ಕಾಸರಗೋಡು: ಕಾಸರಗೋಡು-ವಿದ್ಯಾನಗರ-ಮಾನ್ಯ- ನೀರ್ಚಾಲು -ಮುಂಡ್ಯತ್ತಡ್ಕ ರೂಟಿನಲ್ಲಿ ಸುಮಾರು ಎಂಟು ಬಸ್ಸುಗಳು ಸಂಚಾರ ನಡೆಸುತ್ತಿದೆ. ಮಾನ್ಯ ಸಮೀಪ ದೇವರ ಕೆರೆಯಿಂದ ನೀರ್ಚಾಲು ತನಕ ರಸ್ತೆ ದುರಸ್ತಿಯ ಕಾರಣ ಕಳೆದ ಎರಡು ದಿನಗಳಿಂದ ಈ ರೂಟಿನಲ್ಲಿ ಸಂಚರಿಸುತ್ತಿದ್ದ ಬಸ್ಸುಗಳು ಏಕಾಏಕಿ ಸಂಚಾರ ಮೊಟಕುಗೊಳಿಸಿದ್ದು, ಕೊಲ್ಲಂಗಾನದಿಂದ ಕೊರತ್ತಿ ಗುಳಿ ಕಡಂಬಳ ದಾರಿಯಾಗಿ ನೀರ್ಚಾಲಿಗೆ ಸಂಚರಿಸುತ್ತಿದೆ.
ಇದರಿಂದಾಗಿ ಮಾನ್ಯ ಆಸುಪಾಸಿನ ಜನತೆಗೆ ಮುಖ್ಯವಾಗಿ ವಿದ್ಯಾರ್ಥಿಗಳಿಗೆ ತೊಂದರೆ ಉಂಟಾಗಿದೆ. ಅತ್ತ ಕಾಸರಗೋಡಿಗೂ, ಇತ್ತ ನೀರ್ಚಾಲು ಭಾಗಕ್ಕೂ ಸಂಚರಿಸಲಾಗದೆ ಅತಂತ್ರತೆ ಎದುರಾಗಿದೆ. ಈ ಹಿನ್ನೆಲೆಯಲ್ಲಿ ಈ ರೂಟಿನ ಬಸ್ಸುಗಳು ಮಾನ್ಯ ಜಂಕ್ಷನ್ ಸಂಪರ್ಕಿಸಿ ಕೊರತ್ತುಗುಳಿ ಕಡಂಬಳ ದಾರಿಯಾಗಿ ನೀರ್ಚಾಲಿಗೆ ಸಂಚರಿಸಬೇಕೆಂಬ ಮನವಿಯನ್ನು ಕಾಸರಗೋಡು ಆರ್ ಟಿ ಓ ಹಾಗೂ ಜಿಲ್ಲಾ ಬಸ್ ಓನರ್ಸ್ ಅಸೋಸಿಯೇಷನ್ ಅಧ್ಯಕ್ಷರಿಗೆ ಸಾರ್ವಜನಿಕವಾಗಿ ಮಂಗಳವಾರ ಸಂಜೆ ಸಲ್ಲಿಸಲಾಯಿತು. ನಿಯೋಗದಲ್ಲಿ ಬದಿಯಡ್ಕ ಗ್ರಾಮ ಪಂಚಾಯತಿ ಜನಪ್ರತಿನಿಧಿ ಶಾಮಪ್ರಸಾದ್ ಮಾನ್ಯ, ಸಾಮಾಜಿಕ ನೇತಾರರಾದ ಮಹೇಶ್ ವ ವಳಕುಂಜ, ಖಾದರ್ ಮಾನ್ಯ, ರಾಧಾಕೃಷ್ಣ ರೈ ಕಾರ್ಮರು, ಸುಂದರ ಶೆಟ್ಟಿ ಕೊಲ್ಲಂಗಾನ ಮೊದಲಾದವರಿದ್ದರು.
ರಸ್ತೆ ಕಾಮಗಾರಿ: ಹಠಾತ್ ಸಂಚಾರ ನಿಲ್ಲಿಸಿದ ಬಸ್ ಗಳು: ಅತಂತ್ರತೆಯಲ್ಲಿ ಜನರು: ಅಧಿಕೃತರಿಗೆ ಮನವಿ ಸಮರ್ಪಣೆ
0
ನವೆಂಬರ್ 02, 2022
Tags