ಕೆಲವರಿಗೆ ಮಲಗುವಾಗ ಫ್ಯಾನ್ ಇರಲೇಬೇಕು, ಫ್ಯಾನ್ ತಿರುಗಲ್ಲ ಎಂದರೆ ನಿದ್ದೆ ಬರಲ್ಲ, ವಾತಾವರಣ ಚಳಿಯಿದ್ದರೂ ಫ್ಯಾನ್ ಹಾಕಿ ಕಂಬಳಿ ಹೊದ್ದು ಮಲಗುವವರು ಎಷ್ಟೋ ಜನರಿದ್ದಾರೆ, ಏಕೆಂದರೆ ನಿದ್ದೆ ಮಾಡಬೇಕು ಎಂದರೆ ಫ್ಯಾನ್ ಬೇಕೇ ಬೇಕು, ಆದರೆ ಈ ಪ್ಯಾನ್ ಹಾಕಿ ಮಲಗುವುದರಿಂದ ನಮ್ಮ ಶರೀರಕ್ಕೆ ಏನೆಲ್ಲಾ ಆಗುತ್ತದೆ ಎಂದು ತಿಳಿದರೆ ನೀವು ಪ್ಯಾನ್ ಹಾಕಿ ಮಲಗುವುದನ್ನು ಖಂಡಿತ ಕಡಿಮೆ ಮಾಡುತ್ತೀರಿ...
ಫ್ಯಾನ್ ಹಾಕಿ ಮಲಗುವುದರಿಂದ ಶರೀರಕ್ಕೆ ಆಗುವ ಕೆಟ್ಟ ಪರಿಣಾಮಗಳೇನು ಎಂದು ನೋಡೋಣ:
ಅಲರ್ಜಿ ಹೆಚ್ಚಾಗುವುದು
ನಮಗೆ ಅಲರ್ಜಿ ಸಮಸ್ಯೆ ಇದ್ದರೆ ಫ್ಯಾನ್ ಹಾಕಿ ಮಲಗಿದರೆ ಅಲರ್ಜಿ ಸಮಸ್ಯೆ ತುಂಬಾನೇ ಹೆಚ್ಚಾಗುವುದು. ಅಲರ್ಜಿ ಇಲ್ಲದವರಿಗೂ ಫ್ಯಾನ್ ಹಾಕಿ ಮಲಗುವುದರಿಂದ ಅಲರ್ಜಿ ಸಮಸ್ಯೆ ಉಂಟಾಗುವುದು. ಶೀತ, ಗಂಟಲು ಕೆರೆತ, ಕಣ್ಣಿನಲ್ಲಿ ನೀರು ಬರುವುದು, ಉಸಿರಾಟದ ತೊಂದರೆ ಈ ರೀತಿಯ ಸಮಸ್ಯೆಗಳು ಉಂಟಾಗುವುದು.
ಕಣ್ಣುಗಳು ಹಾಗೂ ತ್ವಚೆ ಒಣಗುವುದು
ಫ್ಯಾನ್ ಹಾಕಿ ಮಲಗಿದರೆ ಕಣ್ಣುಗಳು ಡ್ರೈಯಾಗುವುದು, ಅಲ್ಲದೆ ತ್ವಚೆ ಕೂಡ ಡ್ರೈಯಾಗುವುದು.
ಮೈಕೈ ನೋವು ಉಂಟಾಗುವುದು
ಫ್ಯಾನ್ ಹಾಕಿ ಮಲಗುವುದರಿಂದ ಮೈಕೈ ನೋವು ಉಂಟಾಗುವುದು, ಇನ್ನು ಮೈಕೈ ನೋವಿದ್ದರೆ ಫ್ಯಾನ್ ಹಾಕಿ ಮಲಗುವುದರಿಂದ ಮೈಕೈ ನೋವು ಮತ್ತಷ್ಟು ಹೆಚ್ಚಾಗುವುದು.
ಸ್ಥೂಲಕಾಯ ಉಂಟಾಗುತ್ತೆ
ಫ್ಯಾನ್ ಹಾಕಿ ಮಲಗುವುದರಿಂದ ಅಥವಾ ಏರ್ ಕಂಡಿಷನರ್ ರೂಮ್‌ನಲ್ಲಿ ಮಲಗುವುದರಿಂದ ಸ್ಥೂಕ ಕಾಯ ಕೂಡ ಹೆಚ್ಚಾಗುವುದು.
ನೀವು ಯಾವ ಬಗೆಯ ಫ್ಯಾನ್ ಬಳಸುತ್ತೀರಾ ಎಂಬುವುದು ಮುಖ್ಯವಾಗುತ್ತಾ?
ತುಂಬಾ ಸೆಕೆಯಾದಾಗ ಫ್ಯಾನ್ ಬಳಸದೇ ಇರಲಿಕ್ಕೆ ಕಷ್ಟ, ಅಂಥ ಸಂದರ್ಭದಲ್ಲಿ ನೀವು ಸೀಲಿಂಗ್ ಫ್ಯಾನ್‌ಗಿಂತ ಒಂದು ಕಡೆಯಿಂದ ಮತ್ತೊಂದು ಕಡೆಗೆ ಸಾಗಿಸಲು ಸುಲಭವಾಗುವ ಫ್ಯಾನ್ ಬಳಸುವುದು ಒಳ್ಳೆಯದು. ಫ್ಯಾನ್ ಅನ್ನು ಬೆಡ್ ಸಮೀಪ ಇಡಬೇಡಿ. 2-3 ಅಡಿ ಅಂತರಲ್ಲಿ ಇಡಿ.
ಫ್ಯಾನ್ ಬಳಕೆ ಕಡಿಮೆ ಮಾಡಲು ಟಿಪ್ಸ್
* ಕೋಣೆ ಚೆನ್ನಾಗಿ ಗಾಳಿಯಾಡುವಂತಿರಬೇಕು.
* ಕೂಲಿಂಗ್ ಮ್ಯಾಟ್ರಸ್ ಬಳಸಿ.
* ದಪ್ಪವಾದ ಕರ್ಟನ್ ಬಳಸಿ, ಇದು ಸೂರ್ಯನ ಬೆಳಕು ಬೆಡ್‌ರೂಂ ಪ್ರವೇಶಿಸುವುದನ್ನು ತಡೆಗಟ್ಟುವುದರಿಂದ ಕೋಣೆ ತಂಪಾಗಿರುತ್ತೆ.
* ಮಲಗುವ ಮುಂಚೆ ಬಿಸಿ ನೀರಿನಿಮದ ಸ್ನಾನ ಮಾಡಿ, ಇದರಿಂದ ಮೈ ತಣ್ಣಗಾಗುವುದು ಮಾತ್ರವಲ್ಲ, ಮಲಗಿದ ತಕ್ಷಣ ನಿದ್ದೆ ಬರುತ್ತದೆ.