ಕುಂಬಳೆ: ಸಮಸ್ತದ ಅಧ್ಯಕ್ಷರಾಗಿದ್ದ ತಾಜುಲ್ ಉಲಮಾ ಸೈಯದ್ ಅಬ್ದುಲ್ ರಹ್ಮಾನ್ ಅಲ್ ಬುಖಾರಿ ಹಾಗೂ ನೂರುಲ್ ಉಲಮಾ ಎಂ.ಎ.ಅಬ್ದುಲ್ ಖಾದಿರ್ ಮುಸ್ಲಿಯಾರ್ ಸ್ಮರಣಾರ್ಥ ಕೇರಳ ಮುಸ್ಲಿಂ ಜಮಾಅತ್, ಎಸ್ ವೈಎಸ್ ಹಾಗೂ ಎಸ್ ಎಸ್ ಎಫ್ ಉಳುವಾರ್ ಘಟಕ ಸಮಿತಿಗಳ ಸಂಯುಕ್ತಾಶ್ರಯದಲ್ಲಿ ನ.18, 19, 20 ರಂದು ವಾರ್ಷಿಕ ಮತಪ್ರವಚನ ಉಳುವಾರ್ ನಲ್ಲಿ ನಡೆಯಲಿದೆ ಎಂದು ಸಂಬಂಧಪಟ್ಟವರು ಕುಂಬಳೆಯಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಕಾರ್ಯಕ್ರಮದ ಅಂಗವಾಗಿ ಧ್ವಜಾರೋಹಣ, ಮಹ್ಲರತುಲ್ ಬದ್ರಿಯ್ಯ, ಉದ್ಘಾಟನಾ ಸಭೆ, ಧಾರ್ಮಿಕ ಪ್ರವಚನ, ಸಂಸ್ಮರಣಾ ಸಭೆ, ಮಾದಕ ವಸ್ತು ವಿರೋಧಿ ಪ್ರತಿಜ್ಞೆ, ಬುರ್ದಾ ಮತ್ತು ನಹ್ತ್ ಗಾಯನ, ಸಮಾರೋಪ ಸಭೆ, ಆಧ್ಯಾತ್ಮಿಕ ಪ್ರವಚನ, ಪ್ರಾರ್ಥನಾ ಮಜ್ಲಿಸ್, ಅನ್ನದಾನ ಇತ್ಯಾದಿ ಕಾರ್ಯಕ್ರಮಗಳು ನಡೆಯಲಿವೆ.
ಕಾರ್ಯಕ್ರಮದ ಅಂಗವಾಗಿ ಇಂದು(18) ಸಂಜೆ 4 ಕ್ಕೆ ಎಸ್‍ವೈಎಸ್ ಅಬುಧಾಬಿ-ಕಾಸರಗೋಡು ಜಿಲ್ಲಾ ಕಾರ್ಯದರ್ಶಿ ಸಿದ್ದೀಕ್ ಹಾಜಿ ಧ್ವಜಾರೋಹಣ ನೆರವೇರಿಸುವರು. ಬಳಿಕ ಮಹ್ಲೆರತುಲ್ ಬದ್ರಿಯ್ಯ ನಡೆಯಲಿದೆ. ರಾತ್ರಿ 8 ಕ್ಕೆ ಎಸ್‍ಎಸ್‍ಎಫ್ ರಾಜ್ಯ ಕಾರ್ಯದರ್ಶಿ ಸಯ್ಯದ್ ಮುನೀರುಲ್ ಅಹ್ದಲ್ ತಂಙಳ್ ಅವರು ಉದ್ಘಾಟಿಸುವರು. ಸೈಯದ್ ಅಹ್ಮದ್ ಮುಕ್ತಾರ್ ತಂಙಳ್ ಕುಂಬೋಲ್ ಪ್ರಾರ್ಥನೆಯನ್ನು ನೆರವೇರಿಸುವರು.ಅಬ್ದುಲ್ ಹಮೀದ್ ಫೈಝಿ ಕಿಲ್ಲೂರು ಮುಖ್ಯ ಭಾಷಣ ಮಾಡುವರು.20 ರಂದು ರಾತ್ರಿ ನಡೆಯುವ ಸಂಸ್ಮರಣಾ ಆಧ್ಯಾತ್ಮಿಕ ಸಭೆಯೊಂದಿಗೆ ಕಾರ್ಯಕ್ರಮವು ಮುಕ್ತಾಯವಾಗಲಿದೆ. ಮಗ್ರಿಬ್ ನಮಾಝಿನ ನಂತರ ನಡೆಯುವ ಪ್ರಾರ್ಥನಾ ಸಭೆಯಲ್ಲಿ ಸೈಯದ್ ಫಝಲ್ ಕೋಯಮ್ಮ ತಂಙಳ್ ಅಲ್ ಬುಖಾರಿ ಕೂರಾ ನೇತೃತ್ವ ವಹಿಸುವರು. ನಂತರ ಕೇರಳ ಮುಸ್ಲಿಂ ಜಮಾಅತ್ ವತಿಯಿಂದ ಸಮಾರೋಪ ಸಭೆ ನಡೆಯಲಿದೆ.ಜಿಲ್ಲಾ ಜ.ಕಾರ್ಯದರ್ಶಿ ಪಾಲನಕೋಟ್ ಅಬ್ದುಲ್ ಕದಿರ್ ಮದನಿ ಉದ್ಘಾಟಿಸುವರು.ಮೂಸಾ ಸಖಾಫಿ ಕಳತ್ತೂರು ಸಂಸ್ಮರಣಾ ಉಪನ್ಯಾಸ ನೀಡುವರು.ಸೈಯದ್ ಅಟ್ಟಕೋಯ ತಂಙಳ್ ಮಾಣಿಮೂಲೆ, ಸೈಯದ್ ಅಟ್ಟಕೋಯ ತಂಙಳ್ ಮಾಣಿಮೂಲೆ, ಸೈಯದ್ ಶಿಹಾಬುದ್ಹೀನ್ ತಂಙಳ್ ಕುಂಬೋಳ್, ವಾರ್ಡ್ ಸದಸ್ಯ ಯೂಸುಫ್ ಉಳುವಾರ್, ಸುಲೈಮಾನ್ ಕರಿವೆಳ್ಳೂರು, ವೈ.ಎಂ.ಅಬ್ದುಲ್ ರಹ್ಮಾನ್ ಅಹ್ಸನಿ, ಅಬ್ದುಲ್ ಕದಿರ್ ಸಖಾಫಿ, ರಾಜ್ಯ ಮುಖಂಡರಾದ ಆರ್.ಅಬ್ದುಲ್ ಖಾದಿರ್ ಸಖಾಫಿ ಮೊಗ್ರಾಲ್, ಪಿ.ಬಿ.ಬಶೀರ್ ಪುಳ್ಕೂರು, ಮುಹಮ್ಮದ್ ಸಖಾಫಿ ಪಾತೂರು, ಅಬ್ದುಲ್ ಕರೀಂ ಮಾಸ್ತರ್ ದರ್ಬಾರ್ ಕಟ್ಟೆ, ಶಾಫಿ ಸಅದಿ ಶಿರಿಯಾ ಕುನ್ನಿಲ್, ಇಬ್ರಾಹಿಂ ಸಖಾಫಿ ಕರ್ನೂರು, ಅಶ್ರಫ್ ಸಅದಿ ಆರಿಕ್ಕಾಡಿ, ಮುಹಮ್ಮದಲಿ ಅಹ್ಸನಿ, ಹನೀಫ್ ಸಅದಿ ಕುಂಬೋಳ್ ಉಪಸ್ಥಿತರಿರುವರು. ಸಯ್ಯಿದ್ ಹಸನುಲ್ ಅಹ್ದಲ್ ತಂಙಳ್ ಸಮಾರೋಪ ಪ್ರಾರ್ಥನೆ ನಡೆಸುವರು.
ಪತ್ರಿಕಾಗೋಷ್ಠಿಯಲ್ಲಿ ಎಸ್.ವೈಎಸ್ ಜಿಲ್ಲಾ ಸಮಿತಿ ಪ್ರತಿನಿಧಿ ಸಿದ್ದೀಕ್ ಹಾಜಿ ಯು.ಕೆ, ಸ್ವಾಗತ ಸಮಿತಿ ಅಧ್ಯಕ್ಷ ಅಶ್ರಫ್ ಸಖಾಫಿ ಉಳುವಾರ್, ಸಂಯೋಜಕ ಮುಹಮ್ಮದ್ ಕುಂಞÂ ಉಳುವಾರ್, ಖಜಾಂಜಿ ಯೂಸುಫ್ ಯುಕೆ, ಮುಹಮ್ಮದ್ ಎಸಿ, ಕೇರಳ ಮುಸ್ಲಿಂ ಜಮಾತ್ ಘಟಕ ಕಾರ್ಯದರ್ಶಿ ಇಬ್ರಾಹಿಂ ಕಡಪ್ಪುರ ಉಪಸ್ಥಿತರಿದ್ದರು.
ಇಂದಿನಿಂದ ಉಳುವಾರಲ್ಲಿ ವಾರ್ಷಿಕ ಪ್ರವಚನ
0
ನವೆಂಬರ್ 17, 2022
Tags