ಕಾಸರಗೋಡು: ಕಾಮಗಾರಿ ಹೆಸರಲ್ಲಿ ಮೊಟಕುಗೊಂಡು ಸಮಸ್ಯಾತ್ಮಕವಾಗಿರುವ ಕಾಸರಗೋಡು-ನೀರ್ಚಾಲು-ಮುಂಡಿತ್ತಡ್ಕ ಬಸ್ ಸಂಚಾರವನ್ನು ಪುನರಾರಂಭಿಸಲು ಕ್ರಮಕೈಗೊಳ್ಳಬೇಕು ಎಂದು ಕಾಸರಗೋಡು ತಾಲೂಕು ಅಭಿವೃದ್ಧಿ ಸಮಿತಿ ಸಭೆ ಆಗ್ರಹಿಸಿತು.
ಶಾಸಕ ಎನ್.ಎ.ನೆಲ್ಲಿಕುನ್ನು ಅಧ್ಯಕ್ಷತೆಯಲ್ಲಿ ನಡೆದ ತಾಲೂಕು ಅಭಿವೃದ್ದಿ ಸಮಿತಿ ಸಭೆಯಲ್ಲಿ ಈ ಬಗ್ಗೆ ಚರ್ಚಿಸಲಾಯಿತು.
ಬೇಡಡ್ಕ ಗ್ರಾ.ಪಂ.ನಲ್ಲಿ ಎಂಸಿಎಫ್ ಸ್ಥಾಪನೆಗೆ ಜಾಗ ಮಂಜೂರು ಮಾಡುವುದು, ದಕ್ಷಿಣದಲ್ಲಿ ಆಲತ್ತಿ ರಸ್ತೆ ಕೈಕಂಬಗಳ ಪುನಶ್ಚೇತನ ಹಾಗೂ ಕಾಸರಗೋಡು ಪೇಟೆಯಲ್ಲಿ ಬೀದಿ ದೀಪಗಳ ಕಾರ್ಯಗತಗೊಳಿಸುವುದು ಮುಂತಾದ ಬೇಡಿಕೆಗಳು ಸಭೆಯಲ್ಲಿ ಪ್ರಸ್ತಾಪವಾದವು. ಚಟ್ಟಂಚಾಲ್ ಕೈಗಾರಿಕೆಗಳಿಂದ ಹೊರಬಿಡುವ ತ್ಯಾಜ್ಯ ನೀರು ಹರಿಯುವುದರಿಂದ ಪರಿಸರಕ್ಕೆ ಉಂಟಾಗುತ್ತಿರುವ ಸಮಸ್ಯೆಗಳ ಪರಿಹಾರಕ್ಕೆ ಕ್ರಮಕೈಗೊಳ್ಳಬೇಕು ಎಂದು ಅಭಿವೃದ್ಧಿ ಸಮಿತಿ ಸಭೆ ಒತ್ತಾಯಿಸಿತು. ಚೆಮ್ಮನಾಡು ಗ್ರಾಮ ಪಂಚಾಯಿತಿಯಲ್ಲಿ ಜಲಜೀವನ ಯೋಜನೆಗೆ ನೀರಿನ ಟ್ಯಾಂಕ್ ನಿರ್ಮಿಸುವ ಬಗ್ಗೆಯೂ ಅಭಿವೃದ್ಧಿ ಸಮಿತಿ ಸಭೆಯಲ್ಲಿ ಚರ್ಚೆ ನಡೆಯಿತು. ಚೆಂಗಳ ಗ್ರಾಮ ಪಂಚಾಯಿತಿ ಅಧ್ಯಕ್ಷ ಖಾದರ್ ಬದರಿಯಾ, ಚೆಮ್ಮನಾಡು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸುಫೈಜಾ ಅಬೂಬಕ್ಕರ್, ಕುಂಬ್ಡಾಜೆ ಗ್ರಾ.ಪಂ ಅಧ್ಯಕ್ಷೆ ಹಮ್ಮೀದ್ ಪೊಸವಳಿಕೆ, ಬೇಡಡ್ಕ ಗ್ರಾ.ಪಂ.ಅಧ್ಯಕ್ಷೆ ಎಂ.ಧನ್ಯ, ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳಾದ ಅಡ್ವ: ಕೆ.ಎಂ.ಹಸೈನಾರ್, ಮುಹಮ್ಮದ್ ತಿಬಾರ್, ನ್ಯಾಶನಲ್ ಅಬ್ದುಲ್ಲಾ, ಕರುಂತಪ್ಪ, ಕೆ.ಎಂ. , ಖಾದರ್ ಬದರಿಯ, ಉಬೈದುಲ್ಲಾ ಕಡವತ್, ಪ್ರಜೋμï, ಅಬ್ದುಲ್ ರಹಮಾನ್, ತಾಲೂಕು ಅಧಿಕಾರಿಗಳು, ಭೂರೇಖಾ ತಹಸೀಲ್ದಾರ್ ಎಂ.ಸಿ.ಅನುಪಮನ್, ಕೇಂದ್ರ ಉಪ ತಹಸೀಲ್ದಾರ್ ರಮೇಶ ಪೆÇಯಿನಾಚಿ ಮೊದಲಾದವರು ಸಭೆಯಲ್ಲಿ ಭಾಗವಹಿಸಿದ್ದರು.
ಕಾಸರಗೋಡು - ಮುಂಡಿತ್ತಡ್ಕ ಬಸ್ ಸಂಚಾರ ಪುನರಾರಂಭಿಸಲು ತಾಲೂಕು ಅಭಿವೃದ್ಧಿ ಸಮಿತಿ ಸಭೆ ಒತ್ತಾಯ
0
ನವೆಂಬರ್ 06, 2022