ಮಧೂರು: ಕರಾವಳಿ ಸಾಂಸ್ಕøತಿಕ ಪ್ರತಿಷ್ಠಾನ ಕನ್ನಡ ಗ್ರಾಮ ಇದರ 32 ನೇ ಸಂಸ್ಥಾಪನಾ ವರ್ಷಾಚರಣೆಯ ಪ್ರಯುಕ್ತ ಕಾಸರಗೋಡಿನ ಕನ್ನಡ ಗ್ರಾಮದಲ್ಲಿ ಕಾಸರಗೋಡು ಕನ್ನಡ ಗ್ರಾಮೋತ್ಸವವು ಸಾಹಿತ್ಯಿಕ-ಸಾಂಸ್ಕøತಿಕ ಕಾರ್ಯಕ್ರಮಗಳೊಂದಿಗೆ ನಡೆಯಿತು.
ಕಾಸರಗೋಡಿನ ಸಾಂಸ್ಕøತಿಕ ಮುಖಂಡ ಕೆ.ಎನ್.ವೆಂಕಟರಮಣ ಹೊಳ್ಳ ದೀಪ ಬೆಳಗಿಸಿ ಸಮಾರಂಭವನ್ನು ಉದ್ಘಾಟಿಸಿದರು. ಕರಾವಳಿ ಸಾಂಸ್ಕøತಿಕ ಪ್ರತಿಷ್ಠಾನದ ಅಧ್ಯಕ್ಷ ಶಿವರಾಮ ಕಾಸರಗೋಡು ಅಧ್ಯಕ್ಷತೆ ವಹಿಸಿದರು.
ಇದೇ ಸಂದರ್ಭದಲ್ಲಿ ಮುಂಬಯಿಯ ಕಲಾಪೋಷಕ, ಸಮಾಜ ಸೇವಕ ಚಂದ್ರಶೇಖರ ಎಸ್.ಶೆಟ್ಟಿ ಕುಕ್ಕುಂದೂರು ಹಾಗು ಸಾಂಸ್ಕøತಿಕ, ಧಾರ್ಮಿಕ, ಸಾಮಾಜಿಕ ಮುಂದಾಳು ರಾಮಪ್ರಸಾದ್ ಕಾಸರಗೋಡು ಅವರಿಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ನಡೆಯಿತು. 2022 ನೇ ಸಾಲಿನ ಕಾಸರಗೋಡು ಕನ್ನಡ ಗ್ರಾಮೋತ್ಸವ ಪ್ರಶಸ್ತಿಯನ್ನು ಕೆ.ಜಿ.ಎಫ್. ಕೋಲಾರ ಚಿನ್ನದ ಗಣಿ ಪ್ರದೇಶದ ಕನ್ನಡ ಸಾಂಸ್ಕøತಿಕ ರಾಯಭಾರಿಗಳಾದ ಬಾ.ಹಾ.ಶೇಖರಪ್ಪ, ಶಿವಶರಣಪ್ಪ ಕಲ್ಯಾಣಕರ, ಮೂಡಬಿದ್ರೆಯ ಪತ್ರಕರ್ತರಾದ ಶೇಖರ ಅಜೆಕಾರು, ಧನಂಜಯ ಮೂಡುಬಿದ್ರೆ ಅವರಿಗೆ ಪ್ರದಾನ ಮಾಡಲಾಯಿತು.
ಮುಖ್ಯ ಅತಿಥಿಗಳಾಗಿ ಮಧೂರು ಗ್ರಾಮ ಪಂಚಾಯತಿ ಅಧ್ಯಕ್ಷ ಗೋಪಾಲಕೃಷ್ಣ ಕೂಡ್ಲು, ಕಾಸರಗೋಡು ನಗರಸಭಾ ಕೌನ್ಸಿಲರ್ ಶಾರದಾ ಬಿ, ದ.ಕ.ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ ಅಧ್ಯಕ್ಷ ಹರೀಶ್ ಸುಲಾಯ ಒಡ್ಡಂಬೆಟ್ಟು, ಹರಿದಾಸ ಜಯಾನಂದ ಕುಮಾರ್ ಹೊಸದುರ್ಗ, ಲವ ಮೀಪುಗುರಿ, ಗಣೇಶ್ ನಾೈಕ್ ಅಡ್ಕತ್ತಬೈಲ್, ಕೆ.ಸಿ.ಎನ್.ಚಾನೆಲ್ ನಿರ್ದೇಶಕ ಪುರುಷೋತ್ತಮ ಎಂ.ನಾೈಕ್, ಗಡಿನಾಡ ಕಲಾವಿದರು ಸಂಸ್ಥೆಯ ಉಪಾಧ್ಯಕ್ಷ ದಿವಾಕರ ಪಿ.ಅಶೋಕನಗರ, ಕಾರ್ಟೂನ್ ಕಾಸರಗೋಡು ಅಧ್ಯಕ್ಷ ವೆಂಕಟ್ ಭಟ್ ಎಡನೀರು, ಫೆÇೀಟೋಗ್ರಾಫರ್ಸ್ ಸಂಘದ ಶ್ರೀಕಾಂತ್ ಕಾಸರಗೋಡು, ಅಮ್ಮ ಇವೆಂಟ್ ಮೆನೇಜ್‍ಮೆಂಟ್‍ನ ಮಾಲಕ ಕುಶಲ ಕುಮಾರ್, ಕಿಶೋರ್ ಕುಮಾರ್, ಕೆ.ಮುರಳೀಧರ ಪಾರೆಕಟ್ಟೆ ಉಪಸ್ಥಿತರಿದ್ದರು.
ಪತ್ರಕರ್ತ ರಾಧಾಕೃಷ್ಣ ಕೆ.ಉಳಿಯತ್ತಡ್ಕ ಪ್ರಾಸ್ತಾವಿಕವಾಗಿ ಮಾತನಾಡಿದರು. ಶ್ರೀ ರಾಮನಾಥ ಸಾಂಸ್ಕøತಿಕ ಭವನ ಸಮಿತಿ ಪ್ರಧಾನ ಸಂಚಾಲಕ ಕೆ.ಗುರುಪ್ರಸಾದ್ ಕೋಟೆಕಣಿ ಸ್ವಾಗತಿಸಿದರು. ವಿದುಷಿ ಅನುಪಮಾ ರಾಘವೇಂದ್ರ, ಕಾವ್ಯ ಕುಶಲ, ಅಶ್ವಿನಿ ಗುರುಪ್ರಸಾದ್ ಕೋಟೆಕಣಿ ಕಾರ್ಯಕ್ರಮ ನಿರೂಪಿಸಿದರು. ಭೂಮಿಕಾ ಪ್ರತಿಷ್ಠಾನ ಉಡುಪುಮೂಲೆ ಎಡನೀರು ಅವರಿಂದ ನೃತ್ಯ ವೈಭವ, ಶ್ರೀವಾರಿ ಮ್ಯೂಸಿಕಲ್ಸ್ ಬಾರಡ್ಕ ಅವರಿಂದ ರಸಮಂಜರಿ, ಗಡಿನಾಡ ಕನ್ನಡ ಸಾಹಿತ್ಯ ಸಾಂಸ್ಕøತಿಕ ಸಂಘದಿಂದ ಸಾಹಿತ್ಯ-ಸಾಂಸ್ಕøತಿಕ ಸಂಭ್ರಮ ಕಾರ್ಯಕ್ರಮ ಪ್ರದರ್ಶನಗೊಂಡಿತು.
ಕನ್ನಡ ಗ್ರಾಮದಲ್ಲಿ ಕಾಸರಗೋಡು ಕನ್ನಡ ಗ್ರಾಮೋತ್ಸವ
0
ನವೆಂಬರ್ 06, 2022
Tags