ಕಾಸರಗೋಡು: ಭಾರತೀಯ ವಕೀಲರ ಪರಿಷತ್ ಕಾಸರಗೋಡು ಜಿಲ್ಲಾ ಸಮಿತಿ ವತಿಯಿಂದ ರಾಷ್ಟ್ರೀಯ ಕಾನೂನು ದಿನವನ್ನು ಆಚರಿಸಲಾಯಿತು. ಕಾಸರಗೋಡು ಟೌನ್ ಬ್ಯಾಂಕ್ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಸಮಾರಂಭವನ್ನು ನಿವೃತ್ತ ಜಿಲ್ಲಾ ನ್ಯಾಯಾಧೀಶ ಎ. ಶಂಕರನ್ ನಾಯರ್ ಉದ್ಘಾಟಿಸಿದರು.
ಭಾರತೀಯ ವಕೀಲರ ಪರಿಷತ್ ಕಾಸರಗೋಡು ಜಿಲ್ಲಾ ಸಮಿತಿ ಅಧ್ಯಕ್ಷ ವಕೀಲ, ಸಿ.ಅಶೋಕ್ ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ರಾಜ್ಯ ಸಮಿತಿ ಉಪಾಧ್ಯಕ್ಷ ವಕೀಲ ಬಿ. ರವೀಂದ್ರನ್, ಹೊಸದುರ್ಗ ವಿಭಾಗದ ಅಧ್ಯಕ್ಷ ಕೆ. ಸಿ. ಅನಿಲ್, ಹಿರಿಯ ವಕೀಲ ಮಾಧವನ್ ಮಾಲಙËಡ್ ಉಪಸ್ಥಿತರಿದ್ದರು. ರಾಜ್ಯ ಸಮಿತಿ ಸದಸ್ಯ ವಕೀಲ ಕೆ. ಕರುಣಾಕರನ್ ನಂಬಿಯಾರ್ ಸ್ವಾಗತಿಸಿದರು. ಜಿಲ್ಲಾ ಕಾರ್ಯದರ್ಶಿ ವಕೀಲ ಪಿ. ಮುರಳೀಧರನ್ ವಂದಿಸಿದರು.
ಭಾರತೀಯ ವಕೀಲರ ಪರಿಷತ್‍ನಿಂದ ರಾಷ್ಟ್ರೀಯ ಕಾನೂನು ದಿನಾಚರಣೆಯ
0
ನವೆಂಬರ್ 27, 2022
Tags