ಶ್ರೀನಗರ: ಕಾಶ್ಮೀರದ ಅತಿ ಎತ್ತರದ ಬಾಲ್‌ಟಾಲ್-ಝೋಜಿಲಾ ಪ್ರದೇಶದಲ್ಲಿ ಇದೇ ಮೊದಲ ಬಾರಿಗೆ ಹಿಮ ಚಿರತೆ ಪತ್ತೆಯಾಗಿದೆ.
ಪರಿಸರ ಸಂರಕ್ಷಣಾ ಫೌಂಡೇಷನ್‌ನ (ಭಾರತ) ಸಂಶೋಧಕರು ಜಮ್ಮು ಮತ್ತು ಕಾಶ್ಮೀರದ ವನ್ಯಜೀವಿ ರಕ್ಷಣಾ ಇಲಾಖೆಯ ಸಹಯೋಗದೊಂದಿಗೆ ಕಣಿವೆ ರಾಜ್ಯದ ಗುಡ್ಡಗಾಡು ಪ್ರದೇಶಗಳಲ್ಲಿ ಕ್ಯಾಮೆರಾಗಳನ್ನು ಅಳವಡಿಸುವ ಕಾರ್ಯ ಕೈಗೊಂಡಿದ್ದು, ಹೀಗೆ ಅಳವಡಿಸಲಾಗಿರುವ ಕ್ಯಾಮೆರಾವೊಂದರಲ್ಲಿ ಹಿಮ ಚಿರತೆಯ ದೃಶ್ಯ ಸೆರೆಯಾಗಿದೆ.