ಕಾಸರಗೋಡು: ಹೋಟೆಲ್ ಉದ್ಯಮಿ, ಕನ್ನಡ ಹೋರಾಟಗಾರ ರಾಮ್‍ಪ್ರಸಾದ್ ಕಾಸರಗೋಡು ಅವರ 60ನೇ ವಸಂತೋತ್ಸವದ ಅಭಿನಂದನಾ ಕಾರ್ಯಕ್ರಮ ಷಷ್ಟಾಬ್ದಿ ಸಂಭ್ರಮಾಚರಣೆ ಹಾಗೂ ಕಾಸರಗೋಡು ಯಕ್ಷೋತ್ಸವ ಸಮಾರಂಭ ನ. 30ರಂದು ಕಾಸರಗೋಡು ಶ್ರೀ ಮಲ್ಲಿಕಾರ್ಜುನ ದೇವಸ್ಥಾನ ವಠಾರದಲ್ಲಿ ಜರುಗಲಿರುವುದಾಗಿ ಅಭಿನಂದನಾ ಸಮಿತಿ ಅಧ್ಯಕ್ಷ ಕೆ.ಎನ್.ವೆಂಕಟ್ರಮಣ ಹೊಳ್ಳ ಅವರು ಕಾಸರಗೋಡಿನ ಉಡುಪಿ ಗಾರ್ಡನ್‍ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಹೋಟೆಲ್ ಉದ್ದಿಮೆಯಲ್ಲಿ ಆರು ದಶಕಕ್ಕೂ ಹೆಚ್ಚು ಕಾಲದಿಂದ ಸೇವೆಯಲ್ಲಿರುವ ಪ್ರಸಾದ್ ಸಮೂಹ ಸಂಸ್ಥೆ ಸಾಮಾಜಿಕ, ಸಾಂಸ್ಕøತಿಕ, ಭಾಷಾಪರ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದು, ಅಭಿನಂದನೆ-ಯಕ್ಷೋತ್ಸವದ ಅಂಗವಾಗಿ ವರ್ಷಪೂರ್ತಿ ಕಾರ್ಯಕ್ರಮವನ್ನೂ ಹಮ್ಮಿಕೊಂಡಿದೆ. ಕಣ್ಣು ತಪಾಸಣೆ ಉಚಿತ ಶಿಬಿರ, ಬಡಜನತೆಗೆ ಹೊಲಿಗೆ ಯಂತ್ರ ವಿತರಣೆ, ಬಡ ವಿದ್ಯಾರ್ಥಿಯನ್ನು ಗುರುತಿಸಿ ಆ ವಿದ್ಯಾರ್ಥಿಗೆ ಉನ್ನತ ಶಿಕ್ಷಣ ನೀಡುವಂತಹ ಸಾಮಾಜಿಕ ಬದ್ಧತೆಯ ಕಾರ್ಯವನ್ನೂ ನಡೆಸಲಾಗುವುದು.
ಅಂದು ಸಂಜೆ 5ಕ್ಕೆ ನಡೆಯುವ ಸಮಾರಂಭದಲ್ಲಿ ಅಭಿನಂದನಾ ಸಮಿತಿ ಅಧ್ಯಕ್ಷ ವೆಂಕಟ್ರಮಣ ಹೊಳ್ಳ ಅಧ್ಯಕ್ಷತೆ ವಹಿಸುವರು. ಶ್ರೀ ಎಡನೀರು ಮಠಾಧೀಶ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಮತ್ತು ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿ ಆಶೀರ್ವಚನ ನೀಡುವರು. ಈ ಸಂದರ್ಭ ರಾಮ್ ಪ್ರಸಾದ್ ಅವರಿಗೆ ಸಮಿತಿ ವತಿಯಿಂದ ಅಭಿನಂದನೆ ಸಲ್ಲಿಸಲಾಗುವುದು. ಅಭಿನಂದನಾ ಸಮಿತಿ ಕಾರ್ಯದರ್ಶಿ ಕೆ. ಗುರುಪ್ರಸಾದ್ ಕೋಟೆಕಣಿ ಅಭಿನಂದನಾ ಮಾತುಗಳನ್ನಾಡುವರು. ಬ್ರಹ್ಮಶ್ರೀ ಉಳಿಯತ್ತಾಯ ವಿಷ್ಣು ಆಸ್ರ, ಬ್ರಹ್ಮಶ್ರೀ ರವೀಶ ತಂತ್ರಿ ಕುಂಟಾರು, ಬ್ರಹ್ಮಶ್ರೀ ಚಕ್ರಪಾಣಿ ದೇವಪೂಜಿತ್ತಾಯ, ವೇದಮೂರ್ತಿ ವಿದ್ವಾನ್ ಕಮಲಾದೇವಿ ಆಸ್ರಣ್ಣ ದಿವ್ಯ ಉಪಸ್ಥಿತಿ ವಹಿಸುವರು.
ಕರ್ನಾಟಕ ಕನ್ನಡ ಮತ್ತು ಸಂಸ್ಕøತಿ ಖಾತೆ ಸಚಿವ ವಿ. ಸುನಿಲ್ ಕುಮಾರ್, ಸಂಸದ ರಾಜ್‍ಮೋಹನ್ ಉಣ್ಣಿತ್ತಾನ್, ಶಾಸಕ ಸಿ.ಎಚ್ ಕುಞಂಬು, ನಗರಸಭಾ ಸದಸ್ಯೆ ಶ್ರೀಲತಾ ಎಂ, ಕರ್ನಾಟಕ ಲೋಕಸೇವಾ ಆಯೋಗ ಮಾಜಿ ಕಾರ್ಯದರ್ಶಿ ಟಿ. ಶ್ಯಾಮ ಭಟ್, ಬಿಜೆಪಿ ದ.ಕ ಜಿಲ್ಲಾಧ್ಯಕ್ಷ ಸುದರ್ಶನ ಎಂ. ಮೂಡಬಿದಿರೆ, ವಕೀಲ ಪಿ. ಮುರಳೀಧರನ್, ಕೇರಳ ಹೋಟೆಲ್-ರೆಸ್ಟಾರೆಂಟ್ ಅಸೋಸಿಯೇಶನ್ ಕಾಸರಗೋಡು ಜಿಲ್ಲಾ ಕಾರ್ಯದರ್ಶಿ ನಾರಾಯಣ ಪೂಜಾರಿ, ಅರವಿಂದ ಕುಮಾರ್ ಅಲೆವೂರಾಯ, ಕೆ.ಟಿ ಸುಬ್ರಹ್ಮಣ್ಯ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು.
ಕಾರ್ಯಕ್ರಮದ ಅಂಗವಾಗಿ ಶ್ರೀ ಹನುಮಗಿರಿ ಮೇಳದವರಿಂದ 'ಮೇದಿನಿ ನಿರ್ಮಾಣ-ಮಹಿಷ ಮರ್ದಿನಿ-ಶ್ರೀನಿವಾಸ ಕಲ್ಯಾಣ'ಯಕ್ಷಗನ ಬಯಲಾಟ ಜರುಗಲಿರುವುದು ಎಂದು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಸಮಿತಿ ಪದಾಧಿಕಾರಿಗಳಾದ ಕೆ. ಭಾಸ್ಕರ ಕಾಸರಗೋಡು, ಗುರುಪ್ರಸಾದ್ ಕೋಟೆಕಣಿ, ಹೋಟೆಲ್ ಉದ್ಯಮಿ ರಾಮ್ ಪ್ರಸಾದ್ ಕಾಸರಗೋಡು, ಕುಶಲ ಕುಮಾರ್ ಉಪಸ್ಥಿತರಿದ್ದರು.
ನಾಳೆ ಕಾಸರಗೋಡು ಯಕ್ಷೋತ್ಸವ, ಅಭಿನಂದನಾ ಕಾರ್ಯಕ್ರಮ 'ಷಷ್ಟ್ಯಬ್ದಿ ಸಂಭ್ರಮಾಚರಣೆ'
0
ನವೆಂಬರ್ 28, 2022