ಕೊಲ್ಲಂ: ಸಂಬೋಧ ಫೌಂಡೇಶನ್ ಕೇರಳದ ಪ್ರಧಾನ ಕಛೇರಿ ಕೊಲ್ಲಂ ಪೆರುಮಾನ್ ಸಂಬೋಧಾರಣ್ಯದಲ್ಲಿ 'ಯತಿ ಪೂಜೆ' ಸಂನ್ಯಾಸಿ ಸಂಗಮ ನಡೆಯಿತು.
ನಿನ್ನೆ ಬೆಳಗ್ಗೆ ನಡೆದ ಯತಿಪೂಜೆಯಲ್ಲಿ ಕೇರಳದ ಒಳ ಮತ್ತು ಹೊರ ಭಾಗದ ಹಲವು ಮಠಾಧೀಶರು ಪಾಲ್ಗೊಂಡಿದ್ದರು. ಸ್ವಾಮಿ ಸ್ವಪ್ರಭಾನಂದ ಮಹಾರಾಜ್, ಪ್ರಜ್ಞಾನಂದ ತೀರ್ಥ, ಆತ್ಮಸ್ವರೂಪಾನಂದ, ಚಿದಾನಂದಪುರಿ ಮತ್ತು ಸತ್ಸ್ವರೂಪಾನಂದ ಆಶೀರ್ವಚನ ನೀಡಿದರು.
ಯತಿ ಪೂಜೆಯ ನಿಮಿತ್ತ ಆಯೋಜಿಸಿದ್ದ ಸಭೆಯಲ್ಲಿ ಸಂಬೋಧ ಫೌಂಡೇಶನ್ ಕೇರಳದ ಪ್ರಧಾನ ಆಚಾರ್ಯ ಸ್ವಾಮಿ ಅಧ್ಯಾತ್ಮಾನಂದ ಸರಸ್ವತಿ ಪ್ರಾಸ್ತಾವಿಕ ಉಪನ್ಯಾಸ ನೀಡಿದರು. ಕಾರ್ಯದರ್ಶಿ ಅಡ್ವ. ಕಲ್ಲೂರು ಕೈಲಾಸ್ ನಾಥ್, ಅಧ್ಯಕ್ಷ ಡಾ. ಕೆ. ಉಣ್ಣಿಕೃಷ್ಣ ಪಿಳ್ಳೆ ಮಾತನಾಡಿದರು. ಡಾ. ಅನು ಸುದೇವನ್, ಶಾಂತಿ ಶಂಕರ್ ಮತ್ತು ಸಿಂಧು ಸತೀಶ್ ಕೀರ್ತನೆ ನಡೆಸಿಕೊಟ್ಟರು. ಯತಿಗಳನ್ನು ಪೂರ್ಣಕುಂಭಗಳೊಂದಿಗೆ ಸ್ವಾಗತಿಸಿ, ಯತಿಪೂಜೆ ನಡೆಸಿ, ಗೌರವಾಭಿನಂದನೆಗಳನ್ನು ಸಲ್ಲಿಸಲಾಯಿತು.
ವಿ.ಪಾರ್ವತಿ, ಸೀತಾಲಕ್ಷ್ಮಿ, ರಮ್ಯಾ ರಾಧಾಕೃಷ್ಣನ್, ಅಶ್ವಂತ್, ಹೇಮಂತ್, ಉಮಾದತ್ತ, ಆನಂದವಿನಾಯಕ್, ಶ್ರೀಹರಿ, ಎ. ಪ್ರಶಾಂತ್, ರಘು ನಾರಾಯಣನ್ ಮತ್ತಿತರರು ನೇತೃತ್ವ ವಹಿಸಿದ್ದರು.
ಸಂಬೋಧಾರಣ್ಯದಲ್ಲಿ ಸಂನ್ಯಾಸಿ ಸಂಗಮ
0
ನವೆಂಬರ್ 14, 2022