ಮಧೂರು: ಕುಂಬಳೆ, ವಿಟ್ಲ ಸೀಮೆಗಳ ಹಲವು ದೇವಸ್ಥಾನ, ದೈವಸ್ಥಾನ, ತರವಾಡು ಮನೆಗಳು, ಮಂದಿರಗಳ ತಂತ್ರಿವರ್ಯರಾದ ಮಧೂರು, ಉಳಿಯ ಶ್ರೀ ಧನ್ವಂತರೀ ಸನ್ನಿಧಿಯ ಉಳಿಯತ್ತಾಯ ವಿಷ್ಣು ಆಸ್ರರ ಮನೆಯಲ್ಲಿ ನಡೆಯಲಿರುವ ಕಳಿಯಾಟ ಮಹೋತ್ಸವದ ಅವಲೋಕನಾ ಸಭೆ ನ. 26 ಶನಿವಾರ 2.30 ಕ್ಕೆ ಪರಕ್ಕಿಲ ಶ್ರೀ ಮಹಾದೇವ ಶಾಸ್ತಾ ವಿನಾಯಕ ಕ್ಷೇತ್ರ ಸಭಾ ಭವನದಲ್ಲಿ ನಡೆಯಲಿದೆ. ಸಭೆಯಲ್ಲಿ ಎಡನೀರು ಮಠಾಧೀಶ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ, ಕೊಂಡೆವೂರು ನಿತ್ಯಾನಂದ ಆಶ್ರಮದ ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿ ಮತ್ತು ಮಾಯಿಪ್ಪಾಡಿ ಅರಸರಾದ ಶ್ರೀದಾನಮಾರ್ತಾಂಡ ವರ್ಮ ರಾಮಾಂತರಸುಗಳು ಉಪಸ್ಥಿತರಿದ್ದು ಮಾರ್ಗದರ್ಶನ ನೀಡುವರು.
ಊರ ಗಣ್ಯ ಮಹನೀಯರು ಭಾಗವಹಿಸುವರು. ಸಭೆಯಲ್ಲಿ ಕಳಿಯಾಟ ಮಹೋತ್ಸವದ ಬಗ್ಗೆ ಅವಲೋಕನೆ ನಡೆಯಲಿದೆ. ಈ ಸಭೆಯಲ್ಲಿ ಎಲ್ಲ ಭಗವದ್ಭಕ್ತರೂ ಭಾಗವಹಿಸಬೇಕೆಂದು ಬ್ರಹ್ಮಶ್ರೀ ಉಳಿಯತ್ತಾಯ ವಿಷ್ಣು ಅಸ್ರ ಅವರು ವಿನಂತಿಸಿದ್ದಾರೆ.
ಉಳಿಯ ಶ್ರೀ ಧನ್ವಂತರೀ ಸನ್ನಿಧಿಯಲ್ಲಿ ಕಳಿಯಾಟ ಮಹೋತ್ಸವದ ಅವಲೋಕನ ಸಭೆ
0
ನವೆಂಬರ್ 19, 2022
Tags