ಮುಂಬೈ: ರೆಪೊ ದರದಲ್ಲಿ ಏರಿಕೆ ಆದಾಗ ಸಾಲದ ಮೇಲಿನ ಬಡ್ಡಿ ದರವನ್ನು ಹೆಚ್ಚಿಸುವ ಬ್ಯಾಂಕ್‌ಗಳು, ಠೇವಣಿಗಳಿಗೆ ನೀಡುವ ಬಡ್ಡಿ ದರವನ್ನು ಅಷ್ಟೇ ವೇಗದಲ್ಲಿ ಹೆಚ್ಚಿಸುತ್ತಿಲ್ಲ.
ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಈ ವರ್ಷದ ಮೇ ತಿಂಗಳಿ ನಿಂದ ಈಚೆಗೆ ರೆಪೊ ದರವನ್ನು ಶೇಕಡ 1.90ರಷ್ಟು ಹೆಚ್ಚಿಸಿದೆ.
ಎಲ್ಲ ಪ್ರಮುಖ ಬ್ಯಾಂಕ್‌ಗಳು ಸಾಲದ ಮೇಲಿನ ಬಡ್ಡಿದರವನ್ನು (ಇಬಿಎಲ್‌ಆರ್) ಸಹ ಶೇ 1.90ರಷ್ಟು ಏರಿಕೆ ಮಾಡಿವೆ. ಆದರೆ, ಠೇವಣಿ ಬಡ್ಡಿ ದರವನ್ನು ಈ ಪ್ರಮಾಣ ದಲ್ಲಿ ಹೆಚ್ಚಳ ಮಾಡಿಲ್ಲ.
ಆರ್‌ಬಿಐನ ಈಚಿನ ಒಂದು ಲೇಖನದ ಪ್ರಕಾರ, 2022ರ ಅಕ್ಟೋ ಬರ್ ಅಂತ್ಯದವರೆಗೆ ಬ್ಯಾಂಕ್‌ಗಳು ರೆಪೊ ದರಕ್ಕೆ ಅನುಗುಣವಾಗಿ ತಮ್ಮ ಇಬಿಎಲ್‌ಆರ್ ಅನ್ನು ಶೇ 1.90ರಷ್ಟು ಹೆಚ್ಚಿಸಿವೆ. ಇದೇ ಅವಧಿಯಲ್ಲಿ 1 ವರ್ಷದ ಎಂಸಿಎಲ್‌ಆರ್ ಅನ್ನು ಶೇ 0.85ರಷ್ಟು ಏರಿಕೆ ಮಾಡಿವೆ. ಆದರೆ, ಅವಧಿ ಠೇವಣಿಗಳ ಬಡ್ಡಿದರವನ್ನು ಅತಿ ಕಡಿಮೆ ಪ್ರಮಾಣದಲ್ಲಿ ಹೆಚ್ಚಿಸಲಾಗಿದೆ. ಹೊಸ ಠೇವಣಿಗಳಿಗೆ ದರವನ್ನು ಮೇ ತಿಂಗಳಿನಿಂದ ಅಕ್ಟೋಬರ್‌ವರೆಗೆ ಸರಾ ಸರಿ ಶೇ 0.48ರಷ್ಟು ಏರಿಕೆ ಮಾಡ ಲಾಗಿದೆ.
ಸರ್ಕಾರಿ ವಲಯದ ಬ್ಯಾಂಕ್ ಗಳಿಗಿಂತಲೂ ಖಾಸಗಿ ವಲಯದ ಬ್ಯಾಂಕ್‌ಗಳ ಸಾಲ ಮತ್ತು ಠೇವಣಿ ಬಡ್ಡಿದರ ವರ್ಗಾವಣೆ ಹೆಚ್ಚಿಗೆ ಇದೆ. ಸಾಲ ನೀಡಿಕೆಯ ಬೆಳವಣಿಗೆಯು ಸಹ ಸರ್ಕಾರಿ ವಲಯದ ಬ್ಯಾಂಕ್‌ಗಳಿಗಿಂತಲೂ ಖಾಸಗಿ ವಲಯದ ಬ್ಯಾಂಕ್ ಗಳಲ್ಲಿ ಗರಿಷ್ಠ ಮಟ್ಟದಲ್ಲಿದೆ ಎಂದು ಆರ್‌ಬಿಐ ಲೇಖನದಲ್ಲಿ ತಿಳಿಸಲಾಗಿದೆ.