ಕಾಸರಗೋಡು: ಮಹಿಳಾ ಸ್ವಾತಂತ್ರ್ಯದ ಬಗ್ಗೆ ಕೇಳಿಬರುತ್ತಿರುವ ಘೋಷಣೆಗಳು ಕಟ್ಟುನಿಟ್ಟಾಗಿ ಜಾರಿಗೆ ಬರುವಂತಾಗಲು ಒಗ್ಗಟ್ಟಿನ ಹೋರಾಟದ ಅಗತ್ಯವಿದೆ ಎಂದು ಕೇರಳ ಕೇಂದ್ರೀಯ ವಿಶ್ವವಿದ್ಯಾಲಯದ ಉಪಕುಲಪತಿ ಪೆÇ್ರ. ವೆಂಕಟೇಶ್ವರಲು ತಿಳಿಸಿದ್ದಾರೆ
ಅವರು ಆಂತರಿಕ ಕುಂದುಕೊರತೆಗಳ ಸಮಿತಿ, ಮಹಿಳಾ ಕೋಶ, ಸೆಂಟರ್ ಫಾರ್ ವುಮೆನ್ಸ್ ಸ್ಟಡೀಸ್ ಜಂಟಿ ಆಶ್ರಯದಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯ ನಿರ್ಮೂಲನಾ ಅಂತರಾಷ್ಟ್ರೀಯ ದಿನದ ನಿಮಿತ್ತ ಕೇರಳ ಕೇಂದ್ರೀಯ ವಿಶ್ವ ವಿದ್ಯಾಲಯ ಪೆರಿಯ ಕ್ಯಾಂಪಸ್‍ನಲ್ಲಿ ಕೇಂದ್ರದ ಸಿಬ್ಬಂದಿಗಾಗಿ ಆಯೋಜಿಸಲಾಗಿದ್ದ ಒಂದು ದಿನದ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದರು.
ವಿಶ್ವವಿದ್ಯಾನಿಲಯವು ಮಹಿಳಾ ಸ್ನೇಹಿ ಕ್ರಮಗಳಿಗೆ ಹೆಚ್ಚಿನ ಆದ್ಯತೆ ನೀಡುತ್ತಿದ್ದು, ವ್ಯಕ್ತಿಗಳು ಮತ್ತು ಸಂಘ ಸಂಸ್ಥೆಗಳು ಈ ನಿಟ್ಟಿನಲ್ಲಿ ಎಚ್ಚರಿಕೆ ವಹಿಸಬೇಕು ಎಂದು ತಿಳಿಸಿದರು.
ಸಮಾಜ ಸೇವಕಿ ವಕೀಲೆ ಮರಿಯಾ ತರಗತಿ ನಡೆಸಿದರು. ರಿಜಿಸ್ಟ್ರಾರ್ ಡಾ. ವಿ. ಮುರಳೀಧರನ್ ನಂಬಿಯಾರ್, ವಕೀಲೆ ಮನೀಶಾ, ಡಾ. ಜಯಬಾಲನ್ ಸಂಗೀತಾ, ಡಾ. ಉಮಾ ಪುರುಷೋತ್ತಮನ್, ಪೆÇ್ರ. ಕೆ.ಎ. ಜರ್ಮಿನಾ, ಡಾ.ಪಿ. ಸುಪ್ರಿಯಾ ಉಪಸ್ಥಿತರಿದ್ದರು. ದಿನಾಚರಣೆಯ ಅಂಗವಾಗಿ, ವಿವಿಧ ಡಿಸೆಂಬರ್ 10 ರವರೆಗೆ ವಿವಿಧ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಮಹಿಳಾ ದೌರ್ಜನ್ಯ ವಿರುದ್ಧ ದಿನಾಚರಣೆ:ವಿಚಾರ ಸಂಕಿರಣ
0
ನವೆಂಬರ್ 27, 2022