ಪತ್ತನಂತಿಟ್ಟ: ಇಳಂತೂರು ಜೋಡಿ ಕೊಲೆ ಪ್ರಕರಣದಲ್ಲಿ ಶೀಘ್ರ ಚಾರ್ಜ್ ಶೀಟ್ ಸಲ್ಲಿಸಲು ಪೋಲೀಸರು ಸಿದ್ದತೆ ನಡೆಸಿದ್ದಾರೆ. ತಡವಾದ ಪ್ರಕರಣವಾಗಿರುವುದರಿಂದ 90 ದಿನಗಳಲ್ಲಿ ಚಾರ್ಜ್ ಶೀಟ್ ಸಲ್ಲಿಸಲು ಪೋಲೀಸರು ಮುಂದಾಗಿದ್ದಾರೆ.
ಆದರೆ ಡಿಎನ್‍ಎ ಪರೀಕ್ಷೆಯ ಫಲಿತಾಂಶ ವಿಳಂಬವಾಗುವುದು ತನಿಖೆಯ ಮೇಲೆ ಪರಿಣಾಮ ಬೀರುತ್ತದೆ ಎನ್ನಲಾಗಿದೆ.
90 ದಿನಗಳೊಳಗೆ ಚಾರ್ಜ್ ಶೀಟ್ ಸಲ್ಲಿಸದಿದ್ದರೆ ಆರೋಪಿಗಳಿಗೆ ಸಹಜ ಜಾಮೀನು ಸಿಗಲಿದೆ. ಈ ಸಾಧ್ಯತೆಯನ್ನು ತಪ್ಪಿಸಲು ಸಕಾಲದಲ್ಲಿ ಚಾರ್ಜ್ ಶೀಟ್ ಸಲ್ಲಿಸುವುದು ಪೋಲೀಸರ ಲಕ್ಷ್ಯವಾಗಿದೆ. ಆದರೆ ತನಿಖೆ ಪೂರ್ಣಗೊಂಡು ಚಾರ್ಜ್ ಶೀಟ್ ಸಲ್ಲಿಕೆಯಾಗಬೇಕಿದ್ದರೂ ಇನ್ನೂ ಸಾಕ್ಷ್ಯ ಸಂಗ್ರಹಿಸಬೇಕಿದೆ. ಕೊಲೆಯಾದ ಪದ್ಮಾ ಮತ್ತು ರೋಸ್ಲಿ ಅವರ ಮೊಬೈಲ್ ಪೋನ್ ಮತ್ತು ಪದ್ಮಾ ಅವರ ಕಾಲಿನ ಬೆಳ್ಳಿಯ ಕಾಲುಂಗುರ ಪತ್ತೆಯಾಗಿದೆ. ಮೊಹಮ್ಮದ್ ಶಫಿ, ಲೈಲಾ ಮತ್ತು ಭಗವಾಲ್ ಸಿಂಗ್ ಹೊರತುಪಡಿಸಿ, ಇನ್ನೂ ಹೆಚ್ಚಿನ ಜನರು ಭಾಗಿಯಾಗಿದ್ದಾರೆಯೇ ಎಂಬುದು ಸ್ಪಷ್ಟವಾಗಿಲ್ಲ.
ನಿತ್ಯ ಕ್ರಿಮಿನಲ್ ಆಗಿರುವ ಶಫಿಯಿಂದ ನಿಖರ ಮಾಹಿತಿ ಸಿಗದಿರುವುದು ಹಾಗೂ ಶಫಿ ಹಲವು ವಿಷಯಗಳನ್ನು ಮುಚ್ಚಿಟ್ಟಿರುವುದು ತನಿಖೆಯ ಮೇಲೆ ಪರಿಣಾಮ ಬೀರಿದೆ. ಇದರೊಂದಿಗೆ ಡಿಎನ್ಎ ಪರೀಕ್ಷೆಯ ಫಲಿತಾಂಶಗಳನ್ನು ಕೇಂದ್ರೀಕರಿಸಿ ತನಿಖೆ ನಡೆಸಬೇಕಿದೆ. ಆದರೆ ತಿರುವನಂತಪುರಂ ಪೋರೆನ್ಸಿಕ್ ಸೈನ್ಸ್ ಲ್ಯಾಬ್‍ನಿಂದ ಡಿಎನ್‍ಎ ಪರೀಕ್ಷೆಯ ವರದಿ ಬರಲು ಸ್ವಲ್ಪ ಸಮಯ ಹಿಡಿಯುತ್ತದೆ. ಕೊಚ್ಚಿ ನಗರ ಪೋಲೀಸ್ ಆಯುಕ್ತ ಸಿ.ಎಚ್.ನಾಗರಾಜು ಅವರು ಲ್ಯಾಬ್‍ಗೆ ಶೀಘ್ರವಾಗಿ ಪರೀಕ್ಷೆ ಪೂರ್ಣಗೊಳಿಸಿ ಡಿಎನ್‍ಎ ವರದಿ ನೀಡುವಂತೆ ಸೂಚಿಸಿದ್ದಾರೆ. ನವೆಂಬರ್ 28 ರೊಳಗೆ ಡಿಎನ್ಎ ಪರೀಕ್ಷೆಯ ಫಲಿತಾಂಶಗಳು ಲಭ್ಯವಾಗುವ ನಿರೀಕ್ಷೆಯಿದೆ. ಇದನ್ನು ಆಧರಿಸಿ ಮುಂದಿನ ತನಿಖೆ ನಡೆಸಲಾಗುವುದು.
ಇಳಂತೂರು ಜೋಡಿ ಕೊಲೆ ಪ್ರಕರಣ; 90 ದಿನಗಳಲ್ಲಿ ಆರೋಪ ಪಟ್ಟಿ ಸಲ್ಲಿಸಲು ಸಿದ್ದತೆಯಲ್ಲಿ ಪೋಲೀಸರು
0
ನವೆಂಬರ್ 01, 2022