ಕಾಸರಗೋಡು: ವಿಷ ಸೇವಿಸಿ ಚಿಕಿತ್ಸೆಯಲ್ಲಿದ್ದ ಯುವಕ ಮೃತಪಟ್ಟಿದ್ದಾನೆ. ಕಾಸರಗೋಡು ಆವಿಕ್ಕರದಲ್ಲಿ ಘಟನೆ ನಡೆದಿದೆ. ವಯನಾಡು ಮೂಲದ ಜಯಪ್ರಕಾಶ್ ನಾರಾಯಣನ್ (45) ಮೃತರು.
ಕಳೆದ ಸೋಮವಾರ ಅವರ ಪತ್ನಿ ರೆಮ ವಿಷ ಸೇವಿಸಿ ಸಾವನ್ನಪ್ಪಿದ್ದರು. ತನಗೆ ವಿಷ ಕುಡಿಸಿದ್ದು ಪತ್ನಿಯೇ ಎಂದು ಜಯಪ್ರಕಾಶ್ ಹೇಳಿಕೆ ನೀಡಿದ್ದಾರೆ.
ನವೆಂಬರ್ 7 ರಂದು ರೆಮ ಶವವಾಗಿ ಪತ್ತೆಯಾಗಿದ್ದರು. ಜಯಪ್ರಕಾಶ ವಿಷ ಸೇವಿಸಿ ಸಂಪೂರ್ಣ ಅಸ್ವಸ್ಥಗೊಂಡಿದ್ದರು. ನಂತರ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು.
ರೆಮ ತನಗೆ ವಿಷ ನೀಡಿ,ಆಕೆಯೂ ಸೇವಿಸಿದ್ದಳು ಎಂದು ಜಯಪ್ರಕಾಶ್ ಹೇಳಿಕೆ ನೀಡಿದ್ದಾರೆ. ಘಟನೆ ಸಂಬಂಧ ಹೊಸದುರ್ಗ ಪೋಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಪತ್ನಿ ವಿಷ ನೀಡಿರುವುದಾಗಿ ಹೇಳಿಕೆ: ಪತ್ನಿಯ ಬೆನ್ನಿಗೆ ಪತಿಯೂ ಸಾವು
0
ನವೆಂಬರ್ 12, 2022