ಕಾಸರಗೋಡು: ಮಾದಕ ವ್ಯಸನದ ವಿರುದ್ಧ ಹೋರಾಡಲು ಸಮಾಜ ಒಗ್ಗೂಡಬೇಕಾದ ಅನಿವಾರ್ಯತೆ ಎದುರಾಗಿದೆ ಎಂದು ಬಂದರು-ಪ್ರಾಚ್ಯವಸ್ತು ಇಲಾಖೆ ಸಚಿವ ಅಹ್ಮದ್ ದೇವರಕೋವಿಲ್ ತಿಳಿಸಿದ್ದಾರೆ.
ಅವರು ಜಿಲ್ಲೆಯಲ್ಲಿ ಕಳೆದ ಒಂದು ತಿಂಗಳ ಅವಧಿಯ ಕಾಲ ನಡೆದುಬರುತ್ತಿದ್ದ ಮಾದಕ ವ್ಯಸನ ಮುಕ್ತ ಕೇರಳ ಜಿಲ್ಲಾ ಮಟ್ಟದ ಸಮಾರೋಪ ಸಮಾರಂಭವನ್ನು ಕಾಸರಗೋಡು ನಾಯಮರ್‍ಮೂಲೆ ತನ್‍ಬಿಹುಲ್ ಇಸ್ಲಾಂ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಉದ್ಘಾಟಿಸಿ ಮಾತನಾಡಿದರು.
ಮಾದಕ ವ್ಯಸನದ ವಿರುದ್ಧ ಸರ್ಕಾರವು ವ್ಯಾಪಕ ಮತ್ತು ಸಮಗ್ರ ಕ್ರಿಯಾ ಯೋಜನೆ ತಯಾರಿಸಿ ಜಾರಿಗೊಳಿಸುತ್ತಿದೆ. ಮಾದಕ ದ್ರವ್ಯ ವಿರೋಧಿ ಚಟುವಟಿಕೆಗಳನ್ನು ಆಯೋಜಿಸಲು ಈಗಾಗಲೇ ರಾಜ್ಯ-ಜಿಲ್ಲಾ-ವಾರ್ಡ್ ಮಟ್ಟದ ಸಮಿತಿಗಳನ್ನು ರಚಿಸಲಾಗಿದೆ. ಮಾದಕ ದ್ರವ್ಯ ವಿರೋಧಿ ಚಟುವಟಿಕೆ ಹಾಗೂ ಜಾಗೃತಿಯನ್ನು ನಿರಂತರ ಪ್ರಕ್ರಿಯೆಯನ್ನಾಘಿಸಬೇಕು ಎಂದು ತಿಳಿಸಿದರು. ಶಾಸಕ ಎನ್.ಎ.ನೆಲ್ಲಿಕುನ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಬೇಬಿ ಬಾಲಕೃಷ್ಣನ್, ಎಡಿಎಂ ಎ.ಕೆ.ರಾಮೇಂದ್ರನ್, ಎಎಸ್ಪಿ ಪಿ.ಕೆ.ರಾಜು, ಸ್ಥಳೀಯಾಡಳಿತ ಇಲಾಖೆಯ ಸಹಾಯಕ ನಿರ್ದೇಶಕ ಕೆ.ವಿ.ಹರಿದಾಸ್, ಪ್ರಭಾರ ಡಿಡಿಇ ಸುರೇಂದ್ರನ್ ಸ್ವರಲಯ, ಕಾಸರಗೋಡು ಡಿ.ಇ.ಓ ಎನ್.ನಂದಿಕೇಶನ್, ಟಿಐಎಚ್‍ಎಸ್ ಎಸ್.ಪ್ರಾಂಶುಪಾಲ ಟಿ.ಪಿ.ಮುಹಮ್ಮದಾಲಿ, ಶಾಲಾ ಮುಖ್ಯ ಶಿಕ್ಷಕ ಪಿ.ನಾರಾಯಣನ್, ವ್ಯವಸ್ಥಾಪಕ ಎಂ.ಅಬ್ದುಲ್ಲ ಹಾಜಿ, ಪಿಟಿಎ ಅಧ್ಯಕ್ಷ ಮೊಹಮ್ಮದ್ ಅಸ್ಲಂ ಉಪಸ್ಥಿತರಿದ್ದರು. ಜಿಲ್ಲಾಧಿಕಾರಿ ಭಂಡಾರಿ ಸ್ವಾಗತ್ ರಣವೀರಚಂದ್ ಸ್ವಾಗತಿಸಿದರು. ಸಹಾಯಕ ಅಬಕಾರಿ ಆಯುಕ್ತ ಎಸ್.ಕೃಷ್ಣಕುಮಾರ್ ವಂದಿಸಿದರು.
ಮಾದಕ ದ್ರವ್ಯ ವಿರುದ್ಧ ಸಂಘಟಿತ ಹೋರಾಟ ಅನಿವಾರ್ಯ: ಸಚಿವ ಅಹಮ್ಮದ್ ದೇವರ್‍ಕೋವಿಲ್
0
ನವೆಂಬರ್ 02, 2022
Tags