ಮುಳ್ಳೇರಿಯ: ದೇಲಂಪಾಡಿ ಶಿವಗಿರಿ ನಗರ ಶ್ರೀ ಧರ್ಮಶಾಸ್ತಾ ಭಜನಾ ಮಂದಿರದ 20ನೇ ವಾರ್ಷಿಕೋತ್ಸವ ಶನಿವಾರ ವಿವಿಧ ಕಾರ್ಯಕ್ರಮಗಳೊಂದಿಗೆ ಜರಗಿತು. ಬೆಳಗ್ಗೆ ಗಣಪತಿ ಹೋಮ, ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ, ಮಧ್ಯಾಹ್ನ ಮಹಾಪೂಜೆ, ಅನ್ನ ಸಂತರ್ಪಣೆ ನಂತರ ಇಂದ್ರಜಿತು ಕಾಳಗ ಯಕ್ಷಗಾನ ತಾಳಮದ್ದಳೆ, ಸಂಜೆ ಭಜನಾಮೃತ ನಡೆಯಿತು.
ಇದೇ ವೇಳೆ 2023ರಲ್ಲಿ ಭಜನಾ ಮಂದಿರದಲ್ಲಿ ನಡೆಯಲಿರುವ ಅಯ್ಯಪ್ಪ ದೀಪೆÇೀತ್ಸವದ ಲಕ್ಕಿಕೂಪನ್‍ನನ್ನು ಬಿಡುಗಡೆಗೊಳಿಸಲಾಯಿತು. ಮುಂಡೋಳು ಶ್ರೀ ದುರ್ಗಾಪರಮೇಶ್ವರೀ ಮಹಾವಿಷ್ಣು ಶಾಸ್ತಾರ ದೇವಸ್ಥಾನದ ಮೊಕ್ತೇಸರ ಎ.ಬಿ.ರಘುರಾಮ ಬಲ್ಲಾಳ್ ಲಕ್ಕಿ ಕೂಪನ್ ಬಿಡುಗಡೆಗೊಳಿಸಿದರು.
ಮುಖ್ಯ ಅತಿಥಿಗಳಾಗಿ ವಿಜಯಕುಮಾರ್ ನಾಯರ್, ಎಂ.ಎಸ್.ಹರಿಪ್ರಸಾದ್, ಬಾಲಕೃಷ್ಣ , ರಂಗನಾಥ ಶೆಣೈ , ಗಣೇಶ್ ವತ್ಸ , ಜಯಪ್ರಕಾಶ್ ಬೇಂಗತ್ತಡ್ಕ, ಕೊರಗಪ್ಪ ಬೆಳ್ಳಿಗೆ, ಚಂದು ಮಾಸ್ತರ್, ಸಂಜೀವ ರೈ, ಎಂ.ಕೆ.ನಾರಾಯಣ ಉಪಸ್ಥಿತರಿದ್ದರು. ಈ ವೇಳೆ ಮಂದಿರದ ಗುರುಸ್ವಾಮಿ ವಿಠಲ ಶೆಟ್ಟಿ , ಸಮಿತಿಯ ಅಧ್ಯಕ್ಷ ಕೆ.ಇ.ಪಾಣೂರು, ಕಾರ್ಯದರ್ಶಿ ನಾರಾಯಣ ಶೆಟ್ಟಿ, ಸಮಿತಿ ಪದಾಧಿಕಾರಿಗಳಾದ ಭಾಸ್ಕರ, ಜಿ.ಕೆ.ಶೆಟ್ಟಿ , ಕಿಶೋರ್, ಜಗದೀಶ್, ಹರೀಶ್ ಮೊದಲಾದವರು ಉಪಸ್ಥಿತರಿದ್ದರು. ಪ್ರದೀಪ್ ಕೆ.ವಿ. ಸ್ವಾಗತಿಸಿ, ವಂದಿಸಿದರು.
ದೇಲಂಪಾಡಿ ಭಜನಾ ಮಂದಿರ ವಾರ್ಷಿಕೋತ್ಸವ: ಲಕ್ಕಿ ಕೂಪನ್ ಬಿಡುಗಡೆ
0
ನವೆಂಬರ್ 28, 2022
Tags