ಬದಿಯಡ್ಕ: ಮುಂದಿನ ಸಮಾಜದ ಸೃಷ್ಟಿಯಲ್ಲಿ ಇಂದಿನ ಮಕ್ಕಳಿಗೆ ಸಿಗುವ ವಿದ್ಯಾಭ್ಯಾಸದ ಪ್ರಭಾವವಿರುತ್ತದೆ. ಪೋಷಕರಾದ ನಾವು ಮಕ್ಕಳ ಬೆಳವಣಿಗೆಯಲ್ಲಿ ಪೂರ್ಣ ಸಹಕಾರವನ್ನು ನೀಡುವುದರಿಂದ ಉತ್ತಮ ಸಮಾಜ ನಿರ್ಮಾಣಗೊಳ್ಳುತ್ತದೆ. ಉತ್ತಮ ಭಾವನೆಗಳನ್ನು ಆರೋಗ್ಯದಾಯಕ ರಸಧಾರೆಗಳನ್ನು ಸಂಪನ್ನಗೊಳಿಸುತ್ತಾ ತನ್ಮೂಲಕ ತನ್ನತನವನ್ನು ಗಟ್ಟಿಯಾಗಿಸುವ ಪ್ರಕ್ರಿಯೆಯು ಜವಾಬ್ದಾರಿಯುತ ಪಾಲಕನಾಗಿಯೋ, ಶಿಕ್ಷಕನಾಗಿಯೋ ನಿರ್ವಹಿಸಬೇಕಾದ ಅಗತ್ಯವಿದೆ. ಇವೆಲ್ಲವೂ ಪರಿಪೂರ್ಣಗೊಂಡಾಗ ಭಾರತೀಯರಾಗಲು ಸಾಧ್ಯವಿದೆ ಎಂದು ರಾಜ್ಯಪ್ರಶಸ್ತಿ ವಿಜೇತ ನಿವೃತ್ತ ಅಧ್ಯಾಪಕ ರಮೇಶ್ ಎಂ.ಬಾಯಾರು ನುಡಿದರು.
ಬದಿಯಡ್ಕ ಶ್ರೀ ಭಾರತೀ ವಿದ್ಯಾಪೀಠದಲ್ಲಿ ಮಕ್ಕಳ ಹೆತ್ತವರಿಗಾಗಿ ಆಯೋಜಿಸಿದ ಒಂದು ದಿನದ ಕಾರ್ಯಾಗಾರದ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು.
ಮಕ್ಕಳ ಜೊತೆಗಿನ ಒಡನಾಟವು ಅವರಲ್ಲಿ ಅದ್ಭುತವಾದ ಪ್ರಭಾವವನ್ನು ಬೀರುತ್ತದೆ. ಆತ್ಮೀಯತೆಯ ಸಂವಹನವು ಅವರಲ್ಲಿ ವಿಶ್ವಾಸವನ್ನು ತಂದೊಡ್ಡುತ್ತದೆ. ಪ್ರಬುದ್ಧತೆಯ ವಿಚಾರ ವಿನಿಮಯಗಳು ಬೌದ್ಧಿಕ ವಿಕಾಸಕ್ಕೆ ರಹದಾರಿಯಾಗುತ್ತವೆ. ಪ್ರಾಮಾಣಿಕತೆಯ ನಡೆಗಳು ಸಚ್ಚಾರಿತ್ರ್ಯಕ್ಕೆ ಕನ್ನಡಿಯಾಗುತ್ತದೆ. ಇಂತಹ ಪ್ರಭಾವಲಯದಲ್ಲಿ ಬೆಳವಣಿಗೆ ಹೊಂದುವಂತಹ ಮಗು ಸಾಮಾಜಿಕವಾಗಿ ಗುರುತಿಸಲ್ಪಡುತ್ತದೆ. ಮಗುವಿನ ಸರ್ವಾಂಗೀಣ ಅಭಿವೃದ್ಧಿಗಾಗಿ ನಮ್ಮ ದಿನಚರಿಯಲ್ಲಿ ಸಾಧ್ಯವಿರುವ ಬದಲಾವಣೆಗಳನ್ನು ನಾವು ತಂದುಕೊಳ್ಳಬೇಕಾಗಿದೆ. ಇದುವೇ ನಾವು ಮಗುವಿಗೆ ಕೊಡುವ ಸಹಕಾರವಾಗಿದೆ ಎಂದರು.
ನಿವೃತ್ತ ಪ್ರಾಂಶುಪಾಲ ಡಾ. ಬೇ.ಸೀ. ಗೋಪಾಲಕೃಷ್ಣ ಭಟ್ ದೀಪಬೆಳಗಿಸಿ ಉದ್ಘಾಟಿಸಿದರು. ಪಾಲಕರ ಸಂಘದ ಅಧ್ಯಕ್ಷ ಅರುಣ ಕುಮಾರ ಕಂಡೆತ್ತೋಡಿ ಶುಭಾಶಂಸನೆಗೈದರು. ಶಾಲಾ ಮುಖ್ಯೋಪಾಧ್ಯಾಯ ಸತ್ಯನಾರಾಯಣ ಶರ್ಮ ಪಂಜಿತ್ತಡ್ಕ ಪ್ರಾಸ್ತಾವಿಕ ನುಡಿಗಳನ್ನಾಡುತ್ತಾ ಕಾರ್ಯಕ್ರಮದ ಔಚಿತ್ಯದ ಕುರಿತು ಮಾತನಾಡಿದರು. ಕೊನೆಯ ಅವಯ ಪ್ರಶ್ನೋತ್ತರದಲ್ಲಿ ಪಾಲಕರ ಸಕ್ರಿಯತೆಯು ಮನಗಂಡಿತು. ಸ್ವಸ್ತಿಕಾ ಮಾತಾಶ್ರೀ ಸ್ವಾಗತಿಸಿ ಮೋನಿಶಾ ಮಾತಾಶ್ರೀ ವಂದನಾರ್ಪಣೆಗೈದರು.
ಮಕ್ಕಳ ಬೆಳವಣಿಗೆಯಲ್ಲಿ ಪಾಲಕರ ಸಹಕಾರ ಎಂತಿರಬೇಕು: ಬದಿಯಡ್ಕ ಶ್ರೀ ಃಂರತೀ ವಿದ್ಯಾಪೀಠದಲ್ಲಿ ಪಾಲಕರಿಗಾಗಿ ಕಾರ್ಯಾಗಾರದಲ್ಲಿ ರಮೇಶ್ ಎಂ.ಬಾಯಾರು
0
ನವೆಂಬರ್ 26, 2022
Tags