ಕಾಸರಗೋಡು: ತಲಶ್ಯೇರಿಯಲ್ಲಿ ಮಾದಕದ್ರವ್ಯ ಮಾಫಿಯಾಗಳು ಹಾಡಹಗಲು ನಡೆಸಿದ ದಾಳಿಯಲ್ಲಿ ಸಂಬಂಧಿಕರಾದ ಇಬ್ಬರು ಯುವಕರು ಮೃತಪಟ್ಟಿದ್ದಾರೆ. ಇನ್ನೊಬ್ಬ ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾನೆ. ಮೃತಪಟ್ಟ ಇಬ್ಬರೂ ಸಿಪಿಎಂ ಕಾರ್ಯಕರ್ತರಾಗಿದ್ದರು.
ತಲಶ್ಯೇರಿ ನೆಟ್ಟೂರ್ ಇಲ್ಲಕುನ್ನು ನಿವಾಸಿ ಕೆ. ಖಾಲಿದ್(52)ಹಾಗೂ ಇವರ ಸಹೋದರಿ ಪತಿ ಶಮೀರ್(40)ಕೊಲೆಯಾದವರು. ಇವರ ಸ್ನೇಹಿತ ನೆಟ್ಟೂರ್ ಸಾರಾಸಿಲ್ ನಿವಾಸಿ ಶಾನಿಬ್ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ.
ಖಾಲಿದ್ ಮೀನು ಕಾರ್ಮಿಕ ಹಾಗೂ ಶಮೀರ್ ಕೂಲಿಕಾರ್ಮಿಕನಾಗಿದ್ದಾರೆ. ಬುಧವಾರ ಸಂಜೆ ಘಟನೆ ನಡೆದಿದ್ದು, ಪರಾರಿಯಾಗಿದ್ದ ಮುಖ್ಯ ಆರೋಪಿ ನಿಟ್ಟೂರ್ ಪಾರಾಯಿ ನಿವಾಸಿ ಬಾಬುವನ್ನು ಇರಿಟ್ಟಿಯಿಂದ ಪೊಲೀಸರು ಬಂಧಿಸಿದ್ದಾರೆ. ಮಾದಕದ್ರವ್ಯ ಮಾಫಿಯಾ ತಂಡ ಕೊಲೆ ನಡೆಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಒಟ್ಟು ಐವರು ಆರೋಪಿಗಳಲ್ಲಿ ಮೂವರನ್ನು ಈಗಾಗಲೇ ಬಂಧಿಸಲಾಗಿದೆ.
ತಲಶ್ಯೇರಿಯಲ್ಲಿ ಮಾದಕದ್ರವ್ಯ ಮಾಫಿಯಾಗಳಿಂದ ಇಬ್ಬರ ಹತ್ಯೆ
0
ನವೆಂಬರ್ 24, 2022
Tags