ಕಾಸರಗೋಡು: ಕಾಡಾನೆಗಳ ದಾಳಿ ತಡೆಯುವ ನಿಟ್ಟಿನಲ್ಲಿ ಕಾರಡ್ಕ ಬ್ಲಾಕ್ ಪಂಚಾಯಿತಿ ವತಿಯಿಂದ ನಿರ್ಮಾಣವಾಗುತ್ತಿರುವ ಸೋಲಾರ್ ತೂಗುಬೇಲಿಯ ಸಾಧ್ಯತೆಗಳ ಬಗ್ಗೆ ಪರಾಮರ್ಶಿಸಲು ಕಂಟ್ರೋಲರ್ ಮತ್ತು ಆಡಿಟರ್ ಜನರಲ್ (ಸಿಎಜಿ ಕಛೇರಿ) ಪ್ರತಿನಿಧಿ ಹಿರಿಯ ಲೆಕ್ಕ ಪರಿಶೋಧನಾ ಅಧಿಕಾರಿ ವಿನೋಜ್ ಸಿ.ವರ್ಗೀಸ್ ಭೇಟಿ ನೀಡಿದರು ಅರ್ಥಮಾಡಿಕೊಳ್ಳಲು ಬಂದರು. ರಾಜ್ಯದಲ್ಲಿ ವನ್ಯಜೀವಿಗಳ ಉಪಟಳ ಹೆಚ್ಚಿರುವ ಪ್ರದೇಶದಲ್ಲಿ ಇಂತಹ ಯೋಜನೆ ಜಾರಿ ಸಾಧ್ಯವೇ ಎಂಬ ಬಗ್ಗೆ ತಂಡ ಪರಾಮರ್ಶೆ ನಡೆಸಿತು. ಸೋಲಾರ್ ತೂಗು ಬೇಲಿ ಮಾದರಿ ಯೋಜನೆಯಾಗಿದ್ದು, ವನ್ಯಪ್ರಾಣಿಗಳಿಂದ ಜನರಿಗಾಗುತ್ತಿರುವ ಬೆದರಿಕೆ ಹಾಗೂ ಕೃಷಿ ಬೆಳೆ ನಾಶ ತಡೆಯಲು ಇದರಿಂದ ಸಾಧ್ಯವಾಗಲಿದೆ ಎಂದು ತಿಳಿಸಿದರು. ಬ್ಲಾಕ್ ಪಂಚಾಯಿತಿ ಅಧ್ಯಕ್ಷ ಸಿಜಿ ಮ್ಯಾಥ್ಯೂ, ಉಪ ಅಧಿಕಾರಿ ಎಂ.ಪಿ.ರಾಜು ಯೋಜನೆ ಬಗ್ಗೆ ಮಾಃಇತಿ ನೀಢಿದರು. ಸ್ಥಳೀಯ ಸಂಸ್ಥೆಗಳ ಸಾಮೂಹಿಕ ಕಾರ್ಯದಲ್ಲಿ ಇಂತಹ ಯೋಜನೆ ಜಾರಿಯಾಗುತ್ತಿರುವುದು ರಾಜ್ಯದಲ್ಲಿ ಇದೇ ಮೊದಲಾಗಿದ್ದು, 29 ಕಿ.ಮೀ ಉದ್ದದ ತೂಗು ಬೇಲಿಗೆ 3.33 ಕೋಟಿ ರೂ. ಯೋಜನ ವೆಚ್ಚವಾಗಿದ್ದು, ಮೊದಲ ಹಂತದಲ್ಲಿ ವೆಳ್ಳಕಾನಂನಿಂದ ಚಾಮಕೊಚ್ಚಿವರೆಗೆ ಎಂಟು ಮೀಟರ್ ಉದ್ದದ ಸೋಲಾರ್ ತೂಗುಬೇಲಿ ನಿರ್ಮಿಸಲಾಗುವುದು. ಕಮಗಾರಿಯನ್ನು ಒಂದು ವಾರದೊಳಗೆ ಪೂರ್ಣಗೊಳಿಸಲಾಗುವುದು. ಬೆಳ್ಳಿಪ್ಪಾಡಿ ಪರಪ್ಪ ಪ್ರದೇಶಗಳಲ್ಲಿ ಎರಡನೇ ಹಂತದ ತೂಗು ಬೇಲಿ ಕಾಮಗಾರಿ ಶೀಘ್ರ ಆರಂಭಿಸಲಾಗುವುದು ಎಂದು ಮಾಹಿತಿ ನೀಡಿದರು.
ವನ್ಯಜೀವಿ ಉಪಟಳ ತಡೆಗೆ ಸೋಲಾರ್ ತೂಗುಬೇಲಿ ಮಾದರಿ ಯೋಜನೆ: ಸಿಎಜಿ ಪ್ರತಿನಿಧಿ
0
ನವೆಂಬರ್ 03, 2022
Tags