ಕುಂಬಳೆ: ಕೀರ್ತನಕುಟೀರದ ಆಶ್ರಯದಲ್ಲಿ ನಡೆಯುವ " ಕೀರ್ತನೋತ್ಸವ-22 ಹಾಗೂ 12 ನೇ ವರ್ಷದ ಹರಿಕಥಾ ಸಪ್ತಾಹ" ಕುಂಬಳೆ ಕೃಷ್ಣನಗರದ ಮೌನೇಶ ಮಂದಿರದಲ್ಲಿನ 'ಪುರಂದರ ವೇದಿಕೆ'ಯಲ್ಲಿ ಶುಭಾರಂಭಗೊಂಡಿತು.
ಖ್ಯಾತ ಯಕ್ಷಗಾನ ಭಾಗವತರೂ ಪ್ರಸಂಗಕರ್ತರೂ ಆದ ಶೇಡಿಗುಮ್ಮೆ ವಾಸುದೇವ ಭಟ್ ದೀಪ ಬೆಳಗಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಕವಿ, ಪತ್ರಕರ್ತ ರಾಧಾಕೃಷ್ಣ ಕೆ. ಉಳಿಯತ್ತಡ್ಕ, ಹರಿಕಥಾ ಪರಿಷತ್ ಮಂಗಳೂರು ಇದರ ಪ್ರಧಾನ ಕಾರ್ಯದರ್ಶಿ ತೋನ್ಸೆ ಪುಷ್ಕಳ ಕುಮಾರ್, ಕಣಿಪುರ ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ, ಉದ್ಯಮಿ ರಘುನಾಥ ಪೈ, ಕುಂಬಳೆ, ಕುಂಬಳೆ ಗ್ರಾಮಪಂಚಾಯತಿ ಸದಸ್ಯೆ ಶೋಭ, ಹರಿಕಥಾ ಸಪ್ತಾಹ ಸಮಿತಿ ಅಧ್ಯಕ್ಷ ತಿರುಮಲೇಶ್ ಭಟ್ ಮರುವಳ ಹಾಗೂ ಕೀರ್ತನಕುಟೀರದ ಸಂಚಾಲಕ ಶಂ.ನಾ. ಅಡಿಗ ಕುಂಬಳೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.