ಪಂಪಾ: ಶಬರಿಮಲೆ ಯಾತ್ರೆ ಆರಂಭಗೊಂಡರೂ ಸನ್ನಿಧಿ, ಪಂಪೆ ಸೇರಿದಂತೆ ಎಲ್ಲಿಯೂ ಸರ್ಕಾರ ಹಾಗೂ ದೇವಸ್ವಂ ಮಂಡಳಿ ಯಾವುದೇ ಸಿದ್ಧತೆಗಳನ್ನು ಪೂರ್ಣಗೊಳಿಸಿಲ್ಲ ಎಂದು ಹಿಂದೂ ಐಕ್ಯವೇದಿ ರಾಜ್ಯ ಕಾರ್ಯಾಧ್ಯಕ್ಷ ವತ್ಸನ್ ತಿಲ್ಲಂಗೇರಿ ಟೀಕಿಸಿದ್ದಾರೆ.
ನಿಗದಿತ ಸಮಯದಲ್ಲಿ ಸಿದ್ಧತೆಗಳು ಪೂರ್ಣಗೊಳ್ಳದ ಕಾರಣ ಭಕ್ತರು ಪರದಾಡುತ್ತಿದ್ದಾರೆ. ಅಯ್ಯಪ್ಪ ದರ್ಶನಕ್ಕೆ ಆಗಮಿಸುವ ಲಕ್ಷಾಂತರ ಯಾತ್ರಾರ್ಥಿಗಳಿಗೆ ಮೂಲ ಸೌಕರ್ಯ ಕಲ್ಪಿಸುವ ಬದಲು ದೇವಸ್ವಂ ಮಂಡಳಿ ಹರಾಜು ಹೆಸರಲ್ಲಿ ಭಕ್ತಾದಿಗಳನ್ನು ಶೋಷಣೆಗೆ ಗುರಿಪಡಿಸುತ್ತಿದೆ.
ಎರುಮೇಲಿಯಲ್ಲಿ ಇನ್ನೂ ಯಾವುದೇ ಕರ್ತವ್ಯಾಧಿಕಾರಿಯನ್ನು ನೇಮಿಸಲಾಗಿಲ್ಲ, ಭಕ್ತರಿಗೆ ಸ್ಟ್ರೆಚರ್ ಸೌಲಭ್ಯವಿಲ್ಲ, ನಿಲ್ದಾಣದಲ್ಲಿ ಪಾರ್ಕಿಂಗ್ ವ್ಯವಸ್ಥೆ ಅಥವಾ ಇತರ ಮೂಲ ಸೌಕರ್ಯಗಳಿಲ್ಲ. ಊಟೋಪಚಾರದ ಸೌಲಭ್ಯಗಳಿಲ್ಲ ಮತ್ತು ಕೆಎಸ್‍ಆರ್‍ಟಿಸಿ ನಿಲಯ್ಕಲ್‍ನಿಂದ ಪಂಪಾಕ್ಕೆ ಪ್ರಯಾಣದ ದರವನ್ನು ಹೆಚ್ಚಿಸಿದೆ. ಭಕ್ತರು ಬಸ್‍ಗಳಲ್ಲಿ ತುಂಬಿಕೊಂಡು ಅಪಾಯಕಾರಿಯಾಗಿ ಪ್ರಯಾಣಿಸುತ್ತಾರೆ. ಬಸ್ ಪ್ರಯಾಣ ದರವನ್ನು ರೂ.25ಕ್ಕೆ ಇಳಿಸಬೇಕು. ಮಳೆ ಬಂದರೆ ಹರಿಯುವ ನಾಲೆಗಳಲ್ಲಿ ಭಕ್ತರು ಹರ ಸಾಹಸ ಪಡಬೇಕಾದ ಪರಿಸ್ಥಿತಿ ಇದೆ. ದೇವಸ್ವಂ ಅತಿಥಿ ಗೃಹಗಳಲ್ಲಿ ದುಬಾರಿ ಬಾಡಿಗೆ ವಸೂಲಿ ಮಾಡುವ ಮೂಲಕ ಭಕ್ತರನ್ನು ಶೋಷಣೆ ಮಾಡುತ್ತಿದೆ ಎಂದು ವತ್ಸನ್ ತಿಲಂಗೇರಿ ತಿಳಿಸಿದ್ದಾರೆ.
ರಸ್ತೆಗಳಲ್ಲಿ ಆರೋಗ್ಯ ಮತ್ತು ಸುರಕ್ಷತಾ ಸೌಲಭ್ಯಗಳಿಲ್ಲ, ರಸ್ತೆಯಲ್ಲಿ ಪೋಲೀಸರು ಅಥವಾ ಸ್ವಯಂಸೇವಕರು ಇಲ್ಲ. ಆರೋಗ್ಯ ರಕ್ಷಣಾ ವ್ಯವಸ್ಥೆಗಳನ್ನು ಆದಷ್ಟು ಬೇಗ ಸುವ್ಯವಸ್ಥಿತಗೊಳಿಸಬೇಕು. ಶೌಚಾಲಯಗಳ ಸಂಖ್ಯೆ ಹೆಚ್ಚಿಸಿ ನೈರ್ಮಲ್ಯ ವ್ಯವಸ್ಥೆ ಸುಧಾರಿಸಬೇಕು. ತ್ಯಾಜ್ಯ ನಿರ್ವಹಣೆಗೆ ವೈಜ್ಞಾನಿಕ ವ್ಯವಸ್ಥೆಗಳಿಲ್ಲ. ಪಂಪಾ ಕಸದ ತೊಟ್ಟಿಯಾಗುತ್ತಿದೆ. ಸಾಂಕ್ರಾಮಿಕ ರೋಗಗಳ ಅಪಾಯ ಹೆಚ್ಚು. ಸನ್ನಿಧಿಯ ಶೌಚಾಲಯಗಳಲ್ಲಿ ಸಾಮಾನ್ಯವಾಗಿ ಬಳಸುವ ನೀರಿಲ್ಲ. ಬಕೆಟ್ ಕೊರತೆ, ಬೆಳಕಿನ ಕೊರತೆ ಯಾತ್ರಾರ್ಥಿಗಳಿಗೆ ಪರದಾಡುವಂತಾಗಿದೆ ಎಂದಿರುವರು. ಭಕ್ತಾದಿಗಳ ಶೋಷಣೆಗೆ ಕಡಿವಾಣ ಹಾಕಿ ಆದಷ್ಟು ಬೇಗ ಅಗತ್ಯ ಸೌಲಭ್ಯ ಕಲ್ಪಿಸಬೇಕು ಎಂದು ಹಿಂದೂ ಐಕ್ಯವೇದಿಕೆ ಹೇಳಿದೆ.
ಶಬರಿಮಲೆಯಲ್ಲಿ ಮೂಲ ಸೌಕರ್ಯಗಳ ಕೊರತೆ: ಶೌಚಾಲಯಗಳಲ್ಲಿ ನೀರಿಲ್ಲ; ದೇವಸ್ವಂ ಮಂಡಳಿ ಭಕ್ತರನ್ನು ಶೋಷಣೆ ಮಾಡುತ್ತಿದೆ: ವತ್ಸನ್ ತಿಲ್ಲಂಗೇರಿ
0
ನವೆಂಬರ್ 18, 2022
Tags