ಪಂದಳಂ: ಅಯ್ಯಪ್ಪ ಭಕ್ತರು ವಸ್ತ್ರಗಳನ್ನು ಪಂಭಾ ನದಿಗೆ ಎಸೆಯುವುದು ಅನೈತಿಕ ಎಂದು ಶಬರಿಮಲೆ ತಂತ್ರಿ ಕಂಠಾರರ್ ರಾಜೀವರ್ ಹೇಳಿದ್ದಾರೆ.
ಪಂಬಾ ಪವಿತ್ರ ನದಿಯಾಗಿದ್ದು, ಭಕ್ತರು ಇಂತಹ ಆಚರಣೆಗಳಿಂದ ದೂರ ಸರಿಯಬೇಕು ಎಂದು ಕರೆನೀಡಿದ್ದಾರೆ.
ಭಕ್ತರು ತಾವು ತಂದ ಬಟ್ಟೆಗಳನ್ನು ಪಂಬಾಗೆ ಎಸೆಯದಂತೆ ಗುರುಸ್ವಾಮಿಗಳು ವಿಶೇಷ ಕಾಳಜಿ ವಹಿಸಬೇಕು. ಈ ಬಗ್ಗೆ ಗುರುಸ್ವಾಮಿಗಳು ಶಿಷ್ಯರಿಗೆ ಕಟ್ಟುನಿಟ್ಟಿನ ಸೂಚನೆ ನೀಡಬೇಕು. ಪವಿತ್ರ ನದಿಯನ್ನು ಪವಿತ್ರ ನದಿಯಾಗಿ ಉಳಿಸಿಕೊಳ್ಳಲು ಎಲ್ಲರೂ ಬದ್ಧರಾಗಿರಬೇಕೆಂಬ ಸಂಕಲ್ಪ ಭಕ್ತಿಯನ್ನು ಉನ್ನತಿಗೊಯ್ಯುತ್ತದೆ ಎಂದು ತಂತ್ರಿಗಳು ಕರೆನೀಡಿದ್ದಾರೆ.
ಶಬರಿಮಲೆಯು ಗರ್ಭಗೃಹ(ಪೂಂಗಾವನ)ದಷ್ಟೇ ಪವಿತ್ರವಾದುದು ಪಂಪಾನದಿ. ಪವಿತ್ರ ನದಿಯ ದಡ ಮತ್ತು ನದಿಯನ್ನು ರಕ್ಷಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಯಾವುದೇ ತ್ಯಾಜ್ಯವನ್ನು ಎಸೆಯದೆ ಭೇಟಿ ನೀಡಿ ಹಿಂತಿರುಗಬೇಕು ಎಂದು ತಂತ್ರಿಗಳು ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿರುವರು.
ಭಕ್ತರು ತಮ್ಮ ಬಟ್ಟೆಗಳನ್ನು ಪಂಪಾನದಿಯಲ್ಲಿ ಎಸೆಯುವುದು ಅನೈತಿಕ; ತಂತ್ರಿ ಕಂಠಾರರ್ ರಾಜೀವರರ್ ಕರೆ
0
ನವೆಂಬರ್ 29, 2022