ಬದಿಯಡ್ಕ: ಆಲಂಕೂಡ್ಲು ಶ್ರೀ ಮಹಾಲಿಂಗೇಶ್ವರ ದೇವಾಲಯದ ಜೀಣೋದ್ಧಾರ ಕಾರ್ಯದ ಧನಸಂಗ್ರಹಕ್ಕಾಗಿ ಪುಂಡೂರಿನಲ್ಲಿ ಭಾನುವಾರ ಪ್ರಾದೇಶಿಕ ಸಮಿತಿಯನ್ನು ರೂಪಿಸಲಾಯಿತು.
ಸೀತಾರಾಮ ರಾವ್ ಪಿಲಿಕೂಡ್ಲು, ಗೋಪಾಲ ಆಚಾರಿ ಆಲಂಕೂಡ್ಲು ರವಿಶಂಕರ ಪುಣಿಂಚಿತ್ತಾಯ, ಕೃಷ್ಣೋಜಿ ಮಾಸ್ತರ್, ನ್ಯಾಯವಾದಿ. ಕೃಷ್ಣರಾಜ ಪುಣಿಂಚಿತ್ತಾಯ ವಿಜಯನ್ ನಾಯರ್, ಗೋಪ ಕುಮಾರ್, ಶಶಿನಾಯರ್, ಕೊರಗಪ್ಪ, ಸೇತುನಾಥನ್, ರಾಮಚಂದ್ರ ಆಚಾರ್ಯ ಮೊದಲಾದವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಭಗವದ್ಭಕ್ತರು ಪಾಲ್ಗೊಂಡಿದ್ದರು. ಜೀರ್ಣೋದ್ಧಾರ ಕಾರ್ಯದ ಪ್ರಗತಿಯ ಕುರಿತು ಚರ್ಚಿಸಿ, ಧನ ಸಂಗ್ರಹಕ್ಕಾಗಿ ಉಪಸಮಿತಿಗಳನ್ನೂ ರಚಿಸಲಾಯಿತು. ಸೇವಾ ಸಮಿತಿ ಕಾರ್ಯದರ್ಶಿ ಸುನಿಲ್ ಪಿ.ಆರ್. ಕರೋಡಿ ಸ್ವಾಗತಿಸಿ, ಸೇವಾ ಸಮಿತಿ ಉಪಾಧ್ಯಕ್ಷ ವಿಜಯನ್ ವಂದಿಸಿದರು.
ಆಲಂಕೂಡ್ಲು ದೇವಸ್ಥಾನ ಜೀರ್ಣೋದ್ಧಾರಕ್ಕೆ ಪುಂಡೂರು ಉಪಸಮಿತಿ ರಚನೆ
0
ನವೆಂಬರ್ 07, 2022
Tags