ಪೆರ್ಲ: ನೆಲವನ್ನು ನಾವು ನಿರ್ಜೀವ ವಸ್ತುವಾಗಿ ಕಾಣಬಾರದು. ಅನ್ನ ಆಹಾರ, ಹಣ್ಣು- ಹಂಪಲು, ಹೂವು ಮೇವುಗಳನ್ನು ನೀಡುವ ಭೂದೇವಿಯಾಗಿ ಕಾಣಬೇಕು. ನೀರು ಎಲ್ಲೇ ಇದ್ದರೂ ಅದು ಗಂಗಾ ಮಾತೆಯೇ. ಪರಿಸರದ ಎಲ್ಲೆಲ್ಲೂ ದೈವತ್ವವನ್ನೇ ಕಾಣುವ ಮನೋಭಾವವನ್ನು ಬೆಳೆಸಿಕೊಳ್ಳಬೇಕು ಎಂದು ಭಾರತೀಯ ಭೂಸೇನೆಯ ನಿವೃತ್ತ ಸೈನಿಕ ಭಾಸ್ಕರನ್ ವೆಳ್ಳೂರ್ ಹೇಳಿದರು.
ಶೇಣಿ ಶ್ರೀ ಶಾರದಾಂಬಾ ಹೈಯರ್ ಸೆಕೆಂಡರಿ ಶಾಲೆಯ ಎನ್ನೆಸ್ಸೆಸ್ ವಿದ್ಯಾರ್ಥಿಗಳಿಗಾಗಿ ಕೇರಳ ಸಾಮಾಜಿಕ ಅರಣ್ಯ ಇಲಾಖೆಯು ರಾಣಿಪುರಂನಲ್ಲಿ ಆಯೋಜಿಸಿದ್ದ ಪ್ರಕೃತಿ ಅಧ್ಯಯನ ಶಿಬಿರದ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಅವರು ಮಾತನಾಡಿದರು.
ಮಾನವನ ಎಲ್ಲ ಅಗತ್ಯಗಳನ್ನು ಪೂರೈಸುವ ಶಕ್ತಿ ಪ್ರಕೃತಿಗೆ ಇದೆ. ಆದರೆ ಅವನ ದುರಾಸೆಯನ್ನಲ್ಲ. ಅವನು ಹೊಸ ಕಾಲವನ್ನು ಎμÉ್ಟೀ ಬಲಿಷ್ಠಗೊಳಿಸಿದರೂ ಪ್ರಕೃತಿಯ ಎದುರು ನಿಲ್ಲಲಾರ ಎಂದು ಅವರು ಅಭಿಪ್ರಾಯ ಪಟ್ಟರು.
ರಾಣಿಪುರಂ ಸಂರಕ್ಷಿತ ಅರಣ್ಯದಲ್ಲಿ ಚಾರಣವನ್ನು ನಡೆಸಿದ ವಿದ್ಯಾರ್ಥಿಗಳು ಅಲ್ಲಿನ ಜೀವ ವೈವಿಧ್ಯಗಳ ಬಗ್ಗೆ ಮಾಹಿತಿಗಳನ್ನು ಪಡೆದರು.
ಸಹಾಯಕ ಅರಣ್ಯಾಧಿಕಾರಿ ಅನಿಲ್ ಸ್ವಾಗತಿಸಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಶೇಣಿ ಶ್ರೀ ಶಾರದಾಂಬಾ ಹೈಯರ್ ಸೆಕೆಂಡರಿ ಶಾಲೆಯ ಪ್ರಾಂಶುಪಾಲೆ ವಿಜಯಲಕ್ಷ್ಮಿ, ರಾಷ್ಟ್ರೀಯ ಸೇವಾ ಯೋಜನೆಯ ಯೋಜನಾಧಿಕಾರಿ ಸಂತೋμï ಕುಮಾರ್ ಕ್ರಾಸ್ತ, ಶಿಕ್ಷಕರಾದ ಶಾಸ್ತ ಕುಮಾರ್, ಡಾ. ಅನೀಶ್ ಕುಮಾರ್ ಮತ್ತು ರಾಣಿಪುರಂ ಅರಣ್ಯ ಸಂರಕ್ಷಣ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.
ಶೇಣಿ ಶಾಲಾ ಎನ್ನೆಸ್ಸೆಸ್ ವಿದ್ಯಾರ್ಥಿಗಳಿಂದ ರಾಣಿಪುರದಲ್ಲಿ ಪ್ರಕೃತಿ ಅಧ್ಯಯನ ಶಿಬಿರ
0
ನವೆಂಬರ್ 17, 2022
Tags