ಮಂಜೇಶ್ವರ: ರಾಜ್ಯ ಹುರಿಹಗ್ಗ ಅಭಿವೃದ್ಧಿ ಇಲಾಖೆ ಮತ್ತು ಕಣ್ಣೂರು ಹುರಿಹಗ್ಗ ಯೋಜನಾ ಕಛೇರಿಯು ಗ್ರಾಮ/ಬ್ಲಾಕ್ ಪಂಚಾಯತಿ ಪ್ರತಿನಿಧಿಗಳು ಮತ್ತು ಅಧಿಕಾರಿಗಳಿಗೆ ಹುರಿಹಗ್ಗ ಭೂ ಬಳಕೆ ಜಾಗೃತಿ ಕಾರ್ಯಾಗಾರ ನಡೆಯಿತು. ಮಂಜೇಶ್ವರ ಬ್ಲಾಕ್ ಪಂಚಾಯತಿ ಸಭಾಂಗಣದಲ್ಲಿ ನಡೆದ ಮಂಜೇಶ್ವರ ಬ್ಲಾಕ್ ಮಟ್ಟದ ಕಾರ್ಯಾಗಾರವನ್ನು ಬ್ಲಾಕ್ ಪಂಚಾಯತಿ ಅಧ್ಯಕ್ಷೆ ಶಮೀನಾ ಟೀಚರ್ ಉದ್ಘಾಟಿಸಿದರು. ಮಂಜೇಶ್ವರ ಬ್ಲಾಕ್ ಪಂಚಾಯತಿ ಉಪಾಧ್ಯಕ್ಷ ಪಿ.ಕೆ.ಹನೀಫ್ ಅಧ್ಯಕ್ಷತೆ ವಹಿಸಿದ್ದರು. ಬ್ಲಾಕ್, ವಿವಿಧ ಗ್ರಾಮ ಪಂಚಾಯತಿ ಆಡಳಿತ ಸಮಿತಿ ಸದಸ್ಯರು, ಕಾರ್ಯದರ್ಶಿಗಳು ಮತ್ತು ಸಹಾಯಕ ಅಭಿಯಂತರರು ಭಾಗವಹಿಸಿದ್ದರು. ‘ಹುರಿಹಗ್ಗದ ಭೂ ಉಪಯೋಗ ಮತ್ತು ಭವಿಷ್ಯ’ ಕುರಿತು ಕೈರ್ ಫೆಡ್ ನ ಸನೂಪ್ ತರಗತಿ ನಡೆಸಿದರು. ಕಣ್ಣೂರು ಹುರಿಹಗ್ಗ ಕೇಂದ್ರದ ಯೋಜನಾಧಿಕಾರಿ ಕೆ.ರಾಧಾಕೃಷ್ಣನ್ ಸ್ವಾಗತಿಸಿ, ಬ್ಲಾಕ್ ಬಿಡಿಒ ಕೆ.ಶೀತಲಾ ವಂದಿಸಿದರು.
ಮಂಜೇಶ್ವರ ಬ್ಲಾಕ್ ಹುರಿಹಗ್ಗ ಕಾರ್ಯಾಗಾರ
0
ನವೆಂಬರ್ 10, 2022
Tags