ಕಾಸರಗೋಡು: ಜಿಲ್ಲಾ ಶಾಲಾ ಕಲಾ ಉತ್ಸವ ನ. 28ರಂದು ಚಾಯೋತ್ ಸರ್ಕಾರಿ ಪ್ರೌಢಶಾಲೆಯಲ್ಲಿ ಆರಂಭವಾಗಲಿದ್ದು, ಐದು ದಿವಸಗಳ ಕಾಲ ಜಿಲ್ಲೆಯ ನೂರಾರು ಮಂದಿ ವಿದ್ಯಾರ್ಥಿಗಳು ತಮ್ಮ ಕಲಾ ಪ್ರತಿಭೆ ಪ್ರದರ್ಶಿಸಲಿದ್ದಾರೆ. ನ. 28ಮತ್ತು 29ರಂದು ವೇದಿಕೇತರ ಸ್ಪರ್ಧೆಘಳು ನಡೆಯಲಿದೆ.
ನ. 29ರಂದು ಸಂಜೆ 4ಕ್ಕೆ ಕೇರಳ ಶಿಕ್ಷಣ ಸಚಿವ ವಿ.ಶಿವನ್ ಕುಟ್ಟಿ ಕಲೋತ್ಸವ ಉದ್ಘಾಟಿಸುವರು. 30ರಿಂದ ವೇದಿಕೆ ಸ್ಪರ್ಧೆಗಳು ಆರಂಭವಾಗಲಿವೆ 12 ವಿವಿಧ ಕೇಂದ್ರಗಳಲ್ಲಿ 309 ಸ್ಪರ್ಧಾ ವಿಭಾಗಗಳಲ್ಲಾಗಿ ಸುಮಾರು 5000 ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ. ಡಿಸೆಂಬರ್ 2 ರಂದು ಸಂಜೆ 4ಕ್ಕೆ ಬಂದರು, ಪುರಾತತ್ವ ಖಾತೆ ಸಚಿವ ಅಹ್ಮದ್ ದೇವರ್ ಕೋವಿಲ್ ಸಮಾರೋಪ ಸಮಾರಂಭ ಉದ್ಘಾಟಿಸುವರು.
ಇಂದಿನಿಂದ ಕಾಸರಗೋಡು ಜಿಲ್ಲಾ ಶಾಲಾ ಕಲೋತ್ಸವ: ನಾಳೆ ಶಿಕ್ಷಣ ಸಚಿವರಿಂದ ಔಪಚಾರಿಕ ಉದ್ಘಾಟನೆ
0
ನವೆಂಬರ್ 27, 2022