ಪೆರ್ಲ : ಎಣ್ಮಕಜೆ ಗ್ರಾಮ ಪಂಚಾಯತಿ ಮಟ್ಟದ ಕೇರಳೋತ್ಸವ ಕ್ರೀಡಾ-ಆಟೋಟ ಹಾಗೂ ಸಾಂಸ್ಕøತಿಕ ಕಾರ್ಯಕ್ರಮಗಳೊಂದಿಗೆ ಜರಗಿ ಸಂಪನ್ನಗೊಂಡಿತು.
ಪಂಚಾಯತಿನ ವಿವಿಧ ಸಂಘಟನೆಗಳು ಕ್ರೀಡೆ ಹಾಗೂ ಆಟೋಟ ಸ್ಪರ್ಧೆಗೆ ನೇತೃತ್ವ ವಹಿಸಿ ಯಶಸ್ವಿಗೊಳಿಸಿದರು. ಪಂಚಾಯತಿ ಸಭಾಂಗಣದಲ್ಲಿ ಸಾಹಿತ್ಯ ಹಾಗೂ ಸಾಂಸ್ಕøತಿಕ ಸ್ಪರ್ಧೆಗಳು ಜರಗಿದವು. ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಮಂಜೇಶ್ವರ ಬ್ಲಾಕ್ ಪಂಚಾಯತಿ ಅಧ್ಯಕ್ಷೆ ಸಮೀರಾ ಟೀಚರ್ ವಿಜೇತರಿಗೆ ಬಹುಮಾನ ವಿತರಿಸಿದರು. ಎಣ್ಮಕಜೆ ಪಂ.ಅಧ್ಯಕ್ಷ ಸೋಮಶೇಖರ್ ಜೆ.ಎಸ್.ಅಧ್ಯಕ್ಷತೆವಹಿಸಿದ್ದರು. ಪಂ.ಅಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷ ಬಿ.ಎಸ್.ಗಾಂಭೀರ್, ಮಂಜೇಶ್ವರ ಬ್ಲಾಕ್ ಪಂ.ಸದಸ್ಯರಾದ ಬಟ್ಟು ಶೆಟ್ಟಿ, ಕೆ.ಪಿ.ಅನಿಲ್ ಕುಮಾರ್ ಮಣಿಯಂಪಾರೆ, ಜಿ.ಪಂ.ಸದಸ್ಯ ನಾರಾಯಣ ನಾಯ್ಕ್, ಪಂ.ಸದಸ್ಯರಾದ ರಾಧಾಕೃಷ್ಣ ನಾಯಕ್ ಶೇಣಿ, ಮಹೇಶ್ ಭಟ್, ಕುಸುಮಾವತಿ ಟೀಚರ್, ರಾಮಚಂದ್ರ ಎಂ, ಶಶಿಧರ ಕಾಟುಕುಕ್ಕೆ ಮೊದಲಾದವರು ಉಪಸ್ಥಿತರಿದ್ದರು. ಪಂ.ಹೆಡ್ ಕ್ಲಾರ್ಕ್ ಪ್ರೇಮ್ ಚಂದ್ ಸ್ವಾಗತಿಸಿ ಕೇರಳೋತ್ಸವದ ಸಂಚಾಲಕ ಫಾರೂಕ್ ಪಳ್ಳಂ ವಂದಿಸಿದರು. ಆಶ್ರಫ್ ಮಾಸ್ತರ್ ಹಾಗೂ ನವಾಸ್ ಮತ್ರ್ಯ ನಿರೂಪಿಸಿದರು. ಕೇರಳೋತ್ಸವದ ಸಮಗ್ರ ವಿಭಾಗದಲ್ಲಿ ನೇತಾಜಿ ಫ್ರೆಂಡ್ಸ್ ಕ್ಲಬ್ ಪೆರ್ಲ ಪ್ರಥಮ, ಮಾತೃಭೂಮಿ ಸ್ವರ್ಗ ದ್ವಿತೀಯ ಹಾಗೂ ಯುವ ಕೂಟಾಯಿಮ ತೃತೀಯ ಬಹುಮಾನಕ್ಕೆ ಪಾತ್ರವಾಯಿತು.
ಎಣ್ಮಕಜೆ ಗ್ರಾಮ ಪಂಚಾಯತು ಕೇರಳೋತ್ಸವ ಸಂಪನ್ನ: ನೇತಾಜಿ ಪೆರ್ಲ ಚಾಂಪಿಯನ್
0
ನವೆಂಬರ್ 24, 2022
Tags