ಮಲಬಾರ್
ದೇವಸ್ವಂ ಮಂಡಳಿಯ ಅಧೀನದಲ್ಲಿರುವ ಮಂಜೇಶ್ವರ ಪೈವಳಿಗೆ ಉರುಮಿ ಲಕ್ಷ್ಮಿ ನಾರಾಯಣ
ದೇವಸ್ಥಾನದಲ್ಲಿ ಪಾರಂಪರಿಕ ಟ್ರಸ್ಟ್ ಹುದ್ದೆಗೆ ದೇವಾಲಯದ ಆಸುಪಾಸಿನಲ್ಲಿರುವ ಹಿಂದೂ
ಧರ್ಮವನ್ನು ಆಚರಿಸುವ ಜನರಿಂದ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿಗಳು ಮಲಬಾರ್ ದೇವಸ್ವಂ
ಬೋರ್ಡ್, ಕಾಸರಗೋಡು ಡಿವಿಷನ್ ನಿಲೇಶ್ವರದ ಸಹಾಯಕ ಆಯುಕ್ತರ ಕಛೇರಿಗೆ ಡಿಸೆಂಬರ್ 15
ರಂದು ಸಂಜೆ 5: 00 ಗಂಟೆಯ ಮೊದಲು ನೀಡಬೇಕು. ಅರ್ಜಿ ನಮೂನೆಗಳನ್ನು ಮಲಬಾರ್ ದೇವಸ್ವಂ
ಬೋರ್ಡ್ ವೆಬ್‌ಸೈಟ್, ಹಾಗೂ ನೀಲೇಶ್ವರದ ಸಹಾಯಕ ಆಯುಕ್ತರ ಕಛೇರಿ ದಿನಗಳಲ್ಲಿ ಉಚಿತವಾಗಿ
ಪಡೆಯಬಹುದು. ನಿಗದಿತ ದಿನಾಂಕದ ನಂತರ ಬರುವ ಅರ್ಜಿಗಳನ್ನು ಸ್ವೀಕರಿಸುವುದಿಲ್ಲ ಎಂದು
ಸಹಾಯಕ ಆಯುಕ್ತರು ತಿಳಿಸಿದ್ದಾರೆ.