಾಶ ನೀಡಲಾಗಿದೆ. ಸಂಬಂಧಿಸಿದ ಪ್ರಾಧಿಕಾರಗಳು ಈ ಕುರಿತು ಸ್ವತಂತ್ರವಾಗಿ ನಿರ್ಧಾರ ತೆಗೆದುಕೊಳ್ಳಲಿ' ಎಂದು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ಮತ್ತು ನ್ಯಾಯಮೂರ್ತಿ ಪಿ.ಎಸ್. ನರಸಿಂಹ ಅವರಿದ್ದ ಪೀಠವು ಹೇಳಿದೆ.
ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ಎಂಎಂಆರ್‌ಸಿಎಲ್ ಪರವಾಗಿ ಕೋರ್ಟ್‌ನಲ್ಲಿ ಹಾಜರಿದ್ದರು. ಮುಂಬೈ ಮೆಟ್ರೊಗೆ ಸಂಬಂಧಿಸಿದ ಶೇ 95ರಷ್ಟು ಕೆಲಸ ಮುಗಿದಿದೆ ಎಂದು ಅವರು ಪೀಠಕ್ಕೆ ತಿಳಿಸಿದರು.
ಮರ ಕಡಿಯುವುದಕ್ಕೆ ಸಂಬಂಧಿಸಿದ ವಿವಾದದ ಕಾರಣ ಮುಂಬೈ ಮೆಟ್ರೊ ನಿರ್ಮಾಣವು ಕೆಲವು ದಿನಗಳಿಂದ ಸ್ಥಗಿತಗೊಂಡಿತ್ತು.