ಪಾಲಕ್ಕಾಡ್: ವಿವಾಹದ ಬಳಿಕವೂ ರಾತ್ರಿ ಸ್ನೇಹಿತರ ಜೊತೆ ಕಾಲ ಕಳೆಯಲು ಪತಿಗೆ ಕರೆ ಮಾಡಿ ತೊಂದರೆ ಕೊಡುವುದಿಲ್ಲ ಎಂದು ವಧು ಛಾಪಾಪತ್ರದಲ್ಲಿ ಸಹಿಮಾಡಿ ನೀಡಿರುವ ಅಪೂರ್ವ ಸನ್ನಿವೇಶವೊಂದು ಭಾರೀ ಸದ್ದುಮಾಡಿದೆ.
ಕಳೆದ ಶನಿವಾರ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಪಾಲಕ್ಕಾಡ್ ಕೊಡುವಯೂರು ಮಲಯಕೋಡ್ ವಿ.ಎಸ್. ಭವನದ ಎಸ್. ರಘು ಎಂಬವರ ಸ್ನೇಹಿತರು ಕಾಕಯೂರು ವಡಕ್ಕೆಪುರ ಮನೆಯಲ್ಲಿ ರಘು ಅವರ ಪತ್ನಿ ಎಸ್. ಅರ್ಚನಾ ಅವರಿಂದ ಈ ಸಹಿ ಪಡೆದುಕೊಂಡಿದ್ದಾರೆ.
ಸ್ನೇಹಿತರು, ಬ್ಯಾಡ್ಮಿಂಟನ್ ಆಟಗಾರರು ಸೇರಿದಂತೆ ‘ಗುರು ಮತ್ತು ಶಿಷ್ಯ’ರ 17 ಸದಸ್ಯರನ್ನೊಳಗೊಂಡ ವಾಟ್ಸಾಪ್ ಗ್ರೂಪ್‍ನ ಸದಸ್ಯರು ರಘು ಪರವಾಗಿ 50 ರೂಪಾಯಿಯ ಸ್ಟ್ಯಾಂಪ್ ಪೇಪರÀಲ್ಲಿ ತನ್ನ ಪತಿಗೆ ಒಂಬತ್ತು ಗಂಟೆಯವರೆಗೆ ಸ್ನೇಹಿತರೊಂದಿಗೆ ಸಮಯ ಕಳೆಯಲು ಅವಕಾಶ ನೀಡುವುದಾಗಿ ಬರೆದಿದ್ದಾರೆ. ರಾತ್ರಿ 9ರ ವÀರೆಗೆ ಪೋನ್ ಕರೆಗಳಿಂದ ತೊಂದರೆಗೊಳಿಸುವುದಿಲ್ಲ ಎಂದು ಬರೆಯಲಾಗಿದೆ. ವಧುವಿನ ಒಪ್ಪಿಗೆಯೊಂದಿಗೆ, ಸ್ನೇಹಿತರು ಒಪ್ಪಂದವನ್ನು ಸಾಮಾಜಿಕ ಮಾಧ್ಯಮದಲ್ಲಿ ಪ್ರಸಾರ ಮಾಡಿರುವರು.
ಸಂಜೆ ಬ್ಯಾಡ್ಮಿಂಟನ್ ಆಡುವ ಸ್ನೇಹಿತರಲ್ಲಿ ನಾಲ್ಕೈದು ಮಂದಿಯನ್ನು ಬಿಟ್ಟರೆ ಉಳಿದವರೆಲ್ಲ ಅವಿವಾಹಿತರು. ಮುಂದಿನ 23ಕ್ಕೆ ಮತ್ತೊಬ್ಬ ಗೆಳೆಯನ ವಿವಾಹವೂ ನಡೆಯಲಿದೆ. ಗೆಳೆಯರು ಅಚ್ಚರಿಯ ತಯಾರಿ ನಡೆಸುತ್ತಿದ್ದಾರೆ ಎಂದು ರಘು ತಿಳಿಸಿದರು.
ವಿವಾಹದ ಬಳಿಕ ರಾತ್ರಿ 9 ಗಂಟೆಯವರೆಗೆ ಸ್ನೇಹಿತರ ಜೊತೆಕಳೆಯಲು ಅನುಮತಿಸುವೆ: ಪತಿಗೆ ಪೋನ್ ಕರೆಯ ಮೂಲಕ ತೊಂದರೆ ನೀಡಲಾರೆ: ಹೀಗೊಂದು ಅಪೂರ್ವ ಅನುಮತಿ ಪತ್ರ
0
ನವೆಂಬರ್ 09, 2022