ತಿರುವನಂತಪುರ: ಪತ್ರ ವಿವಾದಕ್ಕೆ ಸಂಬಂಧಿಸಿದಂತೆ ಮೇಯರ್ ಆರ್ಯ ರಾಜೇಂದ್ರನ್ ತಾನು ಎಂದಿಗೂ ರಾಜೀನಾಮೆ ನೀಡುವುದಿಲ್ಲ. ಪಾಲಿಕೆ ಸದಸ್ಯರ ಬೆಂಬಲ ಇರುವವರೆಗೂ ಮೇಯರ್ ಹುದ್ದೆಯಲ್ಲಿರುವೆ ಎಂದು ತಿಳಿಸಿದ್ದಾರೆ.
ತಮ್ಮ ರಾಜೀನಾಮೆಗೆ ಒತ್ತಾಯಿಸಿ ತಿರುವನಂತಪುರಂ ಮುನ್ಸಿಪಲ್ ಕಾರ್ಪೋರೇಷನ್ ಎದುರು ನಡೆಯುತ್ತಿರುವ ಪ್ರತಿಭಟನೆಯ ಕುರಿತು ಆರ್ಯ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದರು.
55 ಪಾಲಿಕೆ ಸದಸ್ಯರು ಮತದಾನ ಮಾಡಿದ್ದು, ಮೇಯರ್ ಆಗಿ ಅಧಿಕಾರ ಸ್ವೀಕರಿಸಿರುವೆ. ಪಾಲಿಕೆ ಸದಸ್ಯರು ಹಾಗೂ ಜನರ ಬೆಂಬಲ ಇರುವವರೆಗೂ ಮೇಯರ್ ಆಗಿಯೇ ಮುಂದುವರಿಯುವೆ. ಮುಖ್ಯಮಂತ್ರಿಗೆ ನೀಡಿರುವ ದೂರಿನ ಬಗ್ಗೆ ಸೂಕ್ತ ತನಿಖೆ ನಡೆಸಲಾಗುತ್ತಿದೆ. ಈ ವಿಚಾರದಲ್ಲಿ ಏನು ಹೇಳಬೇಕು ಎಂಬುದನ್ನು ನೇರವಾಗಿ ಅಪರಾಧ ವಿಭಾಗಕ್ಕೆ ತಿಳಿಸಲಾಗುವುದು. ನ್ಯಾಯಾಲಯದಿಂದ ಕಳುಹಿಸಲಾದ ನೋಟಿಸ್ ಇನ್ನೂ ಬಂದಿಲ್ಲ ಮತ್ತು ಕ್ರಮವನ್ನು ಸ್ವಾಗತಿಸುತ್ತೇವೆ ಎಂದು ಮೇಯರು ಆರ್ಯ ಹೇಳಿದರು.
‘ಕದ್ದಿರುವ ಹಣದೊಂದಿಗೆ ಮೇಯರ್ ತಮ್ಮ ಸ್ವಂತ ಊರಾದ ಕೋಝಿಕ್ಕೋಡ್ ಗೆ ಮರಳಲಿ’ ಎಂಬ ಜೆ.ಬಿ.ಮಾಥರ್ ಅವರ ಮಾತು ತುಂಬಾ ನೋವುಂಟು ಮಾಡಿದೆ ಎಂದು ಮೇಯರ್ ಹೇಳಿದ್ದಾರೆ. ಮಹಿಳಾ ಕಾಂಗ್ರೆಸ್ ತನ್ನ ಕುಟುಂಬಕ್ಕೆ ಅವಮಾನ ಮಾಡಿದೆ. ಅದರ ಬಗ್ಗೆ ದೂರು ನೀಡಿದರೆ ಭವಿಷ್ಯದಲ್ಲಿ ಪರಿಗಣಿಸಲಾಗುವುದು. ಪಾಲಿಕೆಗೆ ಹಣ ಕಳ್ಳತನವಾಗಿದೆ ಎಂದು ಹೇಳಲು ಉಪಮೇಯರ್ ಅಥವಾ ಇತರೆ ಸದಸ್ಯರು ಸಿದ್ಧರಿದ್ದರೆ ಕಾನೂನು ಕ್ರಮ ಎದುರಿಸಬೇಕಾಗುತ್ತದೆ ಎಂದು ಮೇಯರ್ ಸವಾಲು ಹಾಕಿದರು.
ರಾಜೀನಾಮೆ ನೀಡುವುದಿಲ್ಲ; ಪಾಲಿಕೆ ಸದಸ್ಯರ ಬೆಂಬಲ ಇರುವವರೆಗೂ ಮೇಯರ್ ಆಗಿ ಮುಂದುವರಿಯುತ್ತೇನೆ: ಆರ್ಯ ರಾಜೇಂದ್ರನ್
0
ನವೆಂಬರ್ 11, 2022