ಕಾಸರಗೋಡು: ಸಂಸದರ ನಿಧಿ ಬಳಸಿ ಪುತ್ತಿಗೆ ಮುಹಿಮ್ಮತ್‍ನ ಮುಖ್ಯ ದ್ವಾರದಲ್ಲಿ ಅಳವಡಿಸಲಾದ ಹೈ ಮಾಸ್ಟ್ ಬೆಳಕಿನ ವ್ಯವಸ್ಥೆಯನ್ನು ಸಂಸದ ರಾಜಮೋಹನ್ ಉಣ್ಣಿತ್ತಾನ್ ಉದ್ಘಾಟಿಸಿದರು. ಪುತ್ತಿಗೆ ಗ್ರಾಮ ಪಂಚಾಯತ್ ಅಧ್ಯಕ್ಷ ಡಿ. ಸುಬ್ಬಣ್ಣ ಆಳ್ವ ಅಧ್ಯಕ್ಷತೆ ವಹಿಸಿದ್ದರು. ಮುಹಿಮ್ಮತ್ ಕಾರ್ಯದರ್ಶಿ ಬಿ.ಎಸ್.ಅಬ್ದುಲ್ಲಕುಞÂ ಫೈಝಿ, ಹಾಜಿ ಅಮೀರಲಿ ಚೂರಿ, ಸೈಯದಲ್ ಹಬೀಬುಲ್ ತಙಳ್, ಸೈಯದ್ ಮುನೀರುಲ್ ಅಹ್ದಲ್ ತಙಳ್, ಸೈಯದ್ ಹಮೀದಿ, ಅನ್ವರ್ ಅಹ್ದಲ್ ತಙಳ್, ವೈ.ಎಂ.ಅಬ್ದುಲ್ ರಹ್ಮಾನ್ ಅಹ್ಸನಿ, ಅಬ್ದುಲ್ ಕದಿರ ಸಖಾಫಿ ಮೊಗ್ರಾಲ್, ಉಮರ್ ಸಖಾಫಿ ಕರ್ನೂರು, ಮೂಸಾ ಸಖಾಫಿ ಕಳತ್ತೂರು, ಮನಾಫ್ ನುಳ್ಳಿಪ್ಪಾಡಿ, ವಾರ್ಡ್ ಸದಸ್ಯ ಪಾಲಾಕ್ಷ ರೈ, ನೋಯೆಲ್ ಟೋಮಿನ್ ಜೋಸೆಫ್, ಶನೀದ್ ಕಯ್ಯಂಕೂಡೆಲ್, ಬಿ.ಕೆ.ಮುಹಮ್ಮದ್‍ಕುಞÂ, ಅಬ್ದುಲ್ಲ ಕಂಡತ್ತಿಲ್, ಮುಹಮ್ಮದ್‍ಕುಞÂ, ಜುನೈದ್ ಉರ್ಮಿ, ಮಹಮ್ಮದ್ ಗುಣಾಜೆ ಉಪಸ್ಥಿತರಿದ್ದರು.
ಪುತ್ತಿಗೆ ಮುಹಿಮ್ಮತ್‍ನಲ್ಲಿ ಹೈಮಾಸ್ಟ್ ಬೆಳಕಿನ ವ್ಯವಸ್ಥೆ ಉದ್ಘಾಟನೆ
0
ನವೆಂಬರ್ 11, 2022