ಕಾಸರಗೋಡು: ಆರಾಧನಾಲಯಗಳಲ್ಲಿ ಅಹಾರ ಸುರಕ್ಷತೆ ಖಾತ್ರಿಪಡಿಸುವ ನಿಟ್ಟಿನಲ್ಲಿ ದೇವಾಲಯಗಳಿಗೆ ನೀಡಲಾಗುವ ಗುಣಮಟ್ಟದ 'ಭೋಗ್'(ಬ್ಲಿಸ್‍ಫುಲ್ ಹೈಜೀನಿಕ್ ಆಫರಿಂಗ್ ಟು ಗಾಡ್)ಸರ್ಟಿಫಿಕೇಟ್ ಜಿಲ್ಲೆಯ ಪ್ರಮುಖ ಶಕ್ತಿಕೇಂದ್ರಗಳಲ್ಲಿ ಒಂದಾದ ಮಲ್ಲ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನಕ್ಕೆ ಲಭಿಸಿದೆ.
ಆಹಾರ ಸುರಕ್ಷಾ ಪ್ರಾಧಿಕಾರ ನಿರ್ದೇಶ ಪ್ರಕಾರ ದೇಶಾದ್ಯಂತ ಜಾರಿಗೊಳಿಸಲಾಗುತ್ತಿರುವ ಯೋಜನೆ ಇದಾಗಿದೆ. ಸರ್ಟಿಫಿಕೇಟ್‍ಗಾಗಿ ಕೇರಳದ 16 ಪ್ರಮುಖ ಆರಾಧನಾಲಯಗಳನ್ನುಒಳಪಡಿಸಲಾಗಿದ್ದು, ಕಾಸರಗೋಡು ಜಿಲ್ಲೆಯಿಂದ ಮಲ್ಲ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನ ಒಳಗೊಂಡಿದೆ. ಪರಶ್ಯಿನಿ ಶ್ರೀ ಮುತ್ತಪ್ಪ-ತಿರುವಪ್ಪ ಕ್ಷೇತ್ರ, ಶ್ರೀ ಕೂಡಲ್ ಮಾಣಿಕ್ಯ ಕ್ಷೇತ್ರ, ತಿರುನೆಲ್ಲಿ ಕ್ಷೇತ್ರಗಳೂ ಯೋಜನೆಯಲ್ಲಿ ಸಥಾನ ಪಡೆದುಕೊಂಡಿದೆ. ಫುಡ್ ಸೇಫ್ಟಿ ಏಂಡ್ ಸ್ಟ್ಯಾಂಡರ್ಡೈಸೇಶನ್ ಆಫ್ ಇಂಡಿಯಾ(ಎಫ್‍ಎಸ್‍ಎಸ್‍ಎಐ)ಆಹಾರ ಸುರಕ್ಷತೆಗಿರುವ ಮಾನದಂಡ ಪರಿಶೀಲಿಸಿ ನೀಡುವ ಸರ್ಟಿಫಿಕೇಟ್ ಇದಾಗಿದೆ. ಆಹಾರ ಸಉರಕ್ಷಾ ಇಲಾಖೆ ಮತ್ತು ಆರಾಧನಾಲಯ ಸಮಿತಿಗಳು ಸೇರಿ ಯೋಜನೆ ಜಾರಿಗೊಳಿಸಿದೆ.
ಮಲ್ಲ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ಹಗಲು ಮತ್ತು ರಾತ್ರಿ ದೈನಂದಿನ 500ಕ್ಕೂ ಹೆಚ್ಚು ಮಂದಿಗೆ ಅನ್ನದಾನ ನಡೆಯುತ್ತಿದೆ. ಆಹಾರ ತಯಾರಿಸುವ ಕೊಠಡಿಗಳ ಶುಚಿತ್ವ, ನೌಕರರ ಆರೋಗ್ಯ, ಶುಚಿಕರ ಆಹಾರ ಪೂರೈಕೆ ಬಗ್ಗೆ ದೇವಸ್ಥಾನದಲ್ಲಿ ಹೆಚ್ಚಿನ ಕಾಳಜಿ ವಹಿಸುತ್ತಾ ಬಂದಿರುವುದನ್ನು ಪರಿಗಣಿಸಿ ಈ ಗುಣಮಟ್ಟದ ಸರ್ಟಿಫಿಕೇಟ್ ನೀಡಲಾಗುತ್ತಿದೆ. ಆಹಾರ ಸುರಕ್ಷಾ ವಿಭಾಗ ನಡೆಸಿರುವ ಪರಿಶೀಲನೆ ಹಾಗೂ ಕೆಲವೊಂದು ನಿರ್ದೇಶಗಳನ್ನು ಕಟ್ಟುನಿಟ್ಟಾಗಿ ಪಾಲಿಸಿಕೊಂಡು ಬಂದಿರುವುದರ ಫಲವಾಗಿ ಈ ಪ್ರಶಂಸೆಗೆ ಪಾತ್ರವಾಗುವಂತಾಘಿದೆ ಎಂದು ದೇವಸ್ಥಾನ ಸಮಿತಿ ಪದಾಧಿಕಾರಿಗಳು ತಿಳಿಸಿದ್ದಾರೆ.
ಮಲ್ಲ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನಕ್ಕೆ "ಭೋಗ್'ಸರ್ಟಿಫಿಕೇಟ್
0
ನವೆಂಬರ್ 28, 2022