ಕುಂಬಳೆ: ಧರ್ಮತ್ತಡ್ಕ ಶ್ರೀ ದುರ್ಗಾಪರಮೇಶ್ವರಿ ಹೈಯರ್ ಸೆಕೆಂಡರಿ ಶಾಲೆಯ ಪ್ರೌಢಶಾಲಾ ಸಭಾಂಗಣದಲ್ಲಿ ಕೇರಳ ಶಾಲಾ ಪಠ್ಯಕ್ರಮ ಪರಿಷ್ಕರಣೆ - 2022 ಇದರ ಅಂಗವಾಗಿ ಪಠ್ಯಕ್ರಮ ಸುಧಾರಣೆಗಾಗಿ ಸಾರ್ವಜನಿಕ ಚರ್ಚೆಯು ಜರಗಿತು.
ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷ ಜೋನ್ ಡಿಸೋಜ ಅಧ್ಯಕ್ಷತೆ ವಹಿಸಿದ್ದರು.ಹೈಯರ್ ಸೆಕೆಂಡರಿ ಪ್ರಾಂಶುಪಾಲ ರಾಮಚಂದ್ರ ಭಟ್ ಶುಭಾಶಂಸನೆಗೈದು, ಪಠ್ಯಕ್ರಮ ಪರಿಷ್ಕರಣೆಯ ಚರ್ಚೆಯಲ್ಲಿ ಸಾರ್ವಜನಿಕರು ಮುಕ್ತವಾಗಿ ಪಾಲ್ಗೊಳ್ಳುವಂತೆ ಕರೆಯಿತ್ತರು. ಶಾಲಾ ಮುಖ್ಯೋಪಾಧ್ಯಾಯ ಇ. ಎಚ್. ಗೋವಿಂದ ಭಟ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಅಧ್ಯಾಪಕ ಶಶಿಕುಮಾರ್ ಪಿ. ಸಾರ್ವಜನಿಕ ಚರ್ಚೆಗಿರುವ ವಿಷಯಗಳ ಕುರಿತು ಸಮಗ್ರ ವಿವರಣೆಯನ್ನಿತ್ತರು. ಬಳಿಕ ಆಹ್ವಾನಿತರನ್ನು ಗುಂಪುಗಳನ್ನಾಗಿ ವಿಂಗಡಿಸಿ ಅಭಿಪ್ರಾಯಗಳನ್ನು ಸಂಗ್ರಹಿಸಲಾಯಿತು. ಅಧ್ಯಾಪಕ ಶಿವಪ್ರಸಾದ್ ಸಿ. ವಿಷಯವನ್ನು ಕ್ರೋಢೀಕರಸಿ ಮಂಡಿಸಿದರು. ಮಾತೃ ಸಂಘದ ಅಧ್ಯಕ್ಷೆ ಪುಷ್ಪಾವತಿ ಉಪಸ್ಥಿತರಿದ್ದರು.
ಧರ್ಮತ್ತಡ್ಕ ಪ್ರೌಢಶಾಲೆಯಲ್ಲಿ ಪಠ್ಯಪದ್ಧತಿ ಪರಿಷ್ಕರಣೆಯ ಸಾರ್ವಜನಿಕ ಚರ್ಚೆ
0
ನವೆಂಬರ್ 14, 2022