ಕಾಸರಗೋಡು: ವಿವಿಧ ಅನಿಲ ಕಂಪನಿಗಳು ನೀಡುತ್ತಿದ್ದ ಪೆÇ್ರೀತ್ಸಾಹ ಧನ ರದ್ದತಿಯಿಂದ ಪ್ರತಿ ಸಿಲಿಂಡರ್ ಬೆಲೆ 240 ರೂ. ಹೆಚ್ಚಳಗೊಂಡಿದ್ದು, 1780 ರೂ.ಗೆ ಲಭಿಸುತ್ತಿದ್ದ ಸಿಲಿಂಡರ್ ಪ್ರಸಕ್ತ 2000 ರೂ.ಆಗಿ ಏರಿಕೆಯಾಗಿದೆ. ಈಗಾಗಲೇ ಅವನತಿಯ ಹಾದಿಯಲ್ಲಿರುವ ಹೊಟೇಲ್ ರೆಸ್ಟೊರೆಂಟ್‍ಗಳು ಇದರಿಂದ ಮತ್ತಷ್ಟು ಸಂಕಷ್ಟ ಎದುರಿಸುವಂತಾಗಿದೆ.
ಏರುತ್ತಿರುವ ಅನಿಲ ಬೆಲೆಗಳ ಜೊತೆಗೆ, ಹೋಟೆಲ್ ಖಾದ್ಯಗಳ ಬೆಲೆ ಏರಿಕೆಯಾಗಬೇಕಾಗುತ್ತಿದ್ದು, ಇದು ವ್ಯಾಪಾರದ ಮೇಲೆ ಪರಿಣಾಮ ಬೀರುತ್ತದೆ. ಅಸ್ತಿತ್ವದಲ್ಲಿರುವ ವಾಣಿಜ್ಯ ಸಿಲಿಂಡರ್‍ಗಳಿಗೆ ಕಂಪನಿಗಳು ಪಾವತಿಸುತ್ತಿದ್ದ ಪೆÇ್ರೀತ್ಸಾಹಕ ತೆರಿಗೆಯನ್ನು ತಪ್ಪಿಸಲು ಸರ್ಕಾರ ಸಿದ್ಧವಾಗಬೇಕು. ಅಕ್ಕಿ ಮತ್ತು ತರಕಾರಿಗಳಿಂದ ತೊಡಗಿ, ಎಲ್ಲ ಸಾಮಗ್ರಿ ಧಾರಣೆ ಗಗನಕ್ಕೇರಿಕೆಯಾಗಿದ್ದು, ಗ್ಯಾಸ್ ಸಇಲಿಂಡರ್ ಬೆಲೆಯೇರಿಕೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಕೇಂದ್ರ ಸರ್ಕಾರ ತೈಲ ಕಂಪನಿಗಳಿಗೆ ನೀಡುತ್ತಿರುವ ಪೆÇ್ರೀತ್ಸಾಹ ಧನವನ್ನು ಮರುಸ್ಥಾಪಿಸಬೇಕು ಎಂದು ಕೇರಳ ವರ್ತಕರ ಮತ್ತು ಕೈಗಾರಿಕೆಗಳ ಸಮನ್ವಯ ಸಮಿತಿಯ ರಾಜ್ಯಾಧ್ಯಕ್ಷ ರಾಜು ಅಪ್ಸರಾ ಹೇಳಿಕೆಯಲ್ಲಿ ಒತ್ತಾಯಿಸಿದ್ದಾರೆ.
ಗ್ಯಾಸ್ ಸಿಲಿಂಡರ್ ಪ್ರೋತ್ಸಾಹ ಧನ ರದ್ದತಿಯಿಂದ ಹೋಟೆಲ್ ಉದ್ದಿಮೆಗೆ ಸಂಕಷ್ಟ
0
ನವೆಂಬರ್ 10, 2022
Tags