ಕಾಸರಗೋಡು: ಆಲಪ್ಪುಳ ಇಡಾತ್ತಾವ ಪೆÇಲೀಸ್ ಠಾಣೆಯ ಸಿವಿಲ್ ಪೊಲೀಸ್ ಅಧಿಕಾರಿ ಅಲೆಕ್ಸ್ ವರ್ಕಿ ಮತ್ತು ಪುನ್ನಪ್ರ ಪೊಲೀಸ್ ಠಾಣೆಯ ಎಂ. ಕೆ. ವಿನಿಲ್ ಮಾದಕ ವ್ಯಸನ ವಿರೋಧಿ ಜಾಗೃತಿಯ ಅಂಗವಾಗಿ ಸೈಕಲ್ ರ್ಯಾಲಿ ಶನಿವಾರ ಕಾರಸಗೋಡಿನಿಂದ ಆರಂಭಗೊಂಡಿತು. ಕೇರಳ ಪೊಲೀಸ್ ವತಿಯಿಂದ 'ಯೋಧ' ಹೆಸರಿನಲ್ಲಿ ನಡೆಸಿಕೊಂಡು ಬರುತ್ತಿರುವ ಮಾದಕ ಮುಕ್ತ ಕೇರಳ ಸಂದೇಶದೊಂದಿಗೆ ರ್ಯಾಲಿ ಆಯೋಜಿಸಲಾಗಿದೆ.
ನಾರ್ಕೋಟಿಕ್ ಸೆಲ್‍ನ ಡಿವೈಎಸ್‍ಪಿ ಎಂ. ಎ. ಮ್ಯಾಥ್ಯೂಸ್ ಧ್ವಜ ತೊರಿಸುವ ಮೂಲಕ ರ್ಯಾಲಿಗೆ ಚಾಲನೆ ನೀಡಿದರು. ಕಾರ್ಯಕ್ರಮದಲ್ಲಿ ಕೆ. ಪಿ ಎ. ರಾಜ್ಯ ಜಂಟಿ ಕಾರ್ಯದರ್ಶಿ ಕೆ. ಪಿ. ಓ. ಎ. ಜಿಲ್ಲಾ ಕಾರ್ಯದರ್ಶಿ ಎಂ. ಸದಾಶಿವನ್, ಕೆ. ಪಿ. ಎ. ಜಿಲ್ಲಾ ಕಾರ್ಯದರ್ಶಿ ಎ. ಪಿ. ಸುರೇಶ್, ಬಿ. ರಾಜ್ ಕುಮಾರ್, ಜನಮೈತ್ರಿ ಪೆÇಲೀಸ್ ಕೆ. ಸಂತೋಷ್ ವಿಪಿನ್, ಲಿಶಾ ಉಪಸ್ಥಿತರಿದ್ದರು.
ಮಾದಕ ಮುಕ್ತ ಕೇರಳ: ಸೈಕಲ್ ರ್ಯಾಲಿಗೆ ಕಾಸರಗೋಡಿನಿಂದ ಚಾಲನೆ
0
ನವೆಂಬರ್ 06, 2022
Tags