ತಿರುವನಂತಪುರಂ: ವಿಝಿಂಜಂನಲ್ಲಿ ಪ್ರತಿಭಟನಾಕಾರರು ಭಯೋತ್ಪಾದಕರಂತೆ ವರ್ತಿಸುತ್ತಿದ್ದಾರೆ ಎಂದು ಶಿಕ್ಷಣ ಸಚಿವ ವಿ ಶಿವನ್‍ಕುಟ್ಟಿ ಹೇಳಿದ್ದಾರೆ.
ಮುಷ್ಕರ ಸಮಿತಿ ಎತ್ತಿದ ಪ್ರಮುಖ ಬೇಡಿಕೆಗಳನ್ನು ಸರ್ಕಾರ ಅಂಗೀಕರಿಸಿದೆ. ಆದರೂ ನಿನ್ನೆ ವಿಝಿಂಜಂನಲ್ಲಿ ಗಲಭೆ ನಡೆದಿರುವುದು ಹೇಯಕರ ಎಂದು ಸಚಿವರು ಹೇಳಿದ್ದಾರೆ.
ಸಂಘರ್ಷದ ಹಿಂದೆ ಬಾಹ್ಯ ಶಕ್ತಿಗಳ ಕೈವಾಡ ಇರುವ ಶಂಕೆ ವ್ಯಕ್ತವಾಗಿದೆ. ಹೊರಗಿನ ಹಸ್ತಕ್ಷೇಪವನ್ನು ಪರಿಶೀಲಿಸಲಾಗುವುದು. ಪಾದ್ರಿಗಳ ಒಂದು ವಿಭಾಗವು ಜನರನ್ನು ಬೆದರಿಸಿ ಮುಷ್ಕರಕ್ಕೆ ಕರೆತರುತ್ತಾರೆ. ಮುಷ್ಕರವನ್ನು ಬಲಪ್ರಯೋಗಿಸಿ ಹತ್ತಿಕ್ಕುವ ಉದ್ದೇಶವಿಲ್ಲ ಎಂದು ಸಚಿವರು ತಿಳಿಸಿದರು.
ವಿಜಿಂಜಂ ಪ್ರತಿಭಟನಾಕಾರರನ್ನು ಬಿಡುಗಡೆ ಮಾಡುವಂತೆ ಒತ್ತಾಯಿಸಿ ಪ್ರತಿಭಟನಾಕಾರರು ನಿನ್ನೆ ರಾತ್ರಿ ಪೆÇಲೀಸ್ ಠಾಣೆಗೆ ಮುತ್ತಿಗೆ ಹಾಕಿದ್ದರು. ನಂತರ ಹಿಂಸಾಚಾರಕ್ಕಿಳಿದು ಪೆÇಲೀಸ್ ಅಧಿಕಾರಿಗಳಿಗೆ ಥಳಿಸಿದ್ದಾರೆ. ಸುಮಾರು 36 ಅಧಿಕಾರಿಗಳು ಗಾಯಗೊಂಡಿದ್ದಾರೆ. ಅವರನ್ನು ಆಸ್ಪತ್ರೆಗೆ ಕರೆದೊಯ್ಯದೆ ಬಹಳ ಹೊತ್ತು ಠಾಣೆಯಲ್ಲೇ ಇರಿಸಲಾಗಿತ್ತು.
ಪೆÇಲೀಸರು 3000 ಜನರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಕಂಡರೆ ಗುರುತಿಸಬಹುದಾದ ವ್ಯಕ್ತಿಗಳ ವಿರುದ್ದ ಪ್ರಕರಣ ದಾಖಲಾಗಿದೆ. ಒಂದೇ ರಾತ್ರಿಯಲ್ಲಿ ಇಲಾಖೆಗೆ 85 ಲಕ್ಷ ರೂಪಾಯಿ ನಷ್ಟವಾಗಿದೆ ಎಂದು ಪೆÇಲೀಸರ ಎಫ್‍ಐಆರ್ ಹೇಳುತ್ತದೆ. ಪೆÇಲೀಸರನ್ನು ಅಪಾಯಕ್ಕೆ ಸಿಲುಕಿಸಿ ವಶಕ್ಕೆ ಪಡೆದ ಆರೋಪಿಗಳನ್ನು ಬಿಡಿಸುವ ಯತ್ನ ನಡೆದಿದೆ. ತಂಡವು ಚಾಕು ಸೇರಿದಂತೆ ಮಾರಕ ಆಯುಧಗಳೊಂದಿಗೆ ಪೆÇಲೀಸ್ ಠಾಣೆಗೆ ನುಗ್ಗಿದ್ದರು ಎಂದು ಎಫ್‍ಐಆರ್‍ನಲ್ಲಿ ಹೇಳಲಾಗಿದೆ.
ವಿಝಿಂಜಂ ಪ್ರತಿಭಟನಾಕಾರರು ಭಯೋತ್ಪಾದಕರಂತೆ: ಸಚಿವ ವಿ ಶಿವನ್‍ಕುಟ್ಟಿ
0
ನವೆಂಬರ್ 28, 2022