ತಿರುವನಂತಪುರ: ರಾಜ್ಯದ 2022-23ನೇ ಸಾಲಿನ ಎಸ್.ಎಸ್.ಎಲ್.ಸಿ. ಮತ್ತು ಪ್ಲಸ್‍ಟು ಪರೀಕ್ಷೆಯ ದಿನಾಂಕಗಳನ್ನು ಶಿಕ್ಷಣ ಸಚಿವ ವಿ. ಶಿವನ್‍ಕುಟ್ಟಿ ಪ್ರಕಟಿಸಿದ್ದಾರೆ. ಎಸ್ಸೆಲ್ಸಿ ಪರೀಕ್ಷೆ 2023ರ ಮಾರ್ಚ್ 9 ರಿಂದ 29 ರವರೆಗೆ ನಡೆಯಲಿದೆ. ನಾಲ್ಕೂವರೆ ಲಕ್ಷ ವಿದ್ಯಾರ್ಥಿಗಳು ಪ್ರಸ್ತುತ ಸಾಲಿನಲ್ಲಿ ಪರೀಕ್ಷೆ ಬರೆಯಲಿದ್ದಾರೆ.
ಏಪ್ರಿಲ್ 3ರಂದು ಮೌಲ್ಯಮಾಪನ ಆರಂಭವಾಗಲಿದೆ. ಮೇ 10ಕ್ಕೆ ಪರೀಕ್ಷೆ ಫಲಿತಾಂಶ ಪ್ರಕಟವಾಗಲಿದೆ. ಮೌಲ್ಯಮಾಪನಕ್ಕಾಗಿ ರಾಜ್ಯಾದ್ಯಂತ 70 ಶಿಬಿರಗಳು ನಡೆಯಲಿದ್ದು, 9,762 ಶಿಕ್ಷಕರು ಮೌಲ್ಯಮಾಪನ ನಡೆಸಲಿದ್ದಾರೆ ಎಂದು ಶಿಕ್ಷಣ ಸಚಿವರು ಮಾಹಿತಿ ನೀಡಿರುವರು. ಏತನ್ಮಧ್ಯೆ, 10 ನೇ ತರಗತಿಯ ವಿದ್ಯಾರ್ಥಿಗಳಿಗೆ ಮಾದರಿ ಪರೀಕ್ಷೆಗಳು ಫೆಬ್ರವರಿ 27, ರಂದು ಪ್ರಾರಂಭವಾಗುತ್ತವೆ ಮತ್ತು ಮಾ. 3 ರಂದು ಕೊನೆಗೊಳ್ಳುತ್ತವೆ.
ಹೈಯರ್ ಸೆಕೆಂಡರಿ ಮತ್ತು ವೊಕೇಶನಲ್ ಹೈಯರ್ ಸೆಕೆಂಡರಿ ಪರೀಕ್ಷೆಗಳು ಮಾರ್ಚ್ 10 ರಂದು ಪ್ರಾರಂಭವಾಗಿ ಮಾರ್ಚ್ 30 ರವರೆಗೆ ನಡೆಯಲಿದೆ. ಮಾದರಿ ಪರೀಕ್ಷೆ ಫೆಬ್ರವರಿ 27 ರಂದು ಪ್ರಾರಂಭವಾಗಿ ಮಾರ್ಚ್ 3 ರವರೆಗೆ ನಡೆಯಲಿದೆ.
ಎರಡನೇ ವರ್ಷದ ಹೈಯರ್ ಸೆಕೆಂಡರಿ ಪ್ರಾಯೋಗಿಕ ಪರೀಕ್ಷೆಗಳು ಫೆಬ್ರವರಿ 1 ರಂದು ಮತ್ತು ಪೊಕೇಶನಲ್ ಹೈಯರ್ ಸೆಕೆಂಡರಿ ಪ್ರಾಯೋಗಿಕ ಪರೀಕ್ಷೆಗಳು ಜನವರಿ 25 ರಂದು ಪ್ರಾರಂಭವಾಗುತ್ತದೆ. ಒಂಬತ್ತು ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಹೈಯರ್ ಸೆಕೆಂಡರಿ ಪರೀಕ್ಷೆ ಬರೆಯಲಿದ್ದಾರೆ. ಸುಮಾರು 60,000 ವಿದ್ಯಾರ್ಥಿಗಳು ಪೊಕೇಶನಲ್ ಹೈಯರ್ ಸೆಕೆಂಡರಿ ಪಬ್ಲಿಕ್ ಪರೀಕ್ಷೆಯನ್ನು ಬರೆಯಲಿದ್ದಾರೆ.
ಪ್ಲಸ್ ಟು ಪರೀಕ್ಷೆಗಳ ಮೌಲ್ಯಮಾಪನ ಏ. 3 ರಂದು ಪ್ರಾರಂಭವಾಗುತ್ತದೆ. ಮೇ 25ಕ್ಕೆ ಪರೀಕ್ಷೆ ಫಲಿತಾಂಶ ಪ್ರಕಟವಾಗಲಿದೆ. ಹೈಯರ್ ಸೆಕೆಂಡರಿಗಾಗಿ 82 ಮೌಲ್ಯಮಾಪನ ಶಿಬಿರಗಳು ನಡೆಯಲಿವೆ. ಸುಮಾರು 24,000 ಶಿಕ್ಷಕರು
ಮೌಲ್ಯಮಾಪನದಲ್ಲಿ ಭಾಗವಹಿಸುವರು. ಪೊಕೇಶನಲ್ ಹೈಯರ್ ಸೆಕೆಂಡರಿಗಾಗಿ ಎಂಟು ಮೌಲ್ಯಮಾಪನ ಶಿಬಿರಗಳು ನಡೆಯಲಿವೆ. ಮೌಲ್ಯಮಾಪನ ಶಿಬಿರದಲ್ಲಿ 3,500 ಶಿಕ್ಷಕರು ಭಾಗವಹಿಸಲಿದ್ದಾರೆ.
ಕೇರಳ ಎಸ್.ಎಸ್.ಎಲ್.ಸಿ, ಪ್ಲಸ್ ಟು ಪರೀಕ್ಷಾ ದಿನಾಂಕ ಪ್ರಕಟ: ಮಾದರಿ ಪರೀಕ್ಷೆಯ ದಿನಾಂಕವೂ ನಿಗದಿ
0
ನವೆಂಬರ್ 24, 2022