ಕುಂಬಳೆ: ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ಮುಳ್ಳೇರಿಯ ಹವ್ಯಕ ಮಂಡಲದ ವಿದ್ಯಾರ್ಥಿ ಪ್ರತಿಭಾದರ್ಶನ ಕಾರ್ಯಕ್ರಮ ಮುಜುಂಗಾವು ಶ್ರೀ ಭಾರತೀ ವಿದ್ಯಾಪೀಠದಲ್ಲಿ ಜರಗಿತು. ಮಂಡಲ ಮುಷ್ಠಿ ಭಿಕ್ಷಾ ಯೋಜನೆಯ ಪ್ರಧಾನೆ ಪದ್ಮಾವತಿ ಡಿ.ಪಿ.ಭಟ್ ದೀಪ ಬೆಳಗಿಸಿದರು. ಗೋಕರ್ಣ ಮಂಡಲ ಮಾತೃತ್ವಮ್‍ನ ಅಧ್ಯಕ್ಷೆ ಈಶ್ವರಿ ಬೇರ್ಕಡವು ಉದ್ಘಾಟಿಸಿ ಮಾತನಾಡಿ ಬೌದ್ಧಿಕ ಮತ್ತು ಆಟೋಟ ಸ್ಪರ್ಧೆಗಳಿಂದ ವಿದ್ಯಾರ್ಥಿಗಳು ದೈಹಿಕವಾಗಿಯೂ ಮಾನಸಿಕವಾಗಿ ಸದೃಢರಾಗುತ್ತಾರೆ. ಮಕ್ಕಳಿಗೆ ಪ್ರೋತ್ಸಾಹವನ್ನು ನೀಡುವುದು ಅವರ ಬೆಳವಣಿಗೆಗೆ ಕಾರಣವಾಗುತ್ತದೆ ಎಂದರು.
ಮಂಡಲ ಅಧ್ಯಕ್ಷ ಬಾಲಸುಬ್ರಹ್ಮಣ್ಯ ಸರ್ಪಮಲೆ ಮಾತನಾಡಿ, ಮುಂದಿನ ಜನಾಂಗಕ್ಕೆ ನೀಡುವ ಪ್ರೋತ್ಸಾಹವು ಸಮಾಜವನ್ನು ಬಲಿಷ್ಠಗೊಳಿಸಲು ಕಾರಣವಾಗಲಿದೆ. ಸಂಘಟನಾ ಚಟುವಟಿಕೆಗಳು ನಿರಂತರ ನಡೆಯುತ್ತಿರಬೇಕು ಎಂದರು. ಕಾರ್ಯದರ್ಶಿ ಕೃಷ್ಣಮೂರ್ತಿ ಮಾಡಾವು, ಉಪಾಧ್ಯಕ್ಷೆ ಕುಸುಮ ಪೆರ್ಮುಖ, ಯುವ ವಿಭಾಗದ ಕೇಶವ ಪ್ರಕಾಶ ಮುಣ್ಚಿಕ್ಕಾನ ಮೊದಲಾದವರು ಶುಭಹಾರೈಸಿದರು. ಮುಳ್ಳೇರಿಯ ಮಂಡಲದ 12 ವಲಯಗಳಿಂದ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಗೋಗೀತೆ, ಗೋಚಿತ್ರ, ಭಾಷಣ, ಚೆಂಡು ಎಸೆಯುವುದು, ಹಗ್ಗಜಗ್ಗಾಟ, ಓಟ, ಮಂತ್ರಕಂಠಪಾಠ, ರಸಪ್ರಶ್ನೆ, ಅಭಿನಯಗೀತೆ, ಸ್ಮರಣ ಶಕ್ತಿ ಪರೀಕ್ಷೆ, ಲಲಿತಾ ಸಹಸ್ರನಾಮ ಪಠನ ಮೊದಲಾದ ಸ್ಪರ್ಧೆಗಳಲ್ಲಿ ವಿದ್ಯಾರ್ಥಿಗಳು ಅತ್ಯುತ್ಸಾಹದಿಂದ ಪಾಲ್ಗೊಂಡಿದ್ದರು. ಮಂಡಲ ವಿದ್ಯಾರ್ಥಿ ವಾಹಿನಿ ಪ್ರಧಾನ ಶ್ಯಾಮಪ್ರಸಾದ ಕುಳಮರ್ವ ಸ್ವಾಗತಿಸಿ, ಕುಂಬಳೆ ವಲಯ ಅಧ್ಯಕ್ಷ ಡಾ. ಡಿ.ಪಿ. ಭಟ್ ವಂದಿಸಿದರು. ಗುರುಮೂರ್ತಿ ನಾಯ್ಕಾಪು ನಿರೂಪಿಸಿದರು. ಸ್ಪರ್ಧೆಗಳಲ್ಲಿ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿಗಳು ಮಹಾಮಂಡಲ ವ್ಯಾಪ್ತಿಯ ಸ್ಪರ್ಧೆಗೆ ಆಯ್ಕೆಯಾಗಿರುತ್ತಾರೆ.
ಮುಳ್ಳೇರಿಯ ಮಂಡಲ ವಿದ್ಯಾರ್ಥಿ ಪ್ರತಿಭಾದರ್ಶನ
0
ನವೆಂಬರ್ 30, 2022
Tags