ಬದಿಯಡ್ಕ: ಪೆರಡಾಲ ನವಜೀವನ ಹೈಯರ್ ಶಾಲೆಯ ಅಧ್ಯಾಪಕರು ಮತ್ತು ವಿದ್ಯಾರ್ಥಿಗಳಿಂದ ಮಾದಕ ದ್ರವ್ಯ ಮತ್ತು ವಸ್ತುಗಳ ವಿರುದ್ದ ಮಾನವ ಸರಪಳಿ ಮೂಲಕ ಜಾಗೃತಿ ಕಾರ್ಯಕ್ರಮ ನಡೆಯಿತು.
ಬದಿಯಡ್ಕ ಪೇಟೆಯಲ್ಲಿ ಮೆರವಣಿಗೆ ನಡೆಯಿತು. ಬಳಿಕ ಪ್ರತಿಜ್ಞೆ ಸ್ವೀಕಾರ ನೆರವೇರಿತು. ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಅನ್ವರ್ ಓಜೋನ್ ಮಾತನಾಡಿದರು. ಉಪಾಧ್ಯಕ್ಷ ಶಾಫಿ ಚೂರಿಪಳ್ಳ, ಮುಖ್ಯೋಪಾಧ್ಯಾಯ ಮಿನಿ ಟೀಚರ್, ಪ್ರಾಂಶುಪಾಲ ಮಾಧವನ್ ಭಟ್ಟತ್ತಿರಿ, ಪ್ರಭಾಕರನ್ ನಾಯರ್, ನಿರಂಜನ ರೈ ಪೆರಡಾಲ, ನಾರಾಯಣ ಆಸ್ರ, ಶಾಯಿದಾ ಬೀವಿ, ವಸಂತಿ ಟೀಚರ್, ನೌಕರ ಸಂಘದ ಕಾರ್ಯದರ್ಶಿ ಕಾರ್ತಿಕ ಟೀಚರ್, ಸೂರ್ಯನಾರಾಯಣ, ವನಜಾ, ರಾಜೇಶ್ ಮಾಸ್ತರ್, ನಾರಾಯಣ ಮುರಿಯಂಕೂಡ್ಲು, ಕೃಷ್ಣ ಯಾದವ್ ನೇತೃತ್ವ ನೀಡಿದರು. ಅಧ್ಯಾಪಕರು ವಿದ್ಯಾರ್ಥಿಗಳು ಶಾಲಾ ಎನ್.ಸಿ.ಸಿ ಘಟಕ, ಎಸ್ ಪಿ ಸಿ ಘಟಕ, ರೆಡ್ ಕ್ರಾಸ್, ಸ್ಕೌಟ್ ಮತ್ತು ಗೈಡ್ ಮೆರವಣಿಗೆಯಲ್ಲಿ ಪಾಲ್ಗೊಂಡವು.