ಕಾಸರಗೋಡು: ಅತಿಯಗಿ ಏರಿಕೆಯಾಗುತ್ತಿರುವ ಬೆಲೆ ನಿಯಂತ್ರಣಕ್ಕೆ ಸರ್ಕಾರ ಅಗತ್ಯ ಕ್ರಮ ಕೈಗೊಳ್ಳುವಂತೆ ಲೈಸನ್ಸ್‍ಡ್ ಇಂಜಿನಿಯ್ಸ್ ಏಂಡ್ ಸುಪರ್‍ವೈಸರ್ಸ್ ಫೆಡರೇಶನ್(ಲೆನ್ಸ್‍ಫೆಡ್)ನ 23ನೇ ಜಿಲ್ಲಾ ಸಮಾವೇಶ ಆಗ್ರಹಿಸಿತು.
ಕಾಸರಗೋಡು ಐಎಂಎ ಹೌಸ್‍ನಲ್ಲಿ ಬುಧವಾರ ಆಯೋಜಿಸಲಾಗಿದ್ದ ಕಾರ್ಯಕ್ರಮವನ್ನು ಸಂಸದ ರಾಜ್ ಮೋಹನ್ ಉನ್ನಿಥಾನ್ ಉದ್ಘಾಟಿಸಿದರು. ಈ ಸಂದರ್ಭ ಮಾತನಾಡಿದ ಅವರು, ಕಟ್ಟಡ ನಿರ್ಮಾಣ ಸಾಮಗ್ರಿಗಳ ಲಭ್ಯತೆ ಖಚಿತಪಡಿಸಲು ಅಧಿಕಾರಿಗಳು ಗಮನಹರಿಸಬೇಕು, ಜತೆಗೆ ನಿರ್ಮಾಣ ಸಾಮಗ್ರಿಗಳ ಬೆಲೆ ದಿಢೀರ್ ಏರಿಕೆಯಾಗುತ್ತಿರುವುದನ್ನು ತಡೆಯಲು ಸರ್ಕಾರ ತುರ್ತು ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು. ಸಂಘಟನೆ ಜಿಲ್ಲಾಧ್ಯಕ್ಷ ಎಂ.ವಿಜಯನ್ ಅಧ್ಯಕ್ಷತೆ ವಹಿಸಿದ್ದರು. ಶಾಸಕ ಇ.ಚಂದ್ರಶೇಖರನ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಲೆನ್ಸ್ ಫೆಡ್ ರಾಜ್ಯಾಧ್ಯಕ್ಷ ಸಿ.ಎಸ್.ವಿನೋದ್ ಕುಮಾರ್ ಪ್ರಧಾನ ಭಾಷಣ ಮಾಡಿದರು. ರಾಜ್ಯ ಉಪಾಧ್ಯಕ್ಷ ಇ.ಪಿ.ಉಣ್ಣಿಕೃಷ್ಣನ್, ರಾಜ್ಯ ಸಮಿತಿ ಸದಸ್ಯರಾದ ಸಿ.ವಿ.ವಿನೋದ್ ಕುಮಾರ್, ಸೆಬಾಸ್ಟಿಯನ್ ಟಿ.ಜೆ., ಅನಿಲ್ ಕುಮಾರ್ ಎಂ.ವಿ., ಜಿಲ್ಲಾ ಕಾರ್ಯದರ್ಶಿ ಕೆ.ಸುರೇಂದ್ರ ಕುಮಾರ್, ಜಿಲ್ಲಾ ಖಜಾಂಚಿ ಎಚ್. ಜಿ.ವಿನೋದ್ ಕುಮಾರ್ ಉಪಸ್ಥಿತರಿದ್ದರು.
ನಿರ್ಮಾಣ ಸಾಮಗ್ರಿಗಳ ಅವ್ಯಾಹತ ಉತ್ಪಾದನೆಯನ್ನು ನಿಯಂತ್ರಿಸಲು ಸರ್ಕಾರಗಳು ಮಧ್ಯಪ್ರವೇಶಿಸಬೇಕು ಮತ್ತು ಸರ್ಕಾರ ಜಾರಿಗೆ ತಂದಿರುವ ಕಟ್ಟಡ ಕಾನೂನುಗಳನ್ನು ಅಧಿಕಾರಿಗಳು ಬದಲಾವಣೆಯಿಲ್ಲದೆ ಜಾರಿಗೆ ಮುಂದಾಗಬೇಖು ಎಂಬ ನಿರ್ಣಯ ಅಂಗೀಕರಿಸಲಾಯಿತು.
ನಿರ್ಮಾಣಸಾಮಗ್ರಿ ಬೆಲೆಯೇರಿಕೆ ತಡೆಗೆ ಸರ್ಕಾರ ತುರ್ತು ಕ್ರಮ ಕೈಗೊಳ್ಳಬೇಕು: ಲೆನ್ಸ್ಫೆಡ್ ಜಿಲ್ಲಾ ಸಮ್ಮೇಳನ ಆಗ್ರಹ
0
ನವೆಂಬರ್ 16, 2022
Tags