ರೇವಾ: ನೀರಿನ ಸಂರಕ್ಷಣೆ ಕುರಿತು ರೇವಾ ಕ್ಷೇತ್ರದ ಬಿಜೆಪಿ ಸಂಸದ ಜನಾರ್ದನ್ ಮಿಶ್ರಾ ವಿಚಿತ್ರ ಹೇಳಿಕೆ ನೀಡಿ ಸುದ್ದಿಯಾಗಿದ್ದಾರೆ.
'ಭೂಮಿ ನೀರಿನಿಂದ ಒಣಗುತ್ತಿವೆ, ಅದನ್ನು ಉಳಿಸಬೇಕು. ಒಂದೋ ಗುಟ್ಕಾ ತಿನ್ನಿರಿ, ಮದ್ಯವನ್ನು ಸೇವಿಸಿ, ಥಿನ್ನರ್ ವಾಸನೆ ಮಾಡಿ ಅಥವಾ ಅಯೋಡೆಕ್ಸ್ ತಿನ್ನಿರಿ ಆದರೆ ನೀರಿನ ಮಹತ್ವವನ್ನು ಅರ್ಥಮಾಡಿಕೊಳ್ಳಿ' ಎಂದು ಜಲ ಸಂರಕ್ಷಣಾ ಕಾರ್ಯಾಗಾರದಲ್ಲಿ ಜನಾರ್ದನ್ ಮಿಶ್ರಾ ಹೇಳಿದ್ದಾರೆ.
ರೇವಾ ಕೃಷ್ಣರಾಜ್ ಕಪೂರ್ ಸಭಾಂಗಣದಲ್ಲಿ ಭಾನುವಾರ ನಡೆದ ಕಾರ್ಯಾಗಾರದಲ್ಲಿ ಸಂಸದರು ಈ ಹೇಳಿಕೆ ನೀಡಿದ್ದು ಅವರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
'ಯಾವುದೇ ಸರ್ಕಾರವು ನೀರಿನ ತೆರಿಗೆಯನ್ನು ಮನ್ನಾ ಮಾಡಲು ಘೋಷಿಸಿದರೆ ನಾವು ನೀರಿನ ತೆರಿಗೆಯನ್ನು ಪಾವತಿಸುತ್ತೇವೆ. ಆದರೆ ನೀವು ವಿದ್ಯುತ್ ಬಿಲ್ ಸೇರಿದಂತೆ ಉಳಿದ ತೆರಿಗೆಗಳನ್ನು ಮನ್ನಾ ಮಾಡಬಹುದು ಎಂದು ಅವರಿಗೆ ತಿಳಿಸಿ ಎಂದು ಅವರು ಹೇಳಿದರು.
ಮಿಶ್ರಾ ಸುದ್ದಿಯಾಗುತ್ತಿರುವುದು ಇದೇ ಮೊದಲಲ್ಲ. ಅವರು ತಮ್ಮ ಅನಿರೀಕ್ಷಿತ ವಿಚಿತ್ರ ಹೇಳಿಕೆಗಳು ಮತ್ತು ಚಟುವಟಿಕೆಗಳ ಮೂಲಕ ಸುದ್ದಿಯಾಗುತ್ತಿರುತ್ತಾರೆ. ಇತ್ತೀಚೆಗಷ್ಟೇ ಆತ ತನ್ನ ಕೈಯಿಂದಲೇ ಶೌಚಾಲಯವನ್ನು ಸ್ವಚ್ಛಗೊಳಿಸುತ್ತಿರುವ ವಿಡಿಯೋವೊಂದು ವೈರಲ್ ಆಗಿತ್ತು.