ಕಾಸರಗೋಡು: ಪಡನ್ನ ಪಂಚಾಯಿತಿಯ ತೆಕ್ಕೇಕೋಡ್‍ನಲ್ಲಿ ವರ್ಷಗಳಿಂದ ಧಾರ್ಮಿಕ ಚಟುವಟಿಕೆಗಳಲ್ಲಿ ನಿರತವಾಗಿರುವ ಶ್ರೀ ಮುತ್ತಪ್ಪನ್ ಮಡಪ್ಪುರವನ್ನು ಕೆಡಹುವ ಪ್ರಯತ್ನವನ್ನು ವಿರೋಧಿಸಿ ಹಿಂದೂ ಐಕ್ಯವೇದಿ ನೇತೃತ್ವದಲ್ಲಿ ಕಾಸರಗೋಡು ಜಿಲ್ಲಾಧಿಕಾರಿ ಕಚೇರಿ ಮುಂದೆ ಶುಕ್ರವಾರ ಧರಣಿ ನಡೆಯಿತು.
ಚಿನ್ಮಯ ಮಿಷನ್ ಕೇರಳ ಮುಖ್ಯಸ್ಥ, ಸ್ವಾಮಿ ವಿವಿಕ್ತಾನಂದ ಸರಸ್ವತೀ ಸಮಾರಂಭ ಉದ್ಘಾಟಿಸಿ ಆಶೀರ್ವಚನ ನೀಡಿದರು. ಐಕ್ಯವೇದಿ ಜಿಲ್ಲಾಧ್ಯಕ್ಷ ಗೋವಿಂದನ್ ಮಾಸ್ತರ್ ಕೊಟ್ಟೋಡಿ ಅಧ್ಯಕ್ಷತೆ ವಹಿಸಿದ್ದರು. ಬ್ರಹ್ಮಶ್ರೀ ಉಳಿಯತ್ತಾಯ ವಿಷ್ಣು ಆಸ್ರ, ಹಿಂದೂ ಐಕ್ಯವೇದಿ ರಾಜ್ಯ ಸಮಿತಿ ಕಾರ್ಯದರ್ಶಿ ಪಿ.ವಿ ಮುರಳೀಧರನ್, ಜಿಲ್ಲಾ ಸಮಿತಿ ಪ್ರಧಾನ ಕಾರ್ಯದರ್ಶಿ ಎಂ.ಪಿ ಶಾಜಿ, ಕಾರ್ಯಾಧ್ಯಕ್ಷ ಗೋಪಾಲಕೃಷ್ಣನ್ ತಚ್ಚಂಗಾಡ್, ಅಜಯ್ ಕುಮಾರ್ ನೆಲ್ಲಿಕ್ಕಾಡ್, ಎಚ್. ಲಕ್ಷ್ಮಣ ಭಟ್, ಬಾಲಕೃಷ್ಣನ್, ಶೈಜಾ ಸಾಯಿ, ಮುರಳಿ ಗಟ್ಟಿ, ವಕೀಲ ಎಂ. ರಮೇಶ್ ಯಾದವ್, ಸುರೇಶ್ ಮಡಪ್ಪುರ, ಗಣೇಶ್ ಪಾರೆಕಟ್ಟ, ಪದ್ಮರಾಜ್ ಸುಕುಮಾರ್ ಕುದ್ರೆಪ್ಪಾಡಿ, ರವೀಂದ್ರ ರಐ, ಜಗದೀಶ ಆಚಾರ್ಯ ಕಂಬಾರ್, ಪ್ರಭಾಕರ ಉಳಿಯ, ಪ್ರಭಾಕರನ್ ಪಂಚಮಿ ಉಪಸ್ಥೀತರಿದ್ದರು.
ಹಿಂದೂ ಸಮಾಜದ ವಿವಿಧ ಸಮುದಾಯ ಸಂಘಟಕರು, ಸ್ಥಾನಿಕರು, ಸನ್ಯಾಸಿಗಳು, ಕ್ಷೇತ್ರ ಆಚಾರಕರ್ಮಿಗಳು ಮತ್ತು ಇತರರು ಭಾಗವಹಿಸಿದ್ದರು. ಸರ್ಕಾರದ ಎಲ್ಲ ಮಾನದಂಡ ಪಾಲಿಸಿಕೊಂಡು 2020ರಲ್ಲಿ ಶ್ರೀ ಮುತ್ತಪ್ಪನ್ ಮಡಪ್ಪುರಂ ನಿರ್ಮಿಸಲಾಗಿದ್ದು, ಅಂದು ಎಲ್ಲ ಸಮಾರಂಭಗಳಲ್ಲಿ ಮುಂಚೂಣಿಯಲ್ಲಿದ್ದ ವ್ಯಕ್ತಿಯೊಬ್ಬ ಕ್ಷೇತ್ರದ ಬಗ್ಗೆ ಅವಹೇಳನಕಾರಿಯಾಗಿ ವರ್ತಿಸುತ್ತಿರುವುದಲ್ಲದೆ, ರಾಜಕೀಯ ಒತ್ತಡದ ಮೂಲಕ ಮುತ್ತಪ್ಪನ್ ಮಡಪ್ಪುರವನ್ನು ಒಡೆದು ತೆಗೆಯುವ ಪ್ರಯತ್ನ ವಿರೋಧಿಸಿ ಧರಣಿ ನಡೆಸಲಾಗಿದೆ.
ಪಡನ್ನ-ಶ್ರೀ ಮುತ್ತಪ್ಪನ್ ಕ್ಷೇತ್ರ ಒಡೆದು ತೆಗೆಯುವ ಯತ್ನದ ವಿರುದ್ಧ ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ
0
ನವೆಂಬರ್ 11, 2022
Tags