ಮುಳ್ಳೇರಿಯ: ಯಕ್ಷಗಾನ ಪ್ರಸಂಗಕರ್ತ, ಭಾಗವತ, ಯಕ್ಷಗುರು ವಿಶ್ವವಿನೋದ ಬನಾರಿಯವರ ಅಭಿನಂದನಾ ಸಮಾರಂಭ ಇಂದು (ನ.13) ಬೆಳಿಗ್ಗೆ 8 ರಿಂದ ಬನಾರಿ ಶ್ರೀಗೋಪಾಲಕೃಷ್ಣ ಯಕ್ಷಗಾನ ಕಲಾಸಂಘದ ಕೀರಿಕ್ಕಾಡು ಮಾಸ್ತರ್ ಸ್ಮಾರಕ ಕಲಾಭವನದಲ್ಲಿ ನಡೆಯಲಿದೆ.
ಬೆಳಿಗ್ಗೆ 9 ರಿಂದ 10.3ರ ರವರೆಗೆ ವಿಶ್ವ ಯಕ್ಷಗಾಯನಾಭಿನಂದನೆ ಗಾನವೈಭವ ನಡೆಯಲಿದೆ. 10.30 ರಿಂದ ಸಭಾ ಕಾರ್ಯಕ್ರಮ ನಡೆಯಲಿದ್ದು, ಶ್ರೀಮದ್ ಎಡನೀರು ಮಠಾಧೀಶ ಶ್ರೀಸಚ್ಚಿದಾನಂದ ಭಾರತೀ ಶ್ರೀಗಳು ದೀಪ ಪ್ರಜ್ವಲನೆಗೈದು ಮಾಸ್ತರ್ ವಿಷ್ಣು ಭಟ್ ಅವರ ಪುನರ್ ಮುದ್ರಿತ ಆತ್ಮಕಥೆ ಯಕ್ಷರಸ ಜೀವನ ಕೃತಿ ಬಿಡುಗಡೆಗೊಳಿಸಿ ಆಶೀರ್ವಚನ ನೀಡುವರು. 11 ರಿಂದ ಕರ್ನಾಟಕ ಸರ್ಕಾರದ ಯಕ್ಷಗಾನ ಅಕಾಡೆಮಿಯ ಸಹಕಾರದೊಂದಿಗೆ ಯಕ್ಷಗಾನ ಹಾಡುಗಾರಿಕೆಯ ಸಾಂಪ್ರದಾಯಿಕ ಮಟ್ಟುಗಳ ಬಗ್ಗೆ ಪ್ರಾತ್ಯಕ್ಷಿಕೆ ನಡೆಯಲಿದೆ. ಅಪರಾಹ್ನ 1.30 ರಿಂದ 3ರವರೆಗೆ ಉಡುಪಿ ಕೊಡವೂರಿನ ನೃತ್ಯನಿಕೇತನ ತಂಡದವರಿಂದ ವಿದ್ವಾನ್.ಸುಧೀರ್ ರಾವ್ ಕೊಡವೂರು ಅವರ ನಿರ್ದೇಶನದಲ್ಲಿ ಮಾನಸಿ ಸುಧೀರ್ ಅವರಿಂದ ನೃತ್ಯ ಸಿಂಚನ ನಡೆಯಲಿದೆ. 3 ರಿಂದ 5ರ ವರೆಗೆ ವಿಶ್ವಯಾನ ಅಭಿನಂದನಾ ಸಮಾರಂಭ ನಡೆಯಲಿದೆ. ಸಂಜೆ 5 ರಿಂದ 6.30ರ ವರೆಗೆ ಪ್ರಸಿದ್ದ ಕಲಾವಿದರ ಕೂಡುವಿಕೆಯಲ್ಲಿ ಸಂವಾದ ಸೌರಭ ಯಕ್ಷಗಾನ ತಾಳಮದ್ದಳೆ ಕೂಟ ನಡೆಯಲಿದೆ. 6.30 ರಿಂದ 8ರ ವರೆಗೆ ಕೀರಿಕ್ಕಾಡು ಯಕ್ಷಗಾನ ಅಧ್ಯಯನ ಕೇಂದ್ರದ ಬಾಲಕಲಾವಿದರಿಂದ ವೀರ ಬಬ್ರುವಾಹನ ಆಖ್ಯಾಯಿಕೆಯ ಯಕ್ಷಗಾನ ಬಯಲಾಟ ನಡೆಯಲಿದೆ. ರಾತ್ರಿ 8 ರಿಂದ ಪ್ರಸಿದ್ದ ಕಲಾವಿದರ ಕೂಡುವಿಕೆಯಲ್ಲಿ ಮಹಿಷಮರ್ಧಿನಿ ಯಕ್ಷಗಾನ ಬಯಲಾಟ ನಡೆಯಲಿದೆ.
ಬನಾರಿಯಲ್ಲಿ ವಿಶ್ವವಿನೋದ ಯಕ್ಷಕಲರವ ನಾಳೆ:ದಿನಪೂರ್ತಿ ಯಕ್ಷ ಸಿಂಚನ
0
ನವೆಂಬರ್ 12, 2022