ಶಬರಿಮಲೆ : ಶಬರಿಮಲೆಯಲ್ಲಿ ಸಾಂಪ್ರದಾಯಿಕ ಧಾರ್ಮಿಕ ನಂಬಿಕೆಗಳ ಉಲ್ಲಂಘನೆಗೆ ಗೃಹ ಇಲಾಖೆ ವೇದಿಕೆ ಕಲ್ಪಿಸಿದೆ. ಸುಪ್ರೀಂ ಕೋರ್ಟ್ ತೀರ್ಪು ಬಾಕಿ ಇರುತ್ತಾ ಶಬರಿಮಲೆಗೆ ಎಲ್ಲರಿಗೂ ಪ್ರವೇಶವಿದೆ ಎಂದು ಗೃಹ ಇಲಾಖೆ ಪೋಲೀಸರಿಗೆ ಸೂಚನೆ ನೀಡಿದೆ.
ಸನ್ನಿಧಿಯಲ್ಲಿ ಕರ್ತವ್ಯದಲ್ಲಿರುವ ಪೋಲೀಸ್ ಅಧಿಕಾರಿಗಳಿಗೆ ವಿತರಿಸಲಾದ ಗೃಹ ಇಲಾಖೆಯ ಸೂಚನಾ ಪತ್ರದಲ್ಲಿ ಮಹಿಳೆಯ ಪ್ರವೇಶ ನಿರ್ಧಾರದ ಉಲ್ಲೇಖವಿದೆ.
ಪ್ರಸ್ತುತ ಏಳು ಸದಸ್ಯರ ಸಂವಿಧಾನ ಪೀಠ ಶಬರಿಮಲೆ ಮಹಿಳೆಯರ ಪ್ರವೇಶದ ತೀರ್ಪನ್ನು ಪರಿಶೀಲಿಸುತ್ತಿದೆ. ಡಿಸೆಂಬರ್ 13, 2019 ರಂದು, ಅಂದಿನ ಮುಖ್ಯ ನ್ಯಾಯಮೂರ್ತಿ ಎಸ್‍ಎ ಬೋಬ್ಡೆ ನೇತೃತ್ವದ ತ್ರಿಸದಸ್ಯ ಪೀಠವು ಮಹಿಳೆಯರ ಪ್ರವೇಶದ ವಿಷಯದ ಕುರಿತು ಉನ್ನತ ಪೀಠದ ತೀರ್ಪಿನ ನಂತರ ನಿರ್ಧಾರ ತೆಗೆದುಕೊಳ್ಳಬಹುದೆಂದು ಹೇಳಿತ್ತು. ಶಬರಿಮಲೆಗೆ ಮುಕ್ತ ಪ್ರವೇಶಕ್ಕೆ ಭದ್ರತೆ ಒದಗಿಸಬೇಕು ಎಂದು ಆಗ್ರಹಿಸಿ ರಹಾನಾ ಫಾತಿಮಾ ಮತ್ತು ಬಿಂದು ಅಮ್ಮಿಣ್ಣಿ ಸಲ್ಲಿಸಿದ್ದ ಅರ್ಜಿಯನ್ನು ಆಧರಿಸಿ ಈ ಆದೇಶ ನೀಡಲಾಗಿತ್ತು. ಬೇರೆ ರೀತಿಯಲ್ಲಿ ಹೇಳುವುದಾದರೆ, ತಾತ್ವಿಕವಾಗಿ, ಪರಿಶೀಲನಾ ತೀರ್ಪುಗಳು ಬರುವವರೆಗೂ ಸುಪ್ರೀಂ ಕೋರ್ಟ್ ಯುವತಿಯರ ಪ್ರವೇಶವನ್ನು ಬೆಂಬಲಿಸದೆ ಅನುಸರಣೆಯಲ್ಲಿರುವ ಕ್ರಮವನ್ನೇ ಮುಂದುವರಿಸಬೇಕು ಎಂದಿದೆ.
ಸುಪ್ರೀಂಕೋರ್ಟ್‍ನ ಮುಖ್ಯ ನ್ಯಾಯಮೂರ್ತಿ ನೇತೃತ್ವದ ಪೀಠದ ಇಂತಹ ನಿರ್ದೇಶನ ನಿರ್ಲಕ್ಷಿಸಿ, ಗೃಹ ಇಲಾಖೆ ಮತ್ತೊಮ್ಮೆ ಮಹಿಳೆಯರ ಪ್ರವೇಶಕ್ಕೆ ಅನುಕೂಲಕರ ನಿಲುವು ತೆಗೆದುಕೊಳ್ಳುತ್ತಿದೆ. 28/9/2018 ರ ಸುಪ್ರೀಂಕೋರ್ಟ್ ನೀಡಿದ ಯುವತಿಯರ ಪ್ರವೇಶದ ತೀರ್ಪಿನಂತೆ ಸನ್ನಿಧಿಯಲ್ಲಿ ಪೊಲೀಸ್ ಕರ್ತವ್ಯದಲ್ಲಿರುವ ಅಧಿಕಾರಿಗಳಿಗೆ ಗೃಹ ಇಲಾಖೆ ಮುದ್ರಿಸಿ ವಿತರಿಸಿದ ಸೂಚನೆಗಳನ್ನು ಒಳಗೊಂಡಿರುವ ಕೈಪಿಡಿಯಲ್ಲಿ ಶಬರಿಮಲೆಗೆ ಎಲ್ಲರಿಗೂ ಪ್ರವೇಶವಿದೆ ಎಂದು ಸೇರಿಸಲಾಗಿದೆ. ಶಬರಿಮಲೆಯಲ್ಲಿ ಯಾತ್ರಾರ್ಥಿಗಳನ್ನು ಪೋಲೀಸರು ಹೇಗೆ ನಡೆಸಿಕೊಳ್ಳಬೇಕು, ಡ್ಯೂಟಿ ಪಾಯಿಂಟ್‍ಗಳು, ಪೂಜಾ ಸಮಯಗಳು ಮತ್ತು ಪೂಜಾ ಸ್ಥಳಗಳ ವಿಶೇಷತೆಗಳೇನು ಎಂಬ ಮಾಹಿತಿಯನ್ನು ಕೈಪಿಡಿ ಪುಸ್ತಕ ಒಳಗೊಂಡಿದೆ. ಈ ಹೊಸ ನಿರ್ದೇಶನದಿಂದ ಮತ್ತೆ ಶಬರಿಮಲೆಯಲ್ಲಿ ಗುಲ್ಲೇಳುವ ಸಾಧ್ಯತೆ ಇದೆ ಎನ್ನಲಾಗಿದೆ.
ಶಬರಿಮಲೆಗೆ ಎಲ್ಲರಿಗೂ ಪ್ರವೇಶ ಅವಕಾಶ ನೀಡಿ ಸರ್ಕಾರದಿಂದ ಸೂಚನೆ: ಮತ್ತೆ ಗುಲ್ಲಿಗೆ ಸಾಧ್ಯತೆ
0
ನವೆಂಬರ್ 17, 2022
Tags