ಆಲಪ್ಪುಳ: ಶಾಲಾ ಶಿಕ್ಷಣದ ವೆಚ್ಚ ಭರಿಸಲು ಕಡಲೆ ಮಾರುತ್ತಿರುವ ಹುಡುಗಿಯೊಬ್ಬಳ ಸುದ್ದಿ ಇತ್ತೀಚೆಗೆ ಹೊರಬಿದ್ದಿದೆ.
ವಿನಿಶಾ ಆಲಪ್ಪುಳದ ಕಣಿಚ್ಕುಲಂಗರ ಹೈಯರ್ ಸೆಕೆಂಡರಿ ಶಾಲೆಯ ಪ್ಲಸ್ ಟು ವಿದ್ಯಾರ್ಥಿನಿ. ಬಾಲಕಿ ತನ್ನ ಶಾಲೆಯ ಮುಂದೆ ಕಡಲೆ ವ್ಯಾಪಾರ ನಡೆಸುತ್ತಿದ್ದಳು. ತನ್ನ ಶಿಕ್ಷಣಕ್ಕಾಗಿ ಹಣವನ್ನು ಗಳಿಸುವ ಸಲುವಾಗಿ, ಬಾಲಕಿ ಕಡಲೆ ವ್ಯಾಪಾರವನ್ನು ಕೈಗೆತ್ತಿಕೊಂಡಳು.
ಈ ಸುದ್ದಿ ಹೊರಬಿದ್ದ ಬೆನ್ನಲ್ಲೇ ಆಲಪ್ಪುಳ ಜಿಲ್ಲಾಧಿಕಾರಿ ಕೃಷ್ಣ ತೇಜ ಬಾಲಕಿಯ ಸಹಾಯಕ್ಕೆ ಮುಂದೆಬಂದಿದ್ದಾರೆ. ಮಗುವಿನ ಎಲ್ಲಾ ಶೈಕ್ಷಣಿಕ ವೆಚ್ಚವನ್ನು ಭರಿಸುವ ಭರವಸೆಯನ್ನು ಜಿಲ್ಲಾಧಿಕಾರಿ ನೀಡಿದ್ದಾರೆ. ಅಲ್ಲದೇ ಬಾಡಿಗೆ ಮನೆಯಲ್ಲಿ ವಾಸವಿರುವ ವಿನಿಶಾ ಕುಟುಂಬಕ್ಕೆ ಲೈಫ್ ಮಿಷನ್ ಯೋಜನೆಯಲ್ಲಿ ಸೇರಿಸಿ ಮನೆ ನೀಡಲು ಕ್ರಮಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ಬಾಲಕಿ ಕಡಲೆಬೀಜ ಮಾರುತ್ತಿರುವ ಸುದ್ದಿಯನ್ನು ಗಮನಿಸಿದ ಅವರು ತಮ್ಮ ಮನೆಗೆ ಬಾಲಕಿಯ ಕುಟುಂಬವನ್ನು ಕರೆಸಿಕೊಂಡರು. ಮಾಹಿತಿ ಕೇಳಿದ ಜಿಲ್ಲಾಧಿಕಾರಿ, ಯಾವುದೇ ಕಾರಣಕ್ಕೂ ಹಣದ ಕೊರತೆಯ ಹಿನ್ನೆಲೆಯಲ್ಲಿ ಅಧ್ಯಯನಕ್ಕೆ ಅಡ್ಡಿಯಾಗÀಬಾರದು ಎಂದು ಸೂಚಿಸಿದರು. ನಂತರ ಶಿಕ್ಷಣದ ವೆಚ್ಚವನ್ನು ತೆಗೆದುಕೊಂಡರು.
ಸಂಜೆ ತರಗತಿ ಮುಗಿದ ನಂತರ ವಿದ್ಯಾರ್ಥಿನಿ ಸಮವಸ್ತ್ರ ಧರಿಸಿ ಕಡಲೆ ಮಾರುತ್ತಿರುವಳು. ತಂದೆ ಕೂಲಿ ಕಾರ್ಮಿಕ. ಕಡಲೆ ವ್ಯಾಪಾರ ಮಾಡುತ್ತಿದ್ದ ತಾಯಿಗೆ ಕಾಲು ನೋವು ಬಂದಾಗ ತಾಯಿಗೆ ಸಹಾಯ ಮಾಡಲು ವಿನಿಶಾ ಈ ಕಿರು ವೃತ್ತಿಗೆ ತೊಡಗಿಸಿಕೊಂಡಳು.
ಇನ್ನು ಶಾಲಾ ಕಲಿಕೆಗೆ ಕಡಲೆ ಮಾರಬೇಕೆಂದಿಲ್ಲ: ಪ್ಲಸ್ ಟು ವಿದ್ಯಾರ್ಥಿಯ ಶಿಕ್ಷಣ ವೆಚ್ಚ ಭರಿಸಲಿರುವ ಅಲಪ್ಪುಳ ಕಲೆಕ್ಟರ್
0
ನವೆಂಬರ್ 01, 2022