HEALTH TIPS

ಚಳಿಗಾಲದಲ್ಲಿ ಕಾಡುವ ಹಲ್ಲು ನೋವು ತಡೆಯಲು ತಜ್ಞರ ಸಲಹೆ ಏನು?

Top Post Ad

Click to join Samarasasudhi Official Whatsapp Group

Qries

 ಚಳಿಗಾಲ ಈಗಾಗಲೇ ಆರಂಭವಾಗಿದೆ. ಈ ಶೀತ ಹವಾಮಾನವು ನಿಮ್ಮ ತ್ವಚೆಯನ್ನಷ್ಟೇ ಒಣಗಿಸುವುದಿಲ್ಲ. ಇದರ ಜೊತೆಗೆ ಅನೇಕರು ಹಲ್ಲಿನ ಸಮಸ್ಯೆಗಳನ್ನು ಎದುರಿಸುತ್ತಾರೆ. ಹೌದು, ಚಳಿಗಾಲದಲ್ಲಿ ಹಲ್ಲಿನ ಸಂವೇದನೆ, ವಸಡಿನಲ್ಲಿ ನೋವು, ರಕ್ತಸ್ರಾವ ಇಂತಹ ಸಮಸ್ಯೆಗಳಿಗೆ ಗುರಿಯಾಗುತ್ತಾರೆ. ಇದೇ ಕಾರಣದಿಂದ ಕೆಲವರಿಗೆ ಚಳಿಗಾಲ ಬಂತೆಂದರೆ ಚಿಂತೆ ಉಂಟಾಗುವುದು. ಹಾಗಾದರೆ, ಚಳಿಗಾಲದಲ್ಲಿ ಹಲ್ಲು ನೋವು ಬರದೇ ಇರಲು, ನಾವು ಎಂತಹ ಸಲಹೆಗಳನ್ನು ತೆಗೆದುಕೊಳ್ಳಬೇಕಾಗುತ್ತದೆ ಎಂಬುದನ್ನು ಇಲ್ಲಿ ನೋಡೋಣ.

ಚಳಿಗಾಲದಲ್ಲಿ ಹಲ್ಲು ನೋವನ್ನು ತಡೆಯಲು ಸಲಹೆಗಳನ್ನು ಈ ಕೆಳಗೆ ನೀಡಲಾಗಿದೆ:

1. ಹೈಡ್ರೇಟೆಡ್ ಆಗಿರಿ

ಚಳಿಗಾಲದ ಗಾಳಿಯಲ್ಲಿ ತೇವಾಂಶದ ಕೊರತೆ ಇರುತ್ತದೆ. ಇದು ನಿರ್ಜಲೀಕರಣಕ್ಕೆ ಕಾರಣವಾಗಬಹುದು. ಇದರಿಂದ ಬಾಯಿಯಲ್ಲಿ ಲಾಲಾರಸ ಕಡಿಮೆ ಉತ್ಪತ್ತಿಯಾಗಬಹುದು. ಲಾಲಾರಸವು ನೈಸರ್ಗಿಕವಾಗಿ ಬಾಯಿಯನ್ನು ಶುದ್ಧೀಕರಿಸಲು ಸಹಾಯ ಮಾಡುತ್ತದೆ ಜೊತೆಗೆ ಹಲ್ಲು ಹುಳ ಹಿಡಿಯಲು ಕಾರಣವಾಗುವ ಬ್ಯಾಕ್ಟೀರಿಯಾದ ಸಂಖ್ಯೆಯನ್ನು ಕಡಿಮೆ ಮಾಡುತ್ತದೆ. ಆದ್ದರಿಂದ ನಿರ್ಜಲೀಕರಣವನ್ನು ತಪ್ಪಿಸಲು ಪ್ರತಿದಿನ ಕನಿಷ್ಠ 2 ಲೀಟರ್ ನೀರನ್ನು ಕುಡಿಯುವುದು ಇನ್ನೂ ಮುಖ್ಯವಾಗಿದೆ. ನಿಮ್ಮ ಬಾಯಿಯನ್ನು ಶುದ್ಧೀಕರಿಸಲು ನೀರು ಸಹ ಸಹಾಯ ಮಾಡುತ್ತದೆ.

2. ಸಕ್ಕರೆ ಸೇವನೆಯನ್ನು ಮಿತಿಗೊಳಿಸಿ

ಚಳಿಗಾಲದಲ್ಲಿ ದೇಹ ಬೆಚ್ಚಗಿರಲು ಆಗಾಗ ಚಹಾ ಅಥವಾ ಕಾಫಿ ಕುಡಿಯುವುದು ಸಾಮಾನ್ಯ. ಆದರೆ, ಈ ವೇಳೆ ನೀವು ಸೇವಿಸುವ ಸಕ್ಕರೆಯ ಪ್ರಮಾಣದ ಮೇಲೆ ಗಮನವಿರಲಿ. ಏಕೆಂದರೆ, ಹಲ್ಲು ಹಾಗೂ ವಸಡಿನ ಸಮಸ್ಯೆಗೆ ಕಾರಣವಾಗುವ ಬ್ಯಾಕ್ಟೀರಿಯಾವನ್ನು ಸಕ್ಕರೆ ಆಕರ್ಷಿಸುತ್ತದೆ. ಆದ್ದರಿಂದ, ಬಾಯಿಯ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಕ್ಕರೆಯ ಸೇವನೆಯನ್ನು ಕಡಿಮೆ ಮಾಡಿ.

3. ಹಲ್ಲುಜ್ಜುವ ಕ್ರಮಗಳ ಬಗ್ಗೆ ಎಚ್ಚರಿಕೆಯಿರಲಿ

ನೀವು ಹಲ್ಲುಗಳ ಸೆನ್ಸಿಟಿವಿಟಿ ಸಮಸ್ಯೆಗೆ ಗುರಿಯಾಗಿದ್ದರೆ, ಚಳಿಗಾಲದಲ್ಲಿ, ಮೃದುವಾದ ಹಲ್ಲಿರುವ ಟೂತ್ ಬ್ರಷ್ ಬಳಸುವುದು ಉತ್ತಮ. ಜೊತೆಗೆ ಹಲ್ಲುಜ್ಜುವಾಗ, ಒಸಡುಗಳ ಸುತ್ತ ನಿಧಾನವಾಗಿ ಬ್ರಷ್ ಮಾಡಿ. ಅಷ್ಟೇ ಅಲ್ಲ, ಪೊಟ್ಯಾಸಿಯಮ್ ನೈಟ್ರೇಟ್ ಮತ್ತು ಸ್ಟ್ರಾಂಷಿಯಂ ಕ್ಲೋರೈಡ್ ಹೊಂದಿರುವ ಟೂತ್‌ಪೇಸ್ಟ್ ಅನ್ನು ಬಳಸಿ. ಇಂತಹ ಪದಾರ್ಥಗಳು ಹಲ್ಲಿನ ನೋವನ್ನು ತಡೆಯುವ ಅಂಶಗಳನ್ನು ಹೊಂದಿರುತ್ತವೆ.

4. ನಿಯಮಿತವಾಗಿ ದಂತ ತಪಾಸಣೆಗೆ ಹೋಗಿ

ನಿಮ್ಮ ಬಾಯಿಯ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕಾದರೆ, ಪ್ರತಿ ಆರು ತಿಂಗಳಿಗೊಮ್ಮೆ ಹಲ್ಲಿನ ಡಾಕ್ಟರ್ ಭೇಟಿ ಆಗುವುದು ಅತ್ಯಗತ್ಯ. ಹಲ್ಲಿನ ಸಮಸ್ಯೆಗಳು ಹೃದ್ರೋಗ ಮತ್ತು ಮಧುಮೇಹವನ್ನು ಅಭಿವೃದ್ಧಿಪಡಿಸುವ ಅಪಾಯವನ್ನು ಹೆಚ್ಚಿಸುತ್ತವೆ. ಆದ್ದರಿಂದ, ನಿಮ್ಮ ಹಲ್ಲಿನ ಆರೋಗ್ಯದ ಬಗ್ಗೆಯೂ ಕಾಳಜಿ ವಹಿಸುವುದು ಮುಖ್ಯವಾಗಿದೆ.

5. ಹುಣ್ಣುಗಳ ಬಗ್ಗೆ ಗಮನವಿರಲಿ

ಚಳಿಗಾಲದ ಗಾಳಿಯು ನಿಮ್ಮನ್ನು ಬಾಯಿ ಅಥವಾ ಶೀತ ಹುಣ್ಣುಗಳಿಗೆ ಹೆಚ್ಚು ಒಳಗಾಗುವಂತೆ ಮಾಡುತ್ತದೆ. ಏಕೆಂದರೆ ಚಳಿಗಾಲದಲ್ಲಿ HSV -1 (ಹರ್ಪಿಸ್ ಸಿಂಪ್ಲೆಕ್ಸ್) ಪ್ರತಿಕ್ರಿಯೆಯನ್ನು ತೋರುತ್ತದೆ. ಶೀತ ಹುಣ್ಣುಗಳ ಅಪಾಯವನ್ನು ಕಡಿಮೆ ಮಾಡಲು ನಿಮ್ಮ ಮುಖವನ್ನು ಸ್ಕಾರ್ಫ್ನಲ್ಲಿ ಸುತ್ತಿ ಮತ್ತು ತುಟಿಗಳನ್ನು ತೇವಗೊಳಿಸಿ. ಶೀತ, ಜ್ವರ ಮತ್ತು ಬ್ಯಾಕ್ಟೀರಿಯಾದ ಸೋಂಕಿನಂತಹ ಕಾಯಿಲೆಗಳು ಹವಾಮಾನವು ತಂಪಾಗಿರುವಾಗ ಕಾಣಿಸಿಕೊಳ್ಳುತ್ತವೆ. ಈ ಸಮಸ್ಯೆಗಳು ಸಹ ಶೀತ ಹುಣ್ಣುಗಳಿಗೆ ಕಾರಣವಾಗಿವೆ. ಆದ್ದರಿಂದ, ಶೀತ ಅಥವಾ ಕೆಮ್ಮಿನಿಂದ ಬಳಲುತ್ತಿದ್ದರೆ, ವೈದ್ಯರನ್ನು ಭೇಟಿ ಮಾಡಿ ಸರಿಯಾದ ಚಿಕಿತ್ಸೆಯನ್ನು ತೆಗೆದುಕೊಳ್ಳಿ.

6. ಆಮ್ಲೀಯ ಆಹಾರ ಮತ್ತು ಪಾನೀಯಗಳನ್ನು ತಪ್ಪಿಸಿ

ಆಮ್ಲೀಯ ಆಹಾರ ಮತ್ತು ಪಾನೀಯಗಳೆಂದರೆ ಸಿಟ್ರಸ್ ಅಂಶವಿರುವ ಆಹಾರಗಳು. ಇವು ಹಲ್ಲುಗಳ ಹೊರ ಪದರವನ್ನು (ಎನಾಮೆಲ್) ಮೃದುಗೊಳಿಸುತ್ತವೆ, ಇದು ಹಲ್ಲು ಕೊಳೆಯುವುದಕ್ಕೆ ಮತ್ತು ಸವೆತಕ್ಕೆ ಒಳಗಾಗುತ್ತದೆ. ಆದ್ದರಿಂದ ನಿಮ್ಮ ಆಹಾರಕ್ರಮವನ್ನು ಪರಿಶೀಲಿಸಿ, ಆಮ್ಲೀಯ ಅಥವಾ ಆಸಿಡ್‌ಯುಕ್ತ ಆಹಾರವನ್ನು ಸೇವಿಸಿದ ನಂತರ ನೀರಿನಿಂದ ಅಥವಾ ಮೌತ್ವಾಶ್ನಿಂದ ಬಾಯಿ ತೊಳೆಯಲು ಪ್ರಯತ್ನಿಸಿ.

7. ಮೌತ್‌ಗಾರ್ಡ್ ಬಳಸಿ

ಸಾಮಾನ್ಯವಾಗಿ ಯಾವುದಾದರೂ ಆಟದಲ್ಲಿ ಭಾಗವಹಿಸುವಾಗ ಹಲ್ಲಿಗೆ ಗಾಯವಾಗುವುದನ್ನು ತಡೆಗಟ್ಟಲು ಬಳಸುವ ಗಮ್‌ಶೀಲ್ಡ್ ಎಂದೂ ಕರೆಯಲ್ಪಡುವ ಮೌತ್‌ಗಾರ್ಡ್ ಅನ್ನು ಬಳಸಿ. ಇದು ಚಳಿಗಾಲದಲ್ಲಿ ನಿಮ್ಮ ಹಲ್ಲು ಮತ್ತು ಒಸಡುಗಳನ್ನು ರಕ್ಷಿಸಲು ಸಹಾಯ ಮಾಡುತ್ತದೆ. ನಿಮಗೆ ಮೌತ್‌ಗಾರ್ಡ್ ಅಗತ್ಯವಿದೆಯೇ ಅಥವಾ ಬೇಡವೇ ಎಂಬ ಗೊಂದಲವಿದ್ದರೆ ದಂತವೈದ್ಯರನ್ನು ಸಂಪರ್ಕಿಸಿ.

ಈ ಎಲ್ಲಾ ಸಲಹೆಗಳನ್ನು ಮನಸ್ಸಿನಲ್ಲಿಟ್ಟುಕೊಳ್ಳುವುದು ಚಳಿಗಾಲದಲ್ಲಿ ನಿಮ್ಮ ಬಾಯಿಯ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಬಾಯಿಯ ಆರೋಗ್ಯ ಸಮಸ್ಯೆಗಳ ಯಾವುದೇ ಲಕ್ಷಣಗಳನ್ನು ಕಂಡಲ್ಲಿ, ಹತ್ತಿರದ ದಂತ ಚಿಕಿತ್ಸಾಲಯಕ್ಕೆ ಭೇಟಿ ನೀಡಿ.


 

Below Post Ad

src="https://blogger.googleusercontent.com/img/b/R29vZ2xl/AVvXsEik3hLMvgO1WDICUKu_VF5lQRG3CMZau_AmC5MorS73B9lRYpLdDKJGTnB8c-U47BHqrAJ7dkiQUqiUWGQ6qg9A5jtCXrPkzIP4GPJfI00HmwhHX-3VG35FjkD_MxxI10r2v4FqSQ8LuyjG/w640-h360/samarasa+new+add.JPG" width="500px" / />



Tags

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.
Qries