ಬದಿಯಡ್ಕ: ಯಾವುದೇ ಜೀವಿಗೂ ನೀರು ಅನಿವಾರ್ಯ. ನೀರು ಇಲ್ಲದಿದ್ದರೆ ಜೀವನವೇ ಇಲ್ಲ. ಅಂತಹ ಜಲದ ಮೂಲಗಳನ್ನು ಉಳಿಸಿ ಅಂತರ್ಜಲಮಟ್ಟವನ್ನು ಏರಿಸಲು ಅಗತ್ಯ ಕ್ರಮಕೈಗೊಳ್ಳಬೇಕು. ಇದಕ್ಕಾಗಿ ಹೊಳೆ, ಜಲಮೂಲಗಳ ಬದಿಯಲ್ಲಿ ವಾಸಿಸುವವರು ಅದನ್ನು ಸಂರಕ್ಷಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಬೇಕು. ಹರಿದು ಹೋಗುವ ಹೊಳೆಯ ನೀರಿನ ರಕ್ಷಣೆಗಾಗಿ ಕಟ್ಟಗಳನ್ನು ನಿರ್ಮಿಸುವಲ್ಲಿ ಕೃಷಿಕರು ಹಿಂದೇಟು ಹಾಕಬಾರದು ಎಂದು ಹಿರಿಯ ಅನುಭವಿ ಕೃಷಿಕ ಶಂಕರನಾರಾಯಣ ಭಟ್ ಪೆರುಮುಂಡ ಹೇಳಿದರು.
ಕುಂಬ್ಡಾಜೆ ಗ್ರಾಮಸೇವಾ ಗ್ರಂಥಾಲಯ ಏತಡ್ಕ ಇದರ ಆಶ್ರಯದಲ್ಲಿ ಇತ್ತೀಚೆಗೆ ಏತಡ್ಕದ ಸಮಾಜಮಂದಿರದಲ್ಲಿ ಜರಗಿದ ಕಟ್ಟದ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.
ತಮ್ಮ 55 ವರ್ಷಗಳ ಕೃಷಿ ಅನುಭವಗಳನ್ನು ಈ ಸಂದಭರ್Àದಲ್ಲಿ ಹಂಚಿಕೊಂಡರು. ಕೃಷಿ ಯೂಟ್ಯೂಬ್ ಚಾನಲಿನ ರಾಧಾಕೃಷ್ಣ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ, ಕಟ್ಟದ ಕುರಿತಾದ ಒಂದು ಸಾಕ್ಷ್ಯ ಚಿತ್ರ ತಯಾರಿಸಿ ಮುಂದಿನ ಪೀಳಿಗೆಗೆ ಕಟ್ಟದ ಚಿತ್ರಣ ಸಿಗುವಂತೆ ಮಾಡುತ್ತೇನೆ ಎಂದು ಹೇಳಿದರು. ವಿವಿಧ ಕಟ್ಟಗಳ ಫಲಾನುಭವಿಗಳೂ ಪಾಲ್ಗೊಂಡಿದರು. ಕಟ್ಟದಮೂಲೆ ನರಸಿಂಹ ಭಟ್ ಕಟ್ಟದ ಕುರಿತಾಗಿ ತಾವು ರಚಿಸಿದ ಸ್ವರಚಿತ ಕವನವೊಂದನ್ನು ವಾಚಿಸಿದರು. ಗ್ರಂಥಾಲಯದ ಪದಾಧಿಕಾರಿಗಳೂ, ಕಟ್ಟದ ಫಲಾನುಭವಿಗಳೂ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಕಾರ್ಯದರ್ಶಿ ವೇಣುಗೋಪಾಲ ಕೆ ಸ್ವಾಗತಿಸಿ, ಶಾಂತ ಕುಮಾರಿ ಪ್ರಾರ್ಥಿಸಿ, ವೈ.ಕೆ. ಗಣಪತಿ ಭಟ್ ವಂದಿಸಿದರು.
ಅಂತರ್ಜಲ ಮಟ್ಟದ ಏರಿಕೆಗೆ ಕಟ್ಟಗಳು ಕಾರಣ: ಏತಡ್ಕದಲ್ಲಿ ಕಟ್ಟದ ದಿನಾಚರಣೆಯಲ್ಲಿ ಕೃಷಿಕ ಪೆರುಮುಂಡ ಶಂಕರನಾರಾಯಣ ಭಟ್
0
ನವೆಂಬರ್ 25, 2022
Tags