ಕುಂಬಳೆ: ಕುಂಬಳೆ ಕೋಸ್ಟಲ್ ಗಾರ್ಡ್ ಪೋಲಿಸ್ ಸಬ್ ಇನ್ಸ್ ಪೇಕ್ಟರ್ ಆಗಿ ನಿವೃತ್ತಿಗೊಂಡ ಪರಮೇಶ್ವರ ನಾಯ್ಕ ಬಾಳೆಗುಳಿ ಅವರಿಗೆ ಪೆರ್ಲದ ಸವಿಹೃದಯದ ಕವಿ ಮಿತ್ರರು ವೇದಿಕೆಯ ಆಶ್ರಯದಲ್ಲಿ ಅಭಿನಂದನಾ ಕಾರ್ಯಕ್ರಮ ಸೋಮವಾರ ಜರಗಿತು.
ಪರಮೇಶ್ವರ ನಾಯ್ಕರ ಸ್ವಗೃಹದಲ್ಲಿ ನಡೆದ ಕಾರ್ಯಕ್ರಮದಲ್ಲಿ ಹಿರಿಯ ಸಾಹಿತಿ ಹರೀಶ್ ಪೆರ್ಲ ವೇದಿಕೆಯ ಪರವಾಗಿ ಅಭಿನಂದಿಸಿದರು. ಹಿರಿಯ ಕವಿ, ಪತ್ರಕರ್ತ ರಾಧಾಕೃಷ್ಣ ಕೆ. ಉಳಿಯತ್ತಡ್ಕ ಅಭಿನಂದನಾ ಭಾಷಣಗೈದರು. ಕವಿ ಸಂಘಟಕ ಸುಂದರ ಬಾರಡ್ಕ, ನ್ಯಾಯವಾದಿ ಥೋಮಸ್ ಡಿ.ಸೋಜ ಸೀತಾಂಗೋಳಿ, ರವೀಂದ್ರನ್ ಪಾಡಿ, ಚಂದ್ರಹಾಸ ಮಾಸ್ತರ್ ಅರೆಕ್ಕಾಡಿ, ವನಜಾಕ್ಷಿ ಚಂಬ್ರಕಾನ ಮೊದಲಾದವರು ಉಪಸ್ಥಿತರಿದ್ದರು. ರವಿ ನಾಯ್ಕಾಪು ಸ್ವಾಗತಿಸಿ, ರಿತೇಶ್ ಕಿರಣ್ ಕಾಟುಕುಕ್ಕೆ ವಂದಿಸಿದರು. ವೇದಿಕೆಯ ಸಂಚಾಲಕ ಸುಭಾμï ಪೆರ್ಲ ನಿರ್ವಹಿಸಿದರು.
ಪೋಲಿಸ್ ಅಧಿಕಾರಿ ಪರಮೇಶ್ವರ ನಾಯ್ಕರಿಗೆ ಸವಿ ಹೃದಯದ ಕವಿ ಮಿತ್ರರಿಂದ ಅಭಿನಂದನೆ
0
ನವೆಂಬರ್ 01, 2022